ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Yallapur :ಅತ್ತಿ ಮರ ಬಿದ್ದ ದುರ್ಘಟನೆ-ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ.ವಿವರ ನೋಡಿ

Yallapur tragedy: An Atti tree collapsed near an Anganwadi in Kiravatti, killing a 5-month pregnant woman and a teenage girl. Seven others, including children, were injured in the accident. Serious cases shifted to Hubballi hospital.
08:14 PM Sep 08, 2025 IST | ಶುಭಸಾಗರ್
Yallapur tragedy: An Atti tree collapsed near an Anganwadi in Kiravatti, killing a 5-month pregnant woman and a teenage girl. Seven others, including children, were injured in the accident. Serious cases shifted to Hubballi hospital.

Yallapur :ಅತ್ತಿ ಮರ ಬಿದ್ದ ದುರ್ಘಟನೆ-ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ.ವಿವರ ನೋಡಿ

Advertisement

Yallapur news  :-ಯಲ್ಲಾಪುರದ ಡೋಮಗೇರಿಯ ಕಿರುವತ್ತಿಯ ಅಂಗನವಾಡಿ ಬಳಿ ಅತ್ತಿಯ ಮರ ಕುಸಿದು ಬಿದ್ದು ಗರ್ಭಿಣಿ ಮಹಿಳೆ ಸ್ಥಳದಲ್ಲೇ ಸಾವು ಕಂಡಿದ್ದು , ಇನ್ನೋರ್ವ ಬಾಲಕಿ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲೇ ಸಾವು ಕಂಡಿದ್ದಾರೆ.

Yallapur: ಭೀಕರ ಬಸ್ ಅಪಘಾತ ಸ್ಥಳದಲ್ಲೇ ಮೂವರು ಸಾವು ಚಿಕ್ಕ ಮಕ್ಕಳು ಸೇರಿ ಹಲವರಿಗೆ ಗಂಭೀರ ಗಾಯ

ಯಲ್ಲಾಪುರ (yallapur) ತಾಲೂಕಿನ ಡೊಮಗೇರಿ ಸಾವಿತ್ರಿ ಬಾಬು ಖರಾತ್ (28), ಸಾವಿಗೀಡಾದ 5 ತಿಂಗಳ ಗರ್ಭಿಣಿ ಮಹಿಳೆಯಾಗಿದ್ದು ,  ಸ್ವಾತಿ ಬಾಬು ಖರಾತ್ (16) ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ಮೃತಪಟ್ಟ ಬಾಲಕಿಯಾಗಿದ್ದಾರೆ.

Advertisement

ಉಳಿದಂತೆ  ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಶಾಂಭವಿ ಬಾಬು ಖರಾತ್ (4) ಗಂಭೀರವಾಗಿ ಗಾಯವಾಗಿದ್ದರೇ ಸಾನ್ವಿ ಬಾಬು ಕೊಕರೆ (5), ವಿನಯ ಲಕ್ಕು ಕೊಕರೆ (5) ಮತ್ತು ಅನುಶ್ರೀ ಮಾಂಬು ಕೊಕರೆ (5) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Yallapur: ಹಳ್ಳದಲ್ಲಿ ಕೊಚ್ಚಿಹೋದ ಓರ್ವ ಯುವಕನ ಶವ ಪತ್ತೆ 

ಸಾವಿತ್ರಿ ಬಾಬು ಖರಾತ್ ರವರು ಅಂಗನವಾಡಿಯಿಂದ ಮಕ್ಕಳನ್ನು ಕರೆದುಕೊಂಡು ಮನೆಗೆ ಮರಳುತ್ತಿದ್ದ ವೇಳೆ ದಾರಿಯಲ್ಲಿದ್ದ  ಅತ್ತಿ ಮರ ದಿಢೀರ್‌ ಕುಸಿತವಾಗಿದ್ದರಿಂದ ಮರದ ಅಡಿ ಸಿಲುಕಿ ದಾರುಣ ಸಾವು ಕಂಡಿದ್ದರು. ಇನ್ನು ಈಕೆಯ ಪಕ್ಕದ ಮನೆಯ ಬಾಲಕಿ  ಸ್ವಾತಿ ಕಿರುವತ್ತಿಯ ಮಾರ್ಗ ಮಧ್ಯದಲ್ಲಿ ಅಸುನೀಗಿದ್ದಾರೆ.

 ಉಳಿದಂತೆ ಗಂಭೀರ ಗಾಯಗೊಂಡವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ರವಾನೆ ಮಾಡಿದ್ದು ,ಉಳಿದವರಿಗೆ ಯಲ್ಲಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Hubballi hospital treatmentKiravatti newsTree collapse YallapurUttara Kannada breaking newsYallapur accidentYallapur latest updatesYallapur news
Advertisement
Next Article
Advertisement