ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar| ಕಾರವಾರ,ಗೋವಾ ಕರಾವಳಿಯಲ್ಲಿ ಪ್ರಧಾನಿ ಮೋದಿ | ಹೇಗಿತ್ತು ಗೊತ್ತಾ ದೀಪಾವಳಿ ಝಲಕ್ ?

Karwar–Goa (October 20): Prime Minister Narendra Modi celebrated Diwali with Navy personnel aboard INS Vikrant on the Karwar–Goa coast. Modi called it an honour to celebrate the festival with India’s brave sailors and praised their role in Operation Sindoor.
08:07 PM Oct 20, 2025 IST | ಶುಭಸಾಗರ್
Karwar–Goa (October 20): Prime Minister Narendra Modi celebrated Diwali with Navy personnel aboard INS Vikrant on the Karwar–Goa coast. Modi called it an honour to celebrate the festival with India’s brave sailors and praised their role in Operation Sindoor.

Karwar| ಕಾರವಾರ,ಗೋವಾ ಕರಾವಳಿಯಲ್ಲಿ ಪ್ರಧಾನಿ ಮೋದಿ | ಹೇಗಿತ್ತು ಗೊತ್ತಾ ದೀಪಾವಳಿ ಝಲಕ್ ?

Advertisement

Goa news(october20): ದೇಶದೆಲ್ಲೆಡೆ ದೀಪಾವಳಿಯನ್ನು  ಸಂಭ್ರಮದಿಂದ ಆಚರಿಸಿತಿದ್ದರೇ,ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಗೋವಾ ಮತ್ತು ಕಾರವಾರ ಕರಾವಳಿಯಲ್ಲಿರುವ ಐಎನ್‌ಎಸ್ ವಿಕ್ರಾಂತ್‌ಗೆ (INS Vikrant) ಭೇಟಿ ನೀಡಿ ನೌಕಾಪಡೆಯ ಸಿಬ್ಬಂದಿಯೊಂದಿಗೆ (PM Modi Diwali Address) ದೀಪಾವಳಿ ಆಚರಿಸಿದರು.

ನೌಕಾದಳ ಸಿಬ್ಬಂದಿಗಳ ಜೊತೆ ಮೋದಿ

ನೌಕಾಪಡೆಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಅವರೊಂದಿಗೆ ಪವಿತ್ರ ಹಬ್ಬವನ್ನು ಆಚರಿಸುತ್ತಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ." ಮೋದಿ ಇಂದು ಆಪರೇಷನ್‌ ಸಿಂದೂರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಐಎನ್‌ಎಸ್‌ ವಿಕ್ರಾಂತ್‌ ಕುರಿತು ಮಾತನಾಡಿದ್ದಾರೆ.

India news| ಮಕ್ಕಳನ್ನು ಕೊಲ್ಲುತ್ತಿದೆ ಕೆಮ್ಮಿನ ಸಿರಫ್ | ಎರಡು ವರ್ಷದ ಒಳಗಿನ ಮಕ್ಕಳಿಗೆ ಔಷಧ ನೀಡಲು ನಿರ್ಬಂಧ

Advertisement

ನೌಕಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪವಿತ್ರ ಹಬ್ಬವನ್ನು ನಿಮ್ಮೊಂದಿಗೆ ಆಚರಿಸಲು ನನಗೆ ತುಂಬಾ ಹೆಮ್ಮೆಯನಿಸುತ್ತಿದೆ. ನಾನು ಬಹಳ ಅದೃಷ್ಟವನ್ನು ಹೊಂದಿದ್ದೇನೆ. ಇಂದು ಅದ್ಭುತ ದಿನ. ಈ ದೃಶ್ಯ ಸ್ಮರಣೀಯ. ಇಂದು, ಒಂದು ಕಡೆ, ನನ್ನ ಬಳಿ ಸಾಗರವಿದೆ, ಮತ್ತು ಇನ್ನೊಂದು ಕಡೆ, ಭಾರತ ಮಾತೆಯ ವೀರ ಸೈನಿಕರ ಬಲವಿದೆ ಎಂದು ಹೇಳಿದರು.

ನೌಕಾನೆಲೆಯ ಯುದ್ದ ಹಡಗುಗಳು

"ಇಂದು ಒಂದು ಕಡೆ ಅನಂತ ಗಡಿಗಳು ಮತ್ತು ಅನಂತ ಆಕಾಶ, ಮತ್ತು ಇನ್ನೊಂದು ಕಡೆ ಅನಂತ ಶಕ್ತಿಗಳನ್ನು ಸಾಕಾರಗೊಳಿಸುವ ಈ ದೈತ್ಯ, ಐಎನ್‌ಎಸ್‌ ವಿಕ್ರಾಂತ್ ಇದೆ. ಸಾಗರದ ನೀರಿನ ಮೇಲೆ ಸೂರ್ಯನ ಕಿರಣಗಳ ಪ್ರಭೆಯು ವೀರ ಯೋಧರು ಬೆಳಗಿಸಿದ ದೀಪಾವಳಿಯ ದೀಪಗಳಂತಿವೆ" ಎಂದು ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ (modi)ದೀಪಾವಳಿ ಹೆಜ್ಜೆ ಗುರುತು

INS ವಿಕ್ರಾಂತ್ ಯುದ್ದ ನೌಕೆಯಲ್ಲಿ ಪ್ರಧಾನಿ ಮೋದಿ

2014 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ, ಪ್ರಧಾನಿ ಮೋದಿ(modi) ಭಾರತದಾದ್ಯಂತ ಸೈನಿಕರೊಂದಿಗೆ ನಿರಂತರವಾಗಿ ದೀಪಾವಳಿ ಆಚರಣೆ ಮಾಡಿದ್ದಾರೆ. ಪ್ರಧಾನಿಯಾಗಿ ಮೊದಲ ದೀಪಾವಳಿಯನ್ನು ಸಿಯಾಚಿನ್ ಹಿಮನದಿಯಲ್ಲಿ ಆಚರಿಸಿದರು.

ಯುದ್ದ ಹಡಗಿನಲ್ಲಿ ಪ್ರಧಾನಿ ಮೋದಿ ನೌಕಾದಳದ ಅಧಿಕಾರಿಗಳ ಜೊತೆ

ನಂತರದ ಭೇಟಿಗಳಲ್ಲಿ ಡೋಗ್ಯ ಯುದ್ಧ ಸ್ಮಾರಕ, ಹಿಮಾಚಲ ಪ್ರದೇಶದ ಸುತ್ತೋ, ಜಮ್ಮು ಮತ್ತು ಕಾಶ್ಮೀರದ ಗುರೆಜ್ ವಲಯ, ಉತ್ತರಾಖಂಡದ ಹರ್ಸಿಲ್, ಹಿಮಾಚಲ ಪ್ರದೇಶದ ಲೆಪ್ಪಾ, ಗುಜರಾತ್‌ ಸರ್ ಕ್ರೀಕ್ ಮತ್ತು ರಾಜಸ್ಥಾನದ ಲೋಂಗವಾಲಾದಲ್ಲಿ ಆಚರಿಸಿದ್ದಾರೆ. ಈ ಸಂಪ್ರದಾಯವು ಭೂಪ್ರದೇಶದಲ್ಲಿ ನಿಯೋಜಿಸಲಾದ ಸೈನಿಕರನ್ನು ಗೌರವಿಸುವುದು ಮತ್ತು ಸಂಪರ್ಕಿಸುವುದರ ಬದ್ಧತೆಯನ್ನು ತೋರಿಸುವ ಜೊತೆ ಆತ್ಮವಿಶ್ವಾಸ ಹೆಚ್ವಿಸುತ್ತದೆ.

ಕಾರವಾರಕ್ಕೆ(karwar) ಮೋದಿ!

ಪ್ರಧಾನಿ ಮೋದಿಯಿಂದ ವಿಕ್ರಾಂತ್ ಹಡಗಿನಲ್ಲಿ ವೀಕ್ಷಣೆ

ಇನ್ನು ಗೋವಾ ಮೂಲಕ ಕಾರವಾರದ (karwar)ಕದಂಬ ನೌಕಾನೆಲೆಗೂ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ ಎಂದು ಮೊದಲು ಹೇಳಲಾಗಿತ್ತು. ಈ ಹಿನ್ನಲೆಯಲ್ಲಿ ಕಾರವಾರ ಕದಂಬ ನೌಕಾನೆಲೆಯಲ್ಲೂ  ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೇ ಕಾರವಾರ-ಗೋವಾ ಕರಾವಳಿ ಮಧ್ಯೆ ಸಮುದ್ರಯಾನ ಮಾಡಿದ ಮೋದಿ ಯುದ್ದ ಹಡಗಿನಲ್ಲಿ ಒಂದಿಷ್ಟು ಸಮಯ ಕಳೆದರು.

ಇನ್ನು ನೌಕಾದಳದ ಸಿಬ್ಬಂದಿಗಳ ಜೊತೆ ಉಭಯಕುಶಲೋಪರಿ ವಿಚಾರಿಸಿ ಸಿಹಿ ಹಂಚಿ ದೀಪಾವಳಿ ಸಂಭ್ರಮ ಆಚರಿಸಿದರು.

10% discount for Deepavali
And for orders more than 2499 rs 15% discount ( for Deepavali)We also take birthday parties and family get together etc also.
ಮನೆಗೆ ಚಂದದ ಪೀಟೋಪಕರಣಕ್ಕಾಗಿ ಭೇಟಿ ನೀಡಿ.
ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಮಾರಾಟ ,ಇಂದೇ ಭೇಟಿ ನೀಡಿ.
ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Diwali 2025GoaGoa newsIndian NavyIndian Navy personnelins vikrantKarnataka coastal newsKarwarKarwar newsModi with soldiersNarendra Modinational newsOperation sindoorPm modiPM Modi Diwali celebration
Advertisement
Next Article
Advertisement