Pakistan:ಪಾಕ್‌ನಿಂದ ಜಮ್ಮು & ಕಾಶ್ಮೀರ, ಪೂಂಚ್, ಉರಿ ಮೇಲೆ ಶೆಲ್ ದಾಳಿ
Pakistan:ಪಾಕ್‌ನಿಂದ ಜಮ್ಮು & ಕಾಶ್ಮೀರ, ಪೂಂಚ್, ಉರಿ ಮೇಲೆ ಶೆಲ್ ದಾಳಿ
ಶ್ರೀನಗರ: ಗುರುವಾರ ನಡೆದ ಕ್ಷಿಪಣಿ ದಾಳಿ ಬಳಿಕ ಇದೀಗ ಪಾಕ್ (pak) ಕದನ ವಿರಾಮ ಉಲ್ಲಂಘಿಸಿ ಮತ್ತೆ ದಾಳಿ ಆರಂಭಿಸಿದ್ದು, ಜಮ್ಮು & ಕಾಶ್ಮೀರ, ಪೂಂಚ್, ಉರಿ ಸೇರಿ ಹಲವು ಕಡೆಗಳಲ್ಲಿ ಶೆಲ್ ದಾಳಿ ನಡೆಸಿದೆ.
ಭಾರತ (india) ಗುರುವಾರ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ದಾಳಿ ನಡೆಸಿದ್ದ ಭಾರತ ತಕ್ಕ ಉತ್ತರ ನೀಡಿತ್ತು. ಆದರೆ ಇದೀಗ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ, ಜಮ್ಮುವಿನ ಉರಿ ಪ್ರದೇಶದ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರೀ ಶೆಲ್ ದಾಳಿ ಆರಂಭಿಸಿದೆ
ಇದನ್ನೂ ಓದಿ:-Operation Sindoor : ಆಪರೇಷನ್ ಸಿಂಧೂರ್ ಇನ್ ಸೈಡ್ ಸ್ಟೋರಿ
ಜಮ್ಮು-ಕಾಶ್ಮೀರದ ಹಂದ್ವಾರ ಜಿಲ್ಲೆಯ ನೌಗಮ್ ಸೆಕ್ಟರ್, ಉರಿ, ಪೂಂಚ್ ಬಳಿಕ ಕುಪ್ವಾರಾ ಜಿಲ್ಲೆಯ ಜಿಲ್ಲೆಯ ಕರ್ನಾ ಮತ್ತು ತಂಗ್ಧರ್ ವಲಯಗಳಲ್ಲಿ ದಾಳಿ ನಡೆಸಿಸುತ್ತಿದೆ. ಇನ್ನು ಭಾರತದ ವಾಯು ಪಡೆ ಪಾಕಿಸ್ತಾನದ (pakistan) ಡ್ರೋನ್ ಹಾಗೂ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ.
ದಾಳಿ ಆರಂಭವಾಗುತ್ತಿದ್ದಂತೆ ಜಮ್ಮು ವಿಮಾನ ನಿಲ್ದಾಣ ಹಾಗೂ ಪಠಾಣ್‌ಕೋಟ್ ವಾಯುನೆಲೆಯ ಸೈರನ್‌ಗಳು ಮೊಳಗಿದವು. ನಿಯಂತ್ರಣ ರೇಖೆಯ ಉರಿ ವಲಯದಲ್ಲಿ ಪಾಕಿಸ್ತಾನ ನಡೆಸಿದ ದಾಳಿಗೆ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.