Noida:ವೃದ್ಧ ದಂಪತಿಗಳಿಗೆ ಕಾಯುವಂತೆ ಮಾಡಿದ ಅಧಿಕಾರಿಗಳಿಗೆ ನಿಂತು ಕೆಲಸ ಮಾಡುವ ಶಿಕ್ಷೆ ವಿಧಿಸಿದ ಸಿ.ಇ.ಓ
Noida :-ನೋಯ್ತಾ ಪ್ರಾಧಿಕಾರದ ಕಚೇರಿಗೆ ತಮ್ಮ ಕೆಲಸಕ್ಕಾಗಿ ಭೇಟಿ ನೀಡಿದ ವೃದ್ಧ ದಂಪತಿಗಳನ್ನು ಕಾಯುವಂತೆ ಮಾಡಿ ನಿರ್ಲಕ್ಷಿಸಿ ಸಮಸ್ಯೆ ಆಲಿಸದ ಅಧಿಕಾರಿಗಳಿಗೆ ಶಿಕ್ಷೆಯಾಗಿ ನೋಯ್ಡಾ ಪ್ರಾಧಿಕಾರದ C.E.O ಅಧಿಕಾರಿಗಳನ್ನು 30 ನಿಮಿಷಗಳ ಕಾಲ ನಿಂತ ಸ್ಥಿತಿಯಲ್ಲಿ ಕೆಲಸ ಮಾಡುವಂತೆ ಕಚೇರಿಯ ಸಿಬ್ಬಂದಿಗಳಿಗೆ ಶಿಕ್ಷೆ ( punishment) ನೀಡಿದ ಘಟನೆ ನಡೆದಿದೆ.
Murdeshwar ಪ್ರವಾಸಿ ತಾಣದಲ್ಲಿ ಸರಣಿ ಸಾವು- ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲು
ನೋಯ್ಡಾ (noida)ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಲೋಕೇಶ್ ಎಂ ಅವರು ಡಿಸೆಂಬರ್ 16 ರಂದು ವಸತಿ ಪ್ಲಾಟ್ ವಿಭಾಗದ ಅಧಿಕಾರಿಗಳಿಗೆ 50 ನಿಮಿಷಗಳ ಕಾಲ ವೃದ್ಧ ದಂಪತಿಯನ್ನು ನಿರ್ಲಕ್ಷಿಸಿದ್ದನ್ನು ಗಮನಿಸಿದ ನಂತರ ಶಿಕ್ಷೆ ವಿಧಿಸಿದ್ದಾರೆ.
ಏನಾಯ್ತು ಘಟನೆ?
ಸಿಸಿಟಿವಿ ದೃಶ್ಯಾವಳಿಗಳಲ್ಲಿ ವೃದ್ಧ ದಂಪತಿಗಳು ನಿಂತಿರುವುದು ಕಂಡುಬಂದಿದೆ ನಂತರ ಸಿಇಒ 15-20 ನಿಮಿಷಗಳ ಮೇಲೆ ಮತ್ತೆ ಸಿಸಿಟಿವಿಯನ್ನು ಪರಿಶೀಲಿಸಿದಾಗ, ವೃದ್ಧ ದಂಪತಿಗಳು ಇನ್ನೂ ನಿಂತಿರುವುದು ಕಂಡುಬಂದಿತು. ಆಗ ಅಧಿಕಾರಿಗಳು ಈ ವೃದ್ಧರನ್ನು ತಮ್ಮ ಸಿಬ್ಬಂದಿಗಳು ನಿರ್ಲಕ್ಷಿಸಿರುವುದನ್ನು ಅರಿತು ವಸತಿ ನಿವೇಶನ ಪ್ರಾಧಿಕಾರದ ಅಧುಕಾರಿಗಳಿಗೆ 30 ನಿಮಿಷ ನಿಂತು ಕೆಲಸ ಮಾಡುವ ಶಿಕ್ಷೆ ವಿಧಿಸಿದರು.
ವಿಡಿಯೋ ಲಿಂಕ್ ಇಲ್ಲಿದೆ:-
https://x.com/Gulab_Dharkar97/status/1868921046457626949?t=9TPQ3Y9T6_OkxhbYDcWnPg&s=19
ನೋಯ್ಡಾ ಪ್ರಾಧಿಕಾರದ ಕಚೇರಿಯೊಳಗಿನಲ್ಲಿ ನಡೆದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಧಿಕೃತ ಕರ್ತವ್ಯಗಳಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಸಿಬ್ಬಂದಿ ಶಿಕ್ಷೆಯಾಗಿ ನಿಂತಿರುವುದನ್ನು ತೋರಿಸುತ್ತದೆ.
ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವಾಗ, ಸಿಇಒ, "ನೀವು ನಿಂತಿರುವಾಗ ಕೆಲಸ ಮಾಡಿದಾಗ ಮಾತ್ರ, ವಯಸ್ಸಾದವರು ಎದುರಿಸುತ್ತಿರುವ ತೊಂದರೆಗಳನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ" ಎಂದು ಹೇಳಿದರು.
ಈಮೂಲಕ ಕಚೇರಿ ಸಿಬ್ಬಂದಿಗಳಿಗೆ ತಮ್ಮ ಕರ್ತವ್ಯದ ಅರಿವು ಮಾಡಿಸಿದರೇ ಮಾಡಿದ ತಪ್ಪಿಗೆ ಶಿಕ್ಷೆ ನೀಡಿ ಮತ್ತೆ ತಪ್ಪು ಮಾಡದಂತೆ ಎಚ್ಚರಿಕೆ ನೀಡಿದರು.