Yallapur|ಯಲ್ಲಾಪುರದ ಬೀಗಾರ ಗ್ರಾಮದಲ್ಲಿ ಭೂ ಕುಸಿತ
Yallapur|ಯಲ್ಲಾಪುರದ ಬೀಗಾರ ಗ್ರಾಮದಲ್ಲಿ ಭೂ ಕುಸಿತ
ಕಾರವಾರ:- ಉತ್ತರ ಕನ್ನಡ (uttara kannada) ಜಿಲ್ಲೆಯಲ್ಲಿ ಮತ್ತೆ ಭೂ ಕುಸಿತ ಮುಂದುವರೆದಿದೆ. ಜಿಲ್ಲೆಯ ಯಲ್ಲಾಪುರದ ವಜ್ರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೀಗಾರ ಗ್ರಾಮದಲ್ಲಿ ಭೂ ಕುಸಿತವಾಗಿದೆ.
ಇಲ್ಲಿನ ತಾರಗಾರ- ಬೀಗಾರ ಮತ್ತು ಬಾಗಿನ ಕಟ್ಟಾ ಗ್ರಾಮ ಸಂಪರ್ಕಿಸುವ ರಸ್ತೆ ತಳಭಾಗದಲ್ಲಿ ಭೂಮಿ ಕುಸಿತ ಕಂಡಿದೆ.ಹೆಚ್ಚಿನ ಮಳೆಯಾದರೇ ಸಂಪೂರ್ಣ ರಸ್ತೆ ಕುಸಿಯುವ ಆತಂಕ ತಂದೊಡ್ಡಿದೆ.
ಇದನ್ನೂ ಓದಿ:-Yallapur: ಭೀಕರ ಬಸ್ ಅಪಘಾತ ಸ್ಥಳದಲ್ಲೇ ಮೂವರು ಸಾವು ಚಿಕ್ಕ ಮಕ್ಕಳು ಸೇರಿ ಹಲವರಿಗೆ ಗಂಭೀರ ಗಾಯ
ಈ ಭಾಗದಲ್ಲಿ ಆರು ಅಡಿಗೂ ಹೆಚ್ಚು ಭಾಗ ಮಣ್ಣು ಕುಸಿತವಾಗಿದ್ದು ಕಾಂಕ್ರಿಟ್ ರೋಡ್ ಮಾತ್ರ ಉಳಿದುಕೊಂಡಿದೆ. ಮಳೆಯ ನೀರು ಕುಸಿತವಾದ ಜಾಗದಲ್ಲಿ ಝರಿಯಾಗಿ ಹರಿಯುತಿದ್ದು ಮತ್ತೆ ಭೂ ಕುಸಿತವಾಗುವ ಆತಂಕ ತಂದೊಡ್ಡಿದೆ.
ಮತ್ತೆ ಭೂ ಕುಸಿತವಾದಲ್ಲಿ ತಾತಗಾರ,ಬೀಗಾರ,ಬಾಗಿನ ಕಟ್ಟಾ ಗ್ರಾಮದ ಸಂಪರ್ಕ ಕಡಿತವಾಗುವ ಸಾಧ್ಯತೆ ಇದ್ದು ಕುಸಿದ ಭಾಗದ ರಸ್ತೆಯ ತಳಭಾಗದಲ್ಲಿ ಮನೆಗಳು ಸಹ ಇದ್ದು ಒಂದುವೇಳೆ ಮತ್ತೆ ಕುಸಿತವಾದರೇ ಮನೆಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ;-Karwar : ಸಮುದ್ರ ತೀರಕ್ಕೆ ತೇಲಿಬಂದ ಡಾಲ್ಪಿನ್ |ವಿಡಿಯೋ ನೋಡಿ
ಸದ್ಯ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತಿದ್ದು ಇನ್ನೂ ಒಂದು ದಿನ ರೆಡ್ ಅಲರ್ಟ ನೀಡಲಾಗಿದೆ. ಇನ್ನೆರೆಡು ದಿನದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆದರೇ ಮಳೆಯಿಂದಾಗಿ ಇದೀಗ ಪಶ್ಚಿಮ ಘಟ್ಟ ಭಾಗದಲ್ಲಿ ಭೂ ಕುಸಿತವಾಗುತಿದ್ದು ಮತ್ತೆ ಆತಂಕ ತಂದೊಡ್ಡಿದೆ.
