Bollywood Actor ಸೋನಾಕ್ಷಿ, ಜಹೀರ್ ದಂಪತಿ ಫೋಟೋ ಪೋಸ್ ! ಹೇಗಿದೆ ಗೊತ್ತಾ?
Bollywood news:- ಬೆಡಗಿ ಸೋನಾಕ್ಷಿ ಸಿನ್ಹಾ ಕಳೆದ ಜೂನ್ ನಲ್ಲಿ ಜಾಹಿರ್ ಇಕ್ಬಾಲ್ ಜೊತೆ ವಿವಾಹವಾದ ನಂತರ ಜಾಲಿ ಮೂಡ್ ನಲ್ಲಿ ಇದ್ದಾರೆ.
ಇತ್ತೀಚೆಗೆ ಪತಿ ಜೊತೆ ವಿದೇಶ ಪ್ರವಾಸಕ್ಕೆ ತೆರಳಿರುವ ಅವರು ಹಲವು ಪ್ರದೇಶಗಳಿಗೆ ಭೇಟಿ ನೀಡುತಿದ್ದಾರೆ.
ಆಸ್ಟ್ರೇಲಿಯಾದ ಜಮಾಲಾ ವೈಲ್ಡ್ ಲೈಫ್ ಲಾಡ್ಜ್ ಮೃಗಾಯಲಕ್ಕೂ ಭೇಟಿ ನೀಡಿದ್ದು ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ದಂಪತಿ ಹಂಚಿಕೊಂಡಿದ್ದಾರೆ.
ಮೃಗಗಳ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಮೂಲಕ ಎಂಜಾಯ್ ಮಾಡಿದ್ದಾರೆ.
ಜಗತ್ತಿನ ಕೆಲ ಮೃಗಾಲಯಗಳಲ್ಲಿ ಹುಲಿ, ಸಿಂಹದಂತಹ ಕ್ರೂರ ಪ್ರಾಣಿಗಳನ್ನು ಪಳಗಿಸಿ ಇಟ್ಟಿದ್ದಾರೆ. ಆಸ್ಟ್ರೇಲಿಯಾದ ಜಮಾಲಾ ವೈಲ್ಡ್ ಲೈಫ್ ಲಾಡ್ಜ್ ಮೃಗಾಲಯದಲ್ಲೂ ಇಂತಹ ಪ್ರಾಣಿಗಳನ್ನು ನೋಡಬಹುದು. ಸೋನಾಕ್ಷಿ-ಜಹೀರ್ ದಂಪತಿ ಸಿಂಹದ ಜೊತೆ ಪೋಸ್ ಕೊಟ್ಟಿರುವುದು ಹೇಗೆ ಗೊತ್ತಾ ಇಲ್ಲಿದೆ ನೋಡಿ.
ಹೆಣ್ಣು ಸಿಂಹ ಹಾಗೂ ಗಂಡು ಸಿಂಹ ಮಲಗಿದ್ದರೆ ಅಲ್ಲೇ ಪಕ್ಕದಲ್ಲಿ ಪತಿಯ ಜೊತೆ ಸೋನಾಕ್ಷಿ ಫೋಟೊ ಕ್ಲಿಕ್ಕಿಸುವ ಸಾಹಸ ಮಾಡಿದ್ದಾರೆ. ಮಡಿಲಲ್ಲಿ ಪತಿಯನ್ನು ಮಲಗಿಸಿಕೊಂಡು ಸೆಲ್ಫಿ ತೆಗೆದುಕೊಂಡಿದ್ದಾರೆ.
ಜಮಾಲಾ ವೈಲ್ಡ್ ಲೈಫ್ ಲಾಡ್ಜ್ ಝೂನಲ್ಲಿ ಜೋಡಿ ಸಖತ್ ಎಂಜಾಯ್ ಮಾಡಿದೆ. ಹೈನಾದ ಜೊತೆಗೂ ಫೋಟೊ ತೆಗೆದುಕೊಂಡು ಖುಷಿಪಟ್ಟಿದ್ದಾರೆ.
ಇನ್ನು ಮಲಗಿರುವ ಚೀತಾದ ಮೈದಡವುತ್ತಾ ಗಂಡ- ಹೆಂಡತಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಇನ್ನು ಸೋನು ಪತಿ ಸಿಂಹಿಣಿ ಜೊತೆ ಮಲಗಿ ಫೋಸ್ ಕೊಟ್ಟಿದ್ದು ಸಖತ್ ಎಂಜಾಯ್ ಮಾಡಿದ್ದಾರೆ.
ಜೋನ್ ನಲ್ಲಿ ವಿವಾಹವಾದ ಈ ಜೋಡಿ ಇದೀಗ ವಿದೇಶದ ಪ್ರವಾಸದಲ್ಲಿ ಇದ್ದು ಹನಿಮೂನ್ ಮೂಡ್ ನಲ್ಲಿ ಇದ್ದಾರೆ. ಹೀಗಾಗಿ ಇವರ ಈ ತುಂಟಾಟಗಳು Instagram ನಲ್ಲಿ ಪೋಸ್ಟ್ ಆಗುತಿದ್ದು ಸಖತ್ ವೈರಲ್ ಆಗುತ್ತಿದೆ.
ಇದಲ್ಲದೇ ತಾವು ವಿದೇಶಕ್ಕೆ ಹೋದಾಗ ಎಂಜಾಯ್ ಮಾಡುವ ಫೋಟೋಗಳನ್ನು ಆಗಾಗ ಅಪ್ ಲೋಡ್ ಮಾಡಿ ಕಿಕ್ ಹೆಚ್ಚಿಸುತಿದ್ದು , ರಾತ್ರಿ ಬೆಡ್ರೂಮ್ ಫೋಟೋದಿಂದ ಹಿಡಿದು ಸಿಮ್ವಿಂಗ್ ಮಾಡಿ ರಿಪ್ರೆಶ್ ಆಗೋ ಕಿಕ್ ಫೋಟಗಳು ಸಹ ಅಪ್ ಲೋಡ್ ಆಗಿವೆ.
ವಿವಾದಕ್ಕೊಳಗಾಗಿದ್ದ ಸೋನು?
ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಪತಿ ಜಹೀರ್ ಇಕ್ಪಾಲ್ ಜೊತೆಗೆ ಆಸ್ಟ್ರೇಲಿಯಾದಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಿಕೊಂಡಿದ್ದರು. ನವವಿವಾಹಿತ ಜೋಡಿ ಹೊಸ ವರ್ಷದ ಸಂಭ್ರಮಾಚರಣೆಯನ್ನ ಖುಷಿ ಖುಷಿಯಾಗಿ ಆಚರಿಸಿ ಎಂಜಾಯ್ ಮಾಡಿದ್ದಾರೆ. ಆ ಸೆಲೆಬ್ರೇಷನ್ ಫೋಟೋಸ್ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದರು.
ಫೋಟೋಸ್ ಹಾಕಿದ್ದೇ ಹಾಕಿದ್ದು, ಸೋನಾಕ್ಷಿಯ ನೆಮ್ಮದಿಯೇ ಹಾಳಾಗಿ ಹೋಗಿತ್ತು. ಈ ಫೋಟೋಸ್ ನೋಡಿದ ನೆಟ್ಟಿಗರು ಸೋನಾಕ್ಷಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಕಳೆದ ಸಾರಿ ದೀಪಾವಳಿ ಹೊತ್ತಲ್ಲಿ ಪಟಾಕಿ ಹೊಡೆಯೋ ಫೋಟೋ ಶೇರ್ ಮಾಡಿ ಇದ್ರಿಂದ ಮಾಲಿನ್ಯ ಆಗುತ್ತೆ. ಪಟಾಕಿ ಹೊಡೆಯುವವರಿಗೆ ಬುದ್ದಿ ಇಲ್ವಾ ಅಂತ ಸೋನಾಕ್ಷಿ ಸ್ಟೇಟಸ್ ಹಾಕಿದ್ಳು. ಆದ್ರೆ ಈಗ ನೋಡಿದ್ರೆ ಹೊಸ ವರ್ಷಕ್ಕೆ ಪಟಾಕಿ ಸಿಡಿಸೋ ವಿಡಿಯೋ ಶೇರ್ ಮಾಡಿ ಮಜಾ ಮಾಡಿಕೊಂಡು ಫೋಟೋಸ್ ಹಾಕಿದ್ದಾರೆ ಎಂದು ನೆಟ್ಟಿಗರು ಕಾಮಿಟ್ ಮಾಡಿದ್ದರು.
ಅಸಲಿಗೆ ಸೋನಾಕ್ಷಿ ತಂದೆ ಶತ್ರುಘ್ನ ಸಿಹ್ನಾ ಅಪ್ಪಟ ರಾಮಭಕ್ತ. ಇವರ ಮನೆಮಂದಿಗೆಲ್ಲಾ ರಾಮಯಣದ ಹೆಸರುಗಳನ್ನ ಇಟ್ಟಿದ್ದಾರೆ. ಆದ್ರೆ ಸೋನಾಕ್ಷಿ ವರಿಸಿದ್ದು ಮುಸ್ಲಿಂ ಯುವಕನನ್ನ. ಅದನ್ನೂ ಎಳೆದು ತಂದು ಸೋನಾಕ್ಷಿಯನ್ನ ಟ್ರೋಲ್ ಮಾಡಲಾಗಿದೆ.
ಜನರ ಪ್ರಶ್ನೆಗೆ ಹೆದರಿ fb ಕಾಮಿಟ್ ಬಾಕ್ಸ್ ಆಪ್ ಮಾಡಿಕೊಂಡಿದ್ದರು.
ಹೀಗೆ ಹಲವು ವಿವಾದಕ್ಕೆ ಸಿಲುಕಿರುವ ಸೋನು ಇದೀಗ ಮದುವೆಯಾಗಿ ಸಿನಿಮಾ ರಂಗದಿಂದ ಅಲ್ಪ ಬಿಡುವು ಮಾಡಿಕೊಂಡು ಹನಿಮೂನ್ ಮೂಡ್ ನಲ್ಲಿ ದೇಶ ಸುತ್ತುವ ಮೂಲಕ ಎಂಜಾಯ್ ಮಾಡುತಿದ್ದು ತಮ್ಮ Facebook ,Instagram ಮೂಲಕ ತಮ್ಮ ಸಭಿಮಾನಿಗಳಿಗಾಗಿ ಫೋಟೋ ಶೇರ್ ಮಾಡುತಿದ್ದಾರೆ.