ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Pocso|ಮುರುಘಾ ಶ್ರೀ ಗೆ ಮತ್ತೆ ಸಂಕಷ್ಟ| ಆದೇಶ ಪ್ರಶ್ನಿಸಿ ಹೈಕೋರ್ಟ ಗೆ ಮೇಲ್ಮನವಿ

ಮುರುಘಾ ಶ್ರೀ ವಿರುದ್ಧದ ಪೋಕ್ಸೊ ಪ್ರಕರಣ ಖುಲಾಸೆಯಾಗಿದ್ದನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕಿಯರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
12:02 PM Dec 11, 2025 IST | ಶುಭಸಾಗರ್
ಮುರುಘಾ ಶ್ರೀ ವಿರುದ್ಧದ ಪೋಕ್ಸೊ ಪ್ರಕರಣ ಖುಲಾಸೆಯಾಗಿದ್ದನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕಿಯರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

Pocso|ಮುರುಘಾ ಶ್ರೀ ಗೆ ಮತ್ತೆ ಸಂಕಷ್ಟ| ಆದೇಶ ಪ್ರಶ್ನಿಸಿ ಹೈಕೋರ್ಟ ಗೆ ಮೇಲ್ಮನವಿ

Advertisement

ವರದಿ - ಮಾಲತೇಶ್ ಚಿತ್ರದುರ್ಗ.

Advertisement

Crime news/ ಚಿತ್ರದುರ್ಗ/11 december 2025) :- ಚಿತ್ರದುರ್ಗ ಮುರುಘಾ ಶ್ರೀ ವಿರುದ್ಧದ ಪೋಕ್ಸೊ‌ ಪ್ರಕರಣದಲ್ಲಿ ಆರೋಪಿಗಳನ್ನು ಚಿತ್ರದುರ್ಗ ಎರಡನೇ ಅಪರ ಜಿಲ್ಲಾ  ಸತ್ರ ನ್ಯಾಯಾಲಯ ಖುಲಾಸೆ‌ಗೊಳಿಸಿತ್ತು.ಈ  ಆದೇಶ ಪ್ರಶ್ನಿಸಿಸಂತ್ರಸ್ತ ಬಾಲಕಿಯರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

Chitradurga| PSI ನಿಂದ BJP ಜಿಲ್ಲಾಧ್ಯಕ್ಷನ ಮೇಲೆ ಹಲ್ಲೆ -ನಡೆದುದ್ದೇನು?

ಆಗಸ್ಟ್ 26,2022 ರಲ್ಲಿ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಧಾಖಲಾಗಿದ್ದ ಪೋಕ್ಸೊ‌ ಪ್ರಕರಣ ಆಗಸ್ಟ್ 27 ರಂದು ಚಿತ್ರದುರ್ಗದ‌ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು.ಹೀಗಾಗಿ ಪ್ರಕರಣ ಸಂಬಂಧ ಪೊಲೀಸರು ಎರಡು ಸೆಟ್  ಚಾರ್ಜ್ ಶೀಟ್ ಸಲ್ಲಿಸಿದ್ದರು.

ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕೋರ್ಟ್  ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಲಭ್ಯವಾಗದ ಹಿನ್ನಲೆಯಲ್ಲಿ ಮುರುಘಾ ಶ್ರೀ ಸೇರಿದಂತೆ  ವಾರ್ಡನ್ ರಶ್ಮಿ,ಮಠದ ಕಾರ್ಯದರ್ಶಿ ಪರಮಶಿವಯ್ಯ ವಿರುದ್ಧದ ಪ್ರಕರಣವನ್ನು ಕೋರ್ಟ್ ಖುಲಾಸೆಗೊಳಿಸಿತ್ತು.ಇದರಿಂದಾಗಿ ಹೋರಾಟಕ್ಕೆ ಮುಂದಾಗಿರುವ ಸಂತ್ರಸ್ತೆಯರು ಇಂದು ಹೈಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣ ಹಿನ್ನಲೆ.

2022 ರಲ್ಲಿ ಮೈಸೂರು ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಚಿತ್ರದುರ್ಗದ ಮುರುಘಾ ಮಠದ ಹಾಸ್ಟೆಲಿನಲ್ಲಿ ಇಬ್ಬರು ಅಪ್ರಾಪ್ತ (ಮೈನರ್) ವಿದ್ಯಾರ್ಥಿನಿಯರು ಅವಳ ಮೇಲೆ ಲೈಂಗಿಕ ದುರುಪಯೋಗ ಮತ್ತು ಸಂಭವಿತ ಅತ್ಯಾಚಾರ ನಡೆದಿದ್ದಾಗಿ ದೂರಿನಾಡಿದ್ದರು.

2022ರ ಆಗಸ್ಟ್ 26 ರಂದು ಎಫ್ಐಆರ್ ದಾಖಲಾಗಿದ್ದು, ನಂತರ ಪ್ರಕರಣವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್‌ ವಿಭಾಗಕ್ಕೆ ವರ್ಗಿಸಲಾಗಿತ್ತು.

ಆರೋಪಗಳು:

 POCSO ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ ಸೆಕ್ಷನ್‌ಗಳು ವಿಧಿಸಲಾಗಿತ್ತು.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Chitradurga CourtChitradurga NewsCrime Against MinorKarnataka crime newsKarnataka latest newsMurugha Mutt Case UpdateMurugha Mutt ControversyMurugha ShreeMurugha Shree High Court Appealpocso casePOCSO Latest Updateಚಿತ್ರದುರ್ಗಮುರುಗ ಮಠಮುರುಘಶ್ರೀ
Advertisement
Next Article
Advertisement