Sirsi |ಶಿರಸಿ ನಗರ ಧೋಳೋ ಧೂಳು -ಕೊಡಹಿಡಿದು ರಸ್ತೆಗೆ ನೀರು ಹಾಕಿದ ಜನ!
ಶಿರಸಿ ನಗರದಲ್ಲಿ ಹಾಳಾದ ರಸ್ತೆಗಳಿಂದ ಧೂಳು ಹೆಚ್ಚಾಗಿ ಜನ ಕಷ್ಟ ಅನುಭವಿಸುತ್ತಿದ್ದಾರೆ. ಇಲಾಖೆಯ ಕ್ರಮವಿಲ್ಲದ ಕಾರಣ ಸ್ಥಳೀಯರು ಕೊಡ ಹಿಡಿದು ನೀರು ಹಾಕಿ ದೂಳು ನಿಯಂತ್ರಣಕ್ಕೆ ಮುಂದಾದ ಘಟನೆ. ಸಂಪೂರ್ಣ ಮಾಹಿತಿ ಓದಿ.

Advertisement
ಪ್ರಕೃತಿ ಮೆಡಿಕಲ್ ,ಕಾರವಾರ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi)ಯಲ್ಲಿ ಮಳೆಗಾಲದಲ್ಲಿ ಗುಂಡು ಬಿದ್ದ ರಸ್ತೆಗಳಲ್ಲಿ ಸಂಜರಿಸಿ ಜೀವ ಹಣ್ಣಾಗಿಸಿಕೊಂಡಿದ್ದ ಶಿರಸಿ ಜನರಿಗೆ ಇದೀಗ ನಗರ ಪ್ರದೇಶದಲ್ಲಿ ಹಾಳುಬಿದ್ದ ಲೋಕೋಪಯೋಗಿ ಇಲಾಖೆಯ ಹೊಂಡ ತುಂಬಿದ ರಸ್ತೆಯಿಂದ ದೂಳು ಆವರಿಸುತಿದ್ದು ಜನ ರಸ್ತೆಯ ಪಕ್ಕದಲ್ಲಿ ನಿಲ್ಲಲಾಗದ ಸ್ಥಿತಿ ಏರ್ಪಟ್ಟಿದೆ .
ಸದ್ಯ ಮಳೆ ಬಿಡುವು ಕೊಟ್ಟಿದ್ದು ಇದೀಗ ಹೊಂಡ ತುಂಬಿದ ರಸ್ತೆಗಳು ದೂಳುಮಯವಾಗಿದೆ.ಇದರಿಂದ ಬೇಸತ್ತ ಜನ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ಇದೀಗ ಸ್ಥಳೀಯ ಜನರು ಕೊಡ ಹಿಡಿದು ನೀರು ತುಂಬಿ ರಸ್ತೆಗಳಿಗೆ ಹಾಕುತಿದ್ದಾರೆ. ನಗರದ ಹಲವು ಭಾಗದಲ್ಲಿ ರಸ್ತೆ ದೂಳಿನಿಂದ ತುಂಬಿದ್ದು ಈಭಾಗದಲ್ಲಿ ಜನರೇ ಅಕಾಡಕ್ಕಿಳಿದು ನೀರು ಹಾಕುವ ಮೂಲಕ ದೂಳಿನಿಂದಿ ಮುಕ್ತಿ ಪಡೆಯಲು ಪ್ರಾಯಾಸ ಪಡುತಿದ್ದಾರೆ.