Yallapur :ಅತ್ತಿ ಮರ ಬಿದ್ದ ದುರ್ಘಟನೆ-ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ.ವಿವರ ನೋಡಿ
Yallapur :ಅತ್ತಿ ಮರ ಬಿದ್ದ ದುರ್ಘಟನೆ-ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ.ವಿವರ ನೋಡಿ
Yallapur news :-ಯಲ್ಲಾಪುರದ ಡೋಮಗೇರಿಯ ಕಿರುವತ್ತಿಯ ಅಂಗನವಾಡಿ ಬಳಿ ಅತ್ತಿಯ ಮರ ಕುಸಿದು ಬಿದ್ದು ಗರ್ಭಿಣಿ ಮಹಿಳೆ ಸ್ಥಳದಲ್ಲೇ ಸಾವು ಕಂಡಿದ್ದು , ಇನ್ನೋರ್ವ ಬಾಲಕಿ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲೇ ಸಾವು ಕಂಡಿದ್ದಾರೆ.
Yallapur: ಭೀಕರ ಬಸ್ ಅಪಘಾತ ಸ್ಥಳದಲ್ಲೇ ಮೂವರು ಸಾವು ಚಿಕ್ಕ ಮಕ್ಕಳು ಸೇರಿ ಹಲವರಿಗೆ ಗಂಭೀರ ಗಾಯ
ಯಲ್ಲಾಪುರ (yallapur) ತಾಲೂಕಿನ ಡೊಮಗೇರಿ ಸಾವಿತ್ರಿ ಬಾಬು ಖರಾತ್ (28), ಸಾವಿಗೀಡಾದ 5 ತಿಂಗಳ ಗರ್ಭಿಣಿ ಮಹಿಳೆಯಾಗಿದ್ದು , ಸ್ವಾತಿ ಬಾಬು ಖರಾತ್ (16) ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ಮೃತಪಟ್ಟ ಬಾಲಕಿಯಾಗಿದ್ದಾರೆ.
ಉಳಿದಂತೆ ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಶಾಂಭವಿ ಬಾಬು ಖರಾತ್ (4) ಗಂಭೀರವಾಗಿ ಗಾಯವಾಗಿದ್ದರೇ ಸಾನ್ವಿ ಬಾಬು ಕೊಕರೆ (5), ವಿನಯ ಲಕ್ಕು ಕೊಕರೆ (5) ಮತ್ತು ಅನುಶ್ರೀ ಮಾಂಬು ಕೊಕರೆ (5) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
Yallapur: ಹಳ್ಳದಲ್ಲಿ ಕೊಚ್ಚಿಹೋದ ಓರ್ವ ಯುವಕನ ಶವ ಪತ್ತೆ
ಸಾವಿತ್ರಿ ಬಾಬು ಖರಾತ್ ರವರು ಅಂಗನವಾಡಿಯಿಂದ ಮಕ್ಕಳನ್ನು ಕರೆದುಕೊಂಡು ಮನೆಗೆ ಮರಳುತ್ತಿದ್ದ ವೇಳೆ ದಾರಿಯಲ್ಲಿದ್ದ ಅತ್ತಿ ಮರ ದಿಢೀರ್ ಕುಸಿತವಾಗಿದ್ದರಿಂದ ಮರದ ಅಡಿ ಸಿಲುಕಿ ದಾರುಣ ಸಾವು ಕಂಡಿದ್ದರು. ಇನ್ನು ಈಕೆಯ ಪಕ್ಕದ ಮನೆಯ ಬಾಲಕಿ ಸ್ವಾತಿ ಕಿರುವತ್ತಿಯ ಮಾರ್ಗ ಮಧ್ಯದಲ್ಲಿ ಅಸುನೀಗಿದ್ದಾರೆ.
ಉಳಿದಂತೆ ಗಂಭೀರ ಗಾಯಗೊಂಡವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ರವಾನೆ ಮಾಡಿದ್ದು ,ಉಳಿದವರಿಗೆ ಯಲ್ಲಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.