Uttarakannada| ಜಿಲ್ಲೆಗೂ ಗೃಹ ಆರೋಗ್ಯ ಯೋಜನೆ ವಿಸ್ತರಣೆ- ಹೇಗಿರಲಿದೆ ಆರೋಗ್ಯ ಸೇವೆ?
Uttarakannada| ಜಿಲ್ಲೆಗೂ ಗೃಹ ಆರೋಗ್ಯ ಯೋಜನೆ ವಿಸ್ತರಣೆ- ಹೇಗಿರಲಿದೆ ಆರೋಗ್ಯ ಸೇವೆ?
ಕಾರವಾರ :- ಗುಡ್ಡ ಬೆಟ್ಟಗಳ ನಾಡು ಉತ್ತರ ಕನ್ನಡ (uttara kannada) ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಹೋರಾಟ ದಶಕಗಳದ್ದು. ಉತ್ತಮ ಚಿಕಿತ್ಸೆ,ವೈದ್ಯಕೀಯ ಸೇವೆಗಳಿಂದ ವಂಚಿತವಾಗಿರುವ ಜಿಲ್ಲೆಯಲ್ಲಿ ಇದೀಗ
ರಾಜ್ಯ ಸರ್ಕಾರವು ಕೋಲಾರದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದ 'ಗೃಹ ಆರೋಗ್ಯ' ಯೋಜನೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲೂ ಜಾರಿಗೆ ತರಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ:-Doctor :ವರ್ಷದಲ್ಲಿ ಒಂದೇ ಹೆರಿಗೆ ಮಾಡಿಸಿದ ಸರ್ಕಾರಿ ವೈದ್ಯ
ಈ ಯೋಜನೆ ಜಾರಿಗೆ ತರಲು ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡುವ ಕಾರ್ಯ ನಡೆಸಲಾಗಿದೆ.
ಏನಿದು ಗೃಹ ಆರೋಗ್ಯ ಯೋಜನೆ?
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಆರೋಗ್ಯ ಯೋಜನೆ ರಾಜ್ಯದಾದ್ಯಂತ ಜಾರಿಗೆ ಬರುತ್ತಿದೆ. ಗ್ರಾಮೀಣ ಜನರ ಆರೋಗ್ಯ ಸುಧಾರಿಸುವ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಗೃಹ ಆರೋಗ್ಯ ಯೋಜನೆ ಪ್ರಾಯೋಕಿಕವಾಗಿ ನಡೆಸಲಾಗುತ್ತಿದೆ.
ಇದನ್ನೂ ಓದಿ:-Doctor , nurse ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನ! ಏನಿದು ಘಟನೆ?
ಹಳ್ಳಿ ಪ್ರದೇಶಗಳ ಜನರ ಆರೋಗ್ಯದ ಮಟ್ಟ ಸುಧಾರಿಸುವ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಯೋಜನೆಯೇ ಗೃಹ ಆರೋಗ್ಯ ಯೋಜನೆ. ಗೃಹ ಆರೋಗ್ಯ ಯೋಜನೆ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಬಿಪಿ, ಶುಗರ್ ಇದ್ದವರಿಗೆ ಇನ್ನು ಮುಂದೆ ಮನೆಗೆ ಔಷಧಗಳನ್ನು ಉಚಿತವಾಗಿ ತಲುಪಿಸಲಾಗುತ್ತದೆ.
ಈ ಯೋಜನೆಯಡಿ 16 ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಗುರುತಿಸಿ, ಚಿಕಿತ್ಸೆ ಒದಗಿಸಲು ಅವಕಾಶವಿದೆ.
ಮಧುಮೇಹ, ಅಧಿಕ ರಕ್ತದೊತ್ತಡ (ಬಿ.ಪಿ), ಅಸ್ತಮಾ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್, ಮಾನಸಿಕ ಕಾಯಿಲೆ ಸೇರಿದಂತೆ ಈ ಪಟ್ಟಿಯಲ್ಲಿರುವ ಕಾಯಿಲೆಗಳಿರುವವರಿಗೆ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುವ ಜೊತೆಗೆ ನಿರಂತರವಾಗಿ ಆರೋಗ್ಯ ಸಲಹೆ ನೀಡಲಾಗುತ್ತದೆ.
ಇದನ್ನೂ ಓದಿ:-Karwar:ಶಿರಸಿಯ ಸರ್ಕಾರಿ ಆಸ್ಪತ್ರೆ ಜಿಲ್ಲಾಸ್ಪತ್ರೆಯಾಗಿ ಪರಿವರ್ತನೆ -ಆರೋಗ್ಯ ಸಚಿವರು ಸಭೆಯಲ್ಲಿ ಹೇಳಿದ್ದೇನು?
ಉತ್ತರ ಕನ್ನಡ ಜಿಲ್ಲೆಯಲ್ಲಿ 14.24 ಲಕ್ಷದಷ್ಟು ಜನಸಂಖ್ಯೆ ಇದ್ದು, ಗೃಹ ಆರೋಗ್ಯ ಯೋಜನೆಯಡಿ 30 ವರ್ಷ ಮೇಲ್ಪಟ್ಟವರಿಗೆ ಮಾತ್ರ ಆರೋಗ್ಯ ಸೇವೆ, ಸಲಹೆ ನೀಡಲು ಸಿದ್ಧತೆ ನಡೆದಿದೆ. 30 ವರ್ಷ ಮೇಲ್ಪಟ್ಟವರ ಸಮೀಕ್ಷೆ ನಡೆಸಿದ್ದು 9 ಲಕ್ಷದಷ್ಟು ಜನರು ಇರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.
ಗುಡ್ಡಗಾಡು ಪ್ರದೇಶವೇ ಹೆಚ್ಚಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹ ಆರೋಗ್ಯ ಯೋಜನೆ ಪರಿಣಾಮಕಾರಿ ಜಾರಿಗೆ ಸವಾಲುಗಳಿವೆ.
ಜಿಲ್ಲೆಯಲ್ಲಿ 1,200ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿದ್ದು ಈಗಾಗಲೆ ಮನೆ ಮನೆ ಭೇಟಿ ನೀಡುವ ಮೂಲಕ ಯೋಜನೆಯ ಪ್ರಾಥಮಿಕ ಸಂಗತಿಗಳ ಬಗ್ಗೆ ಜನರಿಗೆ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಬಹುಪಾಲು ಗ್ರಾಮಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿರುವ ಕಾರಣದಿಂದ ಯೋಜನೆ ಜಾರಿಮಾಡಲು ಸಮಸ್ಯೆಗಳಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ರವರು ಮಾಹಿತಿ ನೀಡಿದ್ದಾರೆ.

ಗೃಹ ಆರೋಗ್ಯ ಯೋಜನೆ ಜಾರಿಗೆ ಮುನ್ನ ಜಿಲ್ಲೆಯಲ್ಲಿ ಆಶಾ ಇತರ ಆರೋಗ್ಯ ಕಾರ್ಯಕರ್ತರು 30 ವರ್ಷ ಮೇಲ್ಪಟ್ಟವರ ಆರೋಗ್ಯ ಮಾಹಿತಿ ಸಂಗ್ರಹಿಸಿದ್ದಾರೆ. ಅವುಗಳ ಪೈಕಿ ಜಿಲ್ಲೆಯ ಒಟ್ಟಾರೆ ಜನಸಂಖ್ಯೆಯ ಶೇ 5ರಷ್ಟು (ಅಂದಾಜು 72 ಸಾವಿರ) ಜನರಿಗೆ ಸಕ್ಕರೆ ಕಾಯಿಲೆ ಇರಬಹುದು ಎಂದು ಅಂದಾಜಿಸಲಾಗಿದೆ. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚಿದೆ ಈ ಯೋಜನೆಯಿಂದ ಹೆಚ್ಚಿನ ಲಾಭ ಜನರಿಗೆ ಆಗಲಿದೆ ಎಂಬುದು ಆರೋಗ್ಯ ಇಲಾಖೆ ನಿರೀಕ್ಷೆಯಾಗಿದೆ.