Joida: ಒಂದು ತೆಂಗಿನಕಾಯಿಗಾಗಿ ನಾದಿನಿಯ ಹ** ಮಾಡಿದ ಬಾವ
Joida: ಒಂದು ತಗಿನಕಾಯಿಗಾಗಿ ನಾದಿನಿಯ ಹತ್ಯೆ ಮಾಡಿದ ಬಾವ
ಕಾರವಾರ /joida:- ಮೂಢನಂಬಿಕೆಗೆ ಸಾಕಷ್ಟು ಕೊಲೆಗಳು ನಡೆದಿರೋದು ನಾವು ಕೇಳಿದ್ದೇವೆ. ಇದೀಗ ಇಂತದ್ದೇ ಪ್ರಕರಣವೊಂದು ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದಲ್ಲೂ ವರದಿಯಾಗಿದೆ. ಮನೆ ದೇವರಿಗಾಗಿ ಅಣ್ಣನೇ ತನ್ನ ಸ್ವಂತ ತಮ್ಮನ ಪತ್ನಿಯನ್ನು ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದು, ಪೊಲೀಸರ ಕೈಯಿಂದ ತಪ್ಪಿಸಿ ಪರಾರಿಯಾಗಿದ್ದಾನೆ.
ಹೌದು, ತೆಂಗಿನ ಕಾಯಿ ರೂಪದಲ್ಲಿ ಪೂಜಿಸಲ್ಪಡುವ ದೇವರನ್ನು ತಮ್ಮ ತಮ್ಮ ಮನೆಯಲ್ಲಿ ಇಡಬೇಕೆಂದು ಹಲವು ತಿಂಗಳಿನಿಂದ ನಡೆಯುತ್ತಿದ್ದ ಜಗಳ ಕೊನೆಯಲ್ಲಿ ಕೊಲೆಯಲ್ಲಿ ಮುಕ್ತಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದ ಆಮಶೇತ-ಕೊಲೇಮಾಳ ಗ್ರಾಮದಲ್ಲಿ ನಡೆದಿದೆ.
RAMNAGAR|ಶೌಚಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆ.
ದೊಂಡು ಗಂಗಾರಾಮ ವರಕ (55) ಎಂಬಾತ ತನ್ನ ಸ್ವಂತ ತಮ್ಮನ ಪತ್ನಿ ಭಾಗ್ಯಶ್ರೀ ಸೋನು ವರಕ (35), ಎಂಬವರ ತಲೆಗೆ ಸಲಾಕೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ತೆಂಗಿನ ಕಾಯಿ ರೂಪದಲ್ಲಿ ತಮ್ಮ ಮನೆ ದೇವರು ಯಾರ ಮನೆಯಲ್ಲಿ ಇರುತ್ತೋ ಅವರಿಗೆ ಒಳಿತಾಗುತ್ತೆ ಎಂಬ ನಂಬಿಕೆ ಅಣ್ಣ ದೊಂಡು ಹಾಗೂ ತಮ್ಮ ಸೋನುವಿನಲ್ಲಿತ್ತು. ಇದಕ್ಕಾಗಿ ಅಣ್ಣ ತಮ್ಮಂದಿರ ನಡುವೆ ಸಾಕಷ್ಟು ಬಾರಿ ಗಲಾಟೆಯೂ ನಡೆದಿತ್ತು.
ಆದರೆ, ಕಳೆದ ಕೆಲವು ದಿನಗಳಿಂದ ಆರೋಪಿ ದೊಂಡು ಗಂಗಾರಾಮ ಮಗನಿಗೆ ಹುಷಾರಿರಲಿಲ್ಲ. ಮನೆಯಲ್ಲಿ ದೇವರು ಇರದ ಕಾರಣದಿಂದಲೇ ಮಗನಿಗೆ ಹುಷಾರಿಲ್ಲ ಅಂದುಕೊಂಡಿದ್ದ ಆರೋಪಿ ತನ್ನ ನಾದಿನಿಯ ತಲೆಗೆ ಸಲಾಕೆ ಬೀಸಿ ಕೊಂದಿದ್ದಾನೆ.
Joida news: ಈಜು ಕೊಳಕ್ಕೆ ಬಿದ್ದು ಮಗು ಸಾ**
ಹುಷಾರಿಲ್ಲದ ತನ್ನ ಮಗನ ಸಲುವಾಗಿ ದೇವರ ತೆಂಗಿನಕಾಯಿ ಕೊಡುವಂತೆ ಸಾಕಷ್ಟು ಸಮಯಗಳಿಂದ ದೊಂಡು ಬೇಡಿಕೆಯಿಟ್ಟಿದ್ದರೂ ತಮ್ಮನ ಕುಟುಂಬ ನೀಡಲು ತಯಾರು ಇರದ ಕಾರಣ ಸಾಕಷ್ಟು ಸಮಯಗಳಿಂದ ಜಗಳ ನಡೆಯುತ್ತಿತ್ತು.
ತಮ್ಮನನ್ನು ಎತ್ತಿಕಟ್ಟಿ ತೆಂಗಿನಕಾಯಿ ಕೊಡದೆ ನಾದಿನಿ ಸತಾಯಿಸುತ್ತಿದ್ದಾಳೆ ಎಂದು ಬೇಸರಗೊಂಡ ಆರೋಪಿ ದೊಂಡು ಗಂಗಾರಾಮ ವರಕ ಬೇಸರಗೊಂಡಿದ್ದ. ಇಂದು ಆರೋಪಿಯ ತಮ್ಮ ಗೋವಾಕ್ಕೆ ಹೋಗಿದ್ದ ಸಂದರ್ಭ ತಮ್ಮನ ಮನೆಗೆ ಸಲಾಕೆ ಹಿಡಿದು ಹೋಗಿದ್ದ ಆರೋಪಿ ದೊಂಡು ತಮ್ಮನ ಪತ್ನಿ ಭಾಗ್ಯಶ್ರೀ ಎದುರು ಸಿಕ್ಕಿದ್ದೇ ತಡ ಸಲಾಕೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಉತ್ತರಕನ್ನಡ ಜಿಲ್ಲಾ ಎಸ್ಪಿ ದೀಪನ್ ಎಂ.ಎನ್, ದಾಂಡೇಲಿ ಡಿವೈಎಸ್‌ಪಿ ಶಿವಾನಂದ, ಜೊಯಿಡಾ ಸಿಪಿಐ ಚಂದ್ರಶೇಖರ ಹರಿಹರ, ರಾಮನಗರ ಪಿಎಸ್‌ಐ ಮಹಂತೇಶ್ ನಾಯಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧಿಸಿ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಆರೋಪಿಗಾಗಿ ಶೋಧ ಮುಂದುವರಿದಿದೆ.
ಒಟ್ಟಿನಲ್ಲಿ ಅನ್ಯೋನ್ಯವಾಗಿರಬೇಕಿದ್ದ ಅಣ್ಣ ತಮ್ಮಂದಿರ ಕುಟುಂಬ ಮೂಢನಂಬಿಕೆಗೆ ಬಲಿಯಾಗಿ ಕೊಲೆಯ ಜತೆ ಸಂಬಂಧವೂ ಕೊನೆಗೊಂಡಿರೋದು ವಿಪರ್ಯಾಸವೇ ಸರಿ.