vibhuthi falls|ವಿಭೂತಿ ಜಲಪಾತ ವೀಕ್ಷಣೆಗೆ ಅವಕಾಶ -ಏನಿದರ ವಿಶೇಷ
Kannadavani falls |ವಿಭೂತಿ ಜಲಪಾತ ವೀಕ್ಷಣೆಗೆ ಅವಕಾಶ -ಏನಿದರ ವಿಶೇಷ
ಕಾರವಾರ :- ಭಾರೀ ಮಳೆಯಿಂದಾಗಿ(rain) ಕಳೆದ ಜೂನ್‌ನಿಂದ ಅಂಕೋಲದ ವಿಭೂತಿ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿತ್ತು.
ಇದೀಗ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಗ್ರಾಮ ಅರಣ್ಯ ಸಮಿತಿ, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಒತ್ತಾಯಕ್ಕೆ ಸ್ಪಂದಿಸಿ, ಹೊಸಕಂಬಿ ವಲಯ ಅರಣ್ಯ ಅಧಿಕಾರಿ ದೀಪಕ ನಾಯ್ಕ ಅವರು ಪ್ರವಾಸಿಗರಿಗೆ ಅವಕಾಶ ಕಲ್ಪಿಸಿದ್ದಾರೆ.
ಯಾವುದೇ ಅನಾಹುತ ಸಂಭವಿಸದಂತೆ ನೀರು ಇಳಿಯದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ. ಇದರಿಂದ ಪ್ರವಾಸಿಗರಲ್ಲಿ ಸಂತಸ ಮೂಡಿದೆ.
ವಿಭೂತಿ ಜಲಪಾತದ ವಿಶೇಷ ಏನು?

ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಂದು ಜಲಪಾತವೂ ಪ್ರಕೃತಿ ವೈಶಿಷ್ಟತ್ರ್ಯದ ವಿಸ್ಮಯಗಳಿಂದ ಕಂಗೊಳಿಸುತ್ತವೆ. ಇಂತಹ ಜಲಪಾತಗಳಲ್ಲಿವಿಭೂತಿ ಫಾಲ್ಸ್ ಕೂಡ ಒಂದು.
Ankola:ಬ್ರಿಟೀಷರ ಕಾಲದಿಂದ ಪೂಜೆ ಗೈಯುತ್ತಿರುವ ಗೋಡೆ ಗಣಪನ ಶಕ್ತಿ ಏನು ಗೊತ್ತಾ ?
ವಿಭೂತಿ ಜಲಪಾತವು ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಈ ಜಲಪಾತದಲ್ಲಿನ ನೀರು ಯಾಣದ ಬಳಿ ಸುಣ್ಣದ ಕಲ್ಲುಗಳಿಂದ ಬರುತ್ತದೆ ಆದ್ದರಿಂದ ಈ ಜಲಪಾತವನ್ನು “ವಿಭೂತಿ ಜಲಪಾತ” ಎಂದು ಕರೆಯಲಾಗುತ್ತದೆ.
Ankola:ಕೇಣಿ ಪಬ್ಲಿಕ್ ಹಿಯರಿಂಗ್|ಹಣಪಡೆದು ಬಂದವರಿಗೆ ಮೀನುಗಾರರು ತರಾಟೆ ಸಭೆಯಲ್ಲಿ ಏನಾಯ್ತು?
ತಾಲೂಕಿನ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಅಚವೆ ಗ್ರಾಪಂ ವ್ಯಾಪ್ತಿಯ ಮಾಬಗಿಯಲ್ಲಿಈ ಜಲಪಾತ ವರ್ಷದ ಎಲ್ಲಾದಿನಗಳಲ್ಲಿಯೂ ನೀರು ಹರಿಯುತ್ತಿದ್ದರೂ ಮಳೆಗಾಲದಲ್ಲಿಇದರ ಸೌಂದರ್ಯ ಇನ್ನು ಹೆಚ್ಚಾಗಿ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತದೆ. ಇದು ತಾಲೂಕು ಕೇಂದ್ರದಿಂದ 45 ಕಿಮೀ ದೂರದಲ್ಲಿದೆ.
200 ಅಡಿಗೂ ಎತ್ತರದಿಂದ ದುಮ್ಮಿಕ್ಕುವ ಈ ಜಲಪಾತ ನಿಸರ್ಗ ಹಾಗೂ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿನ ಪಕ್ಕದಲ್ಲೇ ವಿಶ್ವ ಪ್ರಸಿದ್ದ ಯಾಣ ಕೂಡ ಇದ್ದು ವಿಭೂತಿ ಜಲಪಾತದ ಜೊತೆ ಯಾಣ ಕ್ಷೇತ್ರವನ್ನು ಸಹ ನೋಡಬಹುದು.
ಈ ಫಾಲ್ಸ್ ಗೆ ಟ್ರಿಪ್ ಪ್ಲಾನ್ ಮಾಡುವುದಾದರೇ ಮೊದಲು ಕುಮಟ ದ ಗೋಕರ್ಣ ,ನಂತರ ಯಾಣ ,ಅದರ ನಂತರ ವಿಭೂತಿ ಪಾಲ್ಸ್ ನೋಡಬಹುದು. ಗೋಕರ್ಣದಿಂದ ಈ ಪ್ರದೇಶಕ್ಕೆ ಒಂದೇ ರಸ್ತೆ ಮಾರ್ಗ ಸಹ ಇದೆ.