ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannda ಜಾತಿ ,ಅಧಿಕಾರ ಅಡ್ಡಿ 32 ಮಕ್ಕಳನ್ನು ಶಾಲೆ ಬಿಡಿಸಿ ಮನೆಯಲ್ಲಿರಿಸಿದ ಪೋಷಕರು! ಮುಂದಾಗಿದ್ದೇನು?

Uttara kannda news 28 November 2024:- ದೊಡ್ಡವರ ಜಾತಿ, ಧರ್ಮ ,ಅಧಿಕಾರದ ಪ್ರತಿಷ್ಟೆಗೆ ಶಾಲೆಗೆ ಹೋಗುತಿದ್ದ 32 ವಿದ್ಯಾರ್ಥಿಗಳು ಶಾಲೆಯನ್ನು ಬಿಟ್ಟು ಮನೆಯಲ್ಲೇ ಕಾಲ ಕಳೆಯುವಂತಾಗಿದ್ದು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಎಲ್ಲಿ ಅಂತೀರಾ ಈ ಸುದ್ದಿ ಓದಿ
12:24 PM Nov 28, 2024 IST | ಶುಭಸಾಗರ್

Uttara kannda news 28 November 2024:-ದೊಡ್ಡವರ ಜಾತಿ, ಧರ್ಮ ,ಅಧಿಕಾರದ ಪ್ರತಿಷ್ಟೆಗೆ ಶಾಲೆಗೆ ಹೋಗುತಿದ್ದ 32 ವಿದ್ಯಾರ್ಥಿಗಳು(student) ಶಾಲೆಯನ್ನು ಬಿಟ್ಟು ಮನೆಯಲ್ಲೇ ಕಾಲ ಕಳೆಯುವಂತಾಗಿದ್ದು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಎಲ್ಲಿ ಅಂತೀರಾ ಈ ಸುದ್ದಿ ಓದಿ.

Advertisement

ಹೌದು ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapura) ತಾಲೂಕಿನ ಕಿರುವತ್ತಿ ಗ್ರಾಮ ಪಂಚಾಯ್ತಿಯ ಬೈಲಂದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.

ಇಲ್ಲಿ ಒಂದರಿಂದ ಏಳನೇ ತರಗತಿವರೆಗೆ ಬೈಲಂದೂರು ,ಗುಡಂದೂರು ಸಿದ್ದಿವಾಡ ಗ್ರಾಮದ ಮರಾಠಿ, ಮುಸ್ಲಿಂ,ದಲಿತ ಆದಿವಾಸಿ ಸಿದ್ದಿ ಜನಾಂಗದ ಮಕ್ಕಳು ಕಲಿಯುತಿದ್ದಾರೆ.

ಒಟ್ಟು 126 ಮಕ್ಕಳಿರುವ ಶಾಲೆಗೆ ಮೂವತ್ತು ವರ್ಷದ ಸುದೀರ್ಘ ಇತಿಹಾಸವಿದೆ. ಆದರೇ ಶಾಲೆಯ SDMC ಸದಸ್ಯರ ಆಯ್ಕೆ ನಂತರ ಅಧ್ಯಕ್ಷರನ್ನು ತಮ್ಮವರನ್ನೇ ಮಾಡಬೇಕು ಎಂದು ಗುಡಂದೂರು ,ಸಿದ್ದಿವಾಡ ಗ್ರಾಮದ ಮುಸ್ಲಿಂ ದಲಿತ ಸಮುದಾಯದವರು ಪಟ್ಟು ಹಿಡಿದು ಗಲಾಟೆ ಮಾಡಿದ್ದಾರೆ.

Advertisement

ಇದನ್ನೂ ಓದಿ:-Yallapura |ಭಟ್ಟರ ಮನೆಯ ಮೂರು ಲಕ್ಷಕ್ಕೂ ಹೆಚ್ಚು ಮೌಲ್ಯದ ಅಡಿಕೆ ಕದ್ದ ಕಳ್ಳ ಜೈಲಿಗೆ

ಶಾಲೆಯ ಮುಖ್ಯ ಶಿಕ್ಷಕ ಇಮ್ತಿಯಾಜ್ ಸಹ ಕಾನೂನಿನ ರೀತಿ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದರೂ ಕೇಳದ ಇವರು ಪ್ರತಿ ಬಾರಿ ಬೈಲಂದೂರು ಗ್ರಾಮದವರೇ ಅಧ್ಯಕ್ಷರಾಗುತಿದ್ದಾರೆ ತಮ್ಮವರನ್ನ ಮಾಡದಿದ್ದರೇ ತಾವು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದು 32 ಮಕ್ಕಳನ್ನು ಶಾಲೆ ಬಿಡಿಸಿ ಕಳೆದ ಒಂದೂವರೆ ತಿಂಗಳಿಂದ ಮನೆಯಲ್ಲಿ ಇರುವಂತೆ ಮಾಡಿದ್ದಾರೆ.

"ನಾವು ಮಕ್ಕಳಿಗೆ ಶಾಲೆಗೆ ಮರಳಿ ತರಿಸಲು ಎಲ್ಲಾ ಪ್ರಯತ್ನ ಮಾಡಿದ್ದೇವೆ. ಆದರೇ ಪೋಷಕರು ಯಾವುದೇ ಮಾತು ಕೇಳುತ್ತಿಲ್ಲ.ಇನ್ನೇನು ಮೂರು ತಿಂಗಳಲ್ಲಿ ಪರೀಕ್ಷೆ ಬರಲಿದೆ ಅಲ್ಲಿವರೆಗೆಯಾದರೂ ಮಕ್ಕಳನ್ನು ಶಾಲೆಗೆ ಕಳಿಸಲು ಕೇಳಿಕೊಂಡಿದ್ದೇವೆ ಆದರೂ ಅವರ ಹಟ ಬಿಡುತ್ತಿಲ್ಲ"- ಮುಖ್ಯ ಶಿಕ್ಷಕ ಇಮ್ತಿಯಾಜ್.

ಇನ್ನು ಶಾಲೆ ಬಿಟ್ಟ ಮಕ್ಕಳಲ್ಲಿ ಬಾಲಕೀಯರು 16 ಬಾಲಕರು 16 ಮಕ್ಕಳಿದ್ದಾರೆ. ಮೂರರಿಂದ ಆರನೇ ತರಗತಿ ವರೆಗಿನ ಮಕ್ಕಳಿದ್ದು ತಾವು ಶಾಲೆಗೆ ಹೋಗುತ್ತೇವೆ ಎಂದರೂ ಪೋಷಕರು ಬಿಡುತ್ತಿಲ್ಲ ಎಂದು ಮುಗ್ಧ ಮನಸ್ಸಿನಿಂದ ನೋವು ತೋಡಿಕೊಳ್ತಾರೆ.

ಇನ್ನು ಶಿಕ್ಷಣ ಇಲಾಖೆ ಸಹ ಪ್ರಯತ್ನ ಪಟ್ಟರೂ ಮೊಂಡತನ ಬಿಡದ ಪೋಷಕರು ಮುಖಂಡರು ಇದೀಗ ಪ್ರತ್ಯೇಕ ಶಾಲೆ ಕೊಡಿ ಎಂಬ ಬೇಡಿಕೆ ಇಟ್ಟರೇ ಮನೆಗೇ ಶಿಕ್ಷಕರನ್ನು ಕಳುಹಿಸಿಕೊಡಿ ಎಂದು ಆಹಂಕಾರದ ಮಾತನಾಡುತಿದ್ದಾರೆ. ಇದರಿಂದ ಇನ್ನೇನು ಮೂರು ತಿಂಗಳಲ್ಲಿ ಪರೀಕ್ಷೆ ಸಹ ಬರಲಿದ್ದು ಮಕ್ಕಳಿಗೆ ಶಿಕ್ಷಣ ಸಿಗದೇ ಕತ್ತಲಲ್ಲಿ ಪೋಷಕರೇ ದೂಡಿದ್ದಾರೆ.

ನಾವು ಪೋಷಕರೊಂದಿಗೆ ಚರ್ಚೆ ಮಾಡಿದ್ದೇವೆ ,ಮನವೊಲಿಸುವ ಎಲ್ಲಾ ಪ್ರಯತ್ನ ಮಾಡಿ ಕೊನೆಗೆ 11 ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿದ್ದಾರೆ. ಆದರೇ ಕೆಲವರ ಮೊಂಡತನದಿಂದ ಉಳಿದ ಮಕ್ಕಳು ಶಾಲೆಗೆ ಬರದಂತ ಪರಿಸ್ಥಿತಿ ಎದುರಾಗಿದೆ. ಮಕ್ಕಳನ್ನು ಶಾಲೆಗೆ ಕರೆತರುವ ಎಲ್ಲಾ ಪ್ರಯತ್ನ ಮಾಡುತ್ತೇವೆ- ನಾಗರಾಜ್. ಅಧಿಕಾರಿ.

ನಾವು ಮಕ್ಕಳನ್ನು ಯಾವುದೇ ಕಾರಣಕ್ಕೆ ಆ ಶಾಲೆಗೆ ಕಳುಹಿಸುವುದಿಲ್ಲ. ನಮಗೆ ಪ್ರತ್ತೇಕ ಶಾಲೆ ಬೇಕು, ಅಲ್ಲಿವರೆಗೆ ಮಕ್ಕಳು ಶಿಕ್ಷಣದಿಂದ ವಂಚಿತರಾದರೂ ತೊಂದರೆಯಿಲ್ಲ.- ಷರೀಫ್ ಮುಜಾವರ್. ಪೋಷಕ.

ಒಟ್ಟಿನಲ್ಲಿ ದೊಡ್ಡವರ ಜಗಳ 32 ಮಕ್ಕಳ ಬದುಕನ್ನು ಕತ್ತಲಲ್ಲಿ ದೂಡುವಂತೆ ಮಾಡಿದ್ದು ಇದೀಗ ಈ ಮಕ್ಕಳು ಶಿಕ್ಷಣದಿಂದಲೇ ವಂಚಿತರಾಗಿದ್ದಾರೆ.

Advertisement
Tags :
KarnatakaparentsSDMCStudentUttara kanndaYallapura news
Advertisement
Next Article
Advertisement