ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

108 ambulance ಸಿಗದೇ ರೋಗಿ ಸಾವು ಚಟ್ಟದಲ್ಲಿ ಶವ ತಂದು ಆಸ್ಪತ್ರೆ ಎದುರು ಪ್ರತಿಭಟನೆ

ಕಾರವಾರ :- ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ (Hospital) ಕರೆದೊಯ್ಯಲು ಅಂಬುಲೆನ್ಸ್ ಗೆ ಕರೆಮಾಡಿದರೂ ಬಾರದೇ ರೋಗಿ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿಯಲ್ಲಿ ನಡೆದಿದೆ.
11:28 PM Jan 19, 2025 IST | ಶುಭಸಾಗರ್
Patient dies due to unavailability of 108 ambulance body brought in a cart and protest held in front of the hospital.

ಕಾರವಾರ :- ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ (Hospital) ಕರೆದೊಯ್ಯಲು ಅಂಬುಲೆನ್ಸ್ ಗೆ ಕರೆಮಾಡಿದರೂ ಬಾರದೇ ರೋಗಿ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿಯಲ್ಲಿ ನಡೆದಿದೆ.

Advertisement

ಹಾವಪ್ಪ ನಾಯ್ಕ (40) ಮೃತಪಟ್ಟ ವ್ಯಕ್ತಿಯಾಗಿದ್ದು ಈತ ಅನಾರೋಗ್ಯ ಪೀಡಿತನಾಗಿದ್ದು ತೀವ್ರ ಎದೆನೋವಿನಿಂದ ಬಳಲುತಿದ್ದು ಹೃದಯಾಘಾತವಾಗಿದೆ.

ಇದನ್ನೂ ಓದಿ:-Uttara kannda ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟ : ಸರ್ಕಾರದಿಂದ ಒಂದು ವರ್ಷದ ನಂತರ ಕೈಗೊಂಡ ಕ್ರಮದ ಬಗ್ಗೆ ವಿವರ ನೀಡಲು KIMS ಗೆ ಪತ್ರ! 

ತಕ್ಷಣ 108 ಅಂಬುಲೆನ್ಸ್ ಗೆ (ambulance )ಗೆ ಕರೆಮಾಡಿದ್ದು ಬೆಂಗಳೂರಿಗೆ ಕರೆ ಸಂಪರ್ಕವಾಗಿದೆ. ಕರೆಯನ್ನು ಕುಮಟಾ ವಿಭಾಗಕ್ಕೆ ಕನೆಕ್ಟ್ ಮಾಡಲು ಬೆಂಗಳೂರು ಸೆಂಟೆರ್ ನಿಂದ ಕುಮಟಾ ವಿಭಾಗಕ್ಕೆ ಕನೆಕ್ಟ್ ಮಾಡಿದ್ದಾರೆ. ಅದರೇ ಲೈನ್ ಸಿಗದೇ ಮರಳಿ ಕರೆಮಾಡಿ,ಖಾಸಗಿ ಅಂಬುಲೆನ್ಸ್ ಪಡೆದು ತೆರಳುವಂತೆ ಸೂಚಿಸಿ ಕರೆ ಕಟ್ ಮಾಡಿದ್ದಾರೆ ಎಂದು ಕರೆಮಾಡಿದವರು ಆರೋಪಿಸಿದ್ದಾರೆ.

Advertisement

ಎಷ್ಟು ಬಾರಿ ಹೇಳಿದರು 108 ಬಾರದೇ ರೋಗಿಯನ್ನು ಗೋಕರ್ಣದ ಆಸ್ಪತ್ರೆಗೆ ಕರೆದೊಯ್ಯಲು ಆಗಲಿಲ್ಲ.ಅಷ್ಟರೊಳಗಾಗಿ ತೀವ್ರ ಎದೆನೋವಿನಿಂದ ಲೋಹಿತ್ ಮೃತಪಟ್ಟಿದ್ದಾನೆ.

ಈತನ ಶವವನ್ನು ಚಟ್ಟದಲ್ಲಿ ಹೇರಿಕೊಂಡು ಗೋಕರ್ಣ ಸರ್ಕಾರಿ ಆಸ್ಪತ್ರೆಗೆ ಕರೆತಂದು ಸ್ಥಳೀಯರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು‌.

ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಮೃತ ಕುಟುಂಬದವರು ಹಾಗೂ ಸಾರ್ವಜನಿಕರು.

ಗೋಕರ್ಣ (Gokarna) ಭಾಗದಲ್ಲಿ ಹಾಗೂ ಹಿರೆಗುತ್ತಿ ಭಾಗದಲ್ಲಿ ತಲಾ ಒಂದರಂತೆ ಎರಡು ಅಂಬುಲೆನ್ಸ್ ಗಳಿವೆ. ಹೀಗಿದ್ದರೂ ಅಂಬುಲೆನ್ಸ್ ಕಳುಹಿಸದೇ ನಿರ್ಲಕ್ಷ ಮಾಡಲಾಗುದ್ದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಯಿತು.

108 ಸಮಸ್ಯೆ !

ಇನ್ನು ಜಿಲ್ಲೆಯಲ್ಲಿ 108 ಇದ್ದರೂ ಅಪಘಾತವಾದಾಗ ಕರೆಮಾಡಿದರೆ ಬೆಂಗಳೂರು ವಿಭಾಗಕ್ಕೆ ಕನೆಕ್ಟ್ ಆಗುತ್ತದೆ. ಅವರು ಸಹ ನಿರ್ಲಕ್ಷ ಮಾಡಿದರೇ ಸ್ಥಳೀಯ ಅಂಬುಲೆನ್ಸ್ ಗೆ ಕಾಲ್ ಸಹ ಕನೆಕ್ಟ್ ಆಗುವುದಿಲ್ಲ. ಅಪಘಾತವಾಗಿ ಸತತ ಕರೆಮಾಡಿದ ನಂತರ ಅರ್ದ ಘಂಟೆ ಬಳಿಕ ಕರೆಮಾಡುತ್ತಾರೆ. ವಾಹನ ಸ್ಥಳಕ್ಕೆ ಬರುವುದರೊಳಗೆ ಆ ವೆಕ್ತಿ ಸಾವು ಕಂಡ ಘಟನೆಗಳಿವೆ.

ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ.

ಇನ್ನು ಗೋಕರ್ಣ ವಿಶ್ವ ಪ್ರಸಿದ್ಧಿ ಪಡೆದ ಸ್ಥಳ.ಇಲ್ಲಿರುವ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಈ ಹಿಂದೆ ಇದ್ದ ವೈದ್ಯರು ವೃತ್ತಿ ತೊರೆದುಹೋಗಿದ್ದಾರೆ‌ . ಇನ್ನು ರಾತ್ರಿವೇಳೆ ಯಾರಿಗೆ ಏನೇ ಆದರೂ ಕುಮಟಾ ಅಥವಾ ಕಾರವಾರಕ್ಕೆ ಬರಬೇಕಾದ ಸ್ಥಿತಿ ಇದೆ. ಹೀಗಿರುವಾಗ ದಿನಕ್ಕೊಂದು ಅಪಘಾತವಾಗುವ ಈ ಜಿಲ್ಲೆಯಲ್ಲಿ ಜನ ವೈದ್ಯಕೀಯ ವ್ಯವಸ್ಥೆ ಇಲ್ಲದೇ ಸಾವು ಕಂಡ ಅನೇಕ ಉದಾಹರಣೆಗಳಿವೆ. ಇನ್ನಾದರೂ ಆರೋಗ್ಯ ಇಲಾಖೆ ಇತ್ತ ಗಮನಿಸಿ ಆಸ್ಪತ್ರೆಯ ಮೂಲಭೂತ ಸೌಕರ್ಯ ವದಗಿಸಬೇಕಿದೆ.

Advertisement
Tags :
108GokarnaHealthHospitalKarnatakaKumta newsProtestThadadiUttarakannda
Advertisement
Next Article
Advertisement