ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Yathnal ಮೇಲಿನ ಕ್ರಮ -ಕೇಂದ್ರ ಬಿಜೆಪಿ ಪದಾಧಿಕಾರಿಗಳು ಮರು ಪರಿಶೀಲನೆ ಮಾಡಬೇಕು- ಪ್ರಮೋದ್ ಮುತಾಲಿಕ್ 

ಕಾರವಾರ :- ಯತ್ನಾಳರ ಮೇಲೆ ಕ್ರಮ ಕೈಗೊಂಡಬಗ್ಗೆ ಕೇಂದ್ರ ಬಿಜೆಪಿ (bjp)ಪದಾಧಿಕಾರಿಗಳು ಮರು ಪರಿಶೀಲನೆ ಮಾಡಬೇಕು. ಹಿಂದುತ್ವದ ಬಗ್ಗೆ ನೇರ ನುಡಿ ಇರುವ ವ್ಯಕ್ತಿತ್ವದ ವ್ಯಕ್ತಿ ಬಸವನಗೌಡ ಪಾಟೀಲ್ ಯತ್ನಾಳ್ ಎಂದು ಯತ್ನಾಳ್ ಪರ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬೆಂಬಲ ವ್ಯಕ್ತಪಡಿಸಿದ್ದಾರೆ.
06:56 PM Mar 30, 2025 IST | ಶುಭಸಾಗರ್
Pramod muthalik

Yathnal ಮೇಲಿನ ಕ್ರಮ -ಕೇಂದ್ರ ಬಿಜೆಪಿ ಪದಾಧಿಕಾರಿಗಳು ಮರು ಪರಿಶೀಲನೆ ಮಾಡಬೇಕು- ಪ್ರಮೋದ್ ಮುತಾಲಿಕ್ 

Advertisement

ಕಾರವಾರ :- ಯತ್ನಾಳರ ಮೇಲೆ ಕ್ರಮ ಕೈಗೊಂಡಬಗ್ಗೆ ಕೇಂದ್ರ ಬಿಜೆಪಿ (bjp)ಪದಾಧಿಕಾರಿಗಳು ಮರು ಪರಿಶೀಲನೆ ಮಾಡಬೇಕು. ಹಿಂದುತ್ವದ ಬಗ್ಗೆ ನೇರ ನುಡಿ ಇರುವ ವ್ಯಕ್ತಿತ್ವದ ವ್ಯಕ್ತಿ ಬಸವನಗೌಡ ಪಾಟೀಲ್ ಯತ್ನಾಳ್  ಎಂದು ಯತ್ನಾಳ್ ಪರ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಂದು ಶಿರಸಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಯತ್ನಾಳ್ ಮಾತಿನಿಂದ ಸ್ವಲ್ಪ ಪಕ್ಷಕ್ಕೆ ಮುಜುಗರ ಆಗಿರಬಹುದು ,ವಾಸ್ತವಿಕ ಅರ್ಥ ಮಾಡಿಕೊಂಡು ಮತ್ತೆ ಅವರನ್ನು ತೆಗೆದುಕೊಂಡು ಪಕ್ಷ ವನ್ನು ಹಿಂದುತ್ವದ ಪರ ಗಟ್ಟಿಯಾಗಿ ನಿಲ್ಲುವಂತೆ ಮಾಡಬೇಕು ..

ಇದನ್ನೂ ಓದಿ:-Karnataka : ವಿದ್ಯುತ್ ದರ ಏರಿಗೆ ಮಾಡಿದ ರಾಜ್ಯ ಸರ್ಕಾರ! 

Advertisement

ಬಿಜೆಪಿ ಪಕ್ಷದ ಬೆಳವಣಿಯಲ್ಲಿ ನನ್ನದೂ ಪಾತ್ರ ಇದೆ,ಪಕ್ಷದ ಬಿಜೆಪಿ ಬೀಜ ಇಲ್ಲದ ಜಿಲ್ಲೆಯಲ್ಲಿ  ದೊಡ್ಡ ಗೆಲವು ತಂದುಕೊಟ್ಟಿದ್ದೇನೆ. ಹೀಗಾಗಿ  ನನಗೆ ಈ ಮಾತು  ಹೇಳಲು ಹಕ್ಕಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾಂಗ್ರೆಸ್ ಅಧಪಥನವಾಗುತ್ತಿದೆ ಈ ಸಂದರ್ಭದಲ್ಲಿ ಬಿಜೆಪಿ ಜಾಗೃತವಾಗಬೇಕು ಈ ರೀತಿಯ ಬಹಿರಂಗ ಗಲಾಟೆ ಆಗಬಾರದು, ನಮ್ಮ ಸಮಾಜದ ಹಿಂದುಗಳಿಗೆ ನೋವಿದೆ ,ಇದನ್ನು ಬಿಜೆಪಿ ಸುಧಾರಿಸಿಕೊಳ್ಳಬೇಕು

ಇದನ್ನೂ ಓದಿ:-Karnataka :ಗುಲಾಮನೊಬ್ಬ ದೈವವಾದ ಕತೆ: ಈತನಿಗೆ ಮದ್ಯ,ಸಿಗರೇಟೇ ನೈವೇದ್ಯ! 

ಬಿಜೆಪಿ ಯಡಿಯೂರಪ್ಪನವರ ಕುಟುಂಬ ರಾಜಕಾರಣ ಒಪ್ಪಿದರೂ ಒಳಗೆ ಅಸಮಧಾನ ,ಅಸಾಹಯಕತೆ ಇದೆ.ಇವರು ಬಿಟ್ಟರೇ ಬೇರೆ ಯಾರೂ ಇಲ್ಲ ಎಂಬ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ.

ಪ್ರಜ್ಞಾ ಸಿಂಗ್ ಹಿಡಿದು ಇಲ್ಲಿಯವರೆಗೆ ಯಾರ್ಯಾರರನ್ನು ಹೊರಹಾಕಿದ್ದಾರೆ ಅವರೆಲ್ಲರನ್ನು ಒಳಗೆ ತೆಗೆದುಕೊಳ್ಳಬೇಕು.ಹಿಂದು ಸಂಘಟನೆಗೆ ಫಲ ಸಿಗುತ್ತಿಲ್ಲ ಬೆಳವಣಿಗೆಗೆ ಅನುಕೂಲ ಆಗುತ್ತಿಲ್ಲ ಇದಕ್ಕೆ ಬಿಜೆಪಿಯೇ ಕಾರಣ.

ಕಾಂಗ್ರೆಸ್ ಸರ್ಕಾರ ಗೂಂಡಾಗಳು ,PFI ,SDPI ದಂಗೆ ಗಾಲಾಟೆ ಬೆಂಕಿ ಹಾಕುತ್ತಾರೆ ಇಂತವರ ಕೇಸ್ ವಾಪಾಸ್ ತೆಗೆದುಕೊಳ್ಳುತ್ತಾರೆ, ಕಾಂಗ್ರೆಸ್ ನವರಿಗೆ ಕಮೀಟ್ ಮೆಂಟ್ ಇದೆ ,ಬಿಜೆಪಿಯವರಿಗೆ ಕಮೀಟ್ಮೆಂಟ್ ಇಲ್ಲ ,ನಾವು ಹಿಂದೂಪರ ಎನ್ನುವುದಿಲ್ಲ,ಬಿಜೆಪಿಗೆ ಸೆಕ್ಯುಲರ್ ಯಾಕೆ ? ಹಿಂದೂ ಧರ್ಮ ಎಂದು ಗಟ್ಟಿಯಾಗಿ ಹೇಳದೇ ಇರುವ ಬಿಜೆಪಿ, ಮಾನಸಿಕತೆ ಇಲ್ಲದ ಪರಿಣಾಮ ಇವತ್ತು ಹಿಂದೂ ಸಂಘಟನೆಯನ್ನು ತುಳಿದು ನಾಶ ಮಾಡುತಿದ್ದಾರೆ. ಹಿಂದುಗಳನ್ನು ಕಡೆಗಣಿಸಿ ,ಬ್ರಷ್ಟತೆಯಲ್ಲಿ ತೊಡಗಿದ್ದರ ಪರಿಣಾಮ ಬಿಜೆಪಿ ಸೋಲಿಗೆ ಕಾರಣ ಎಂದು ಗುಡುಗಿದ್ದಾರೆ.

 

Advertisement
Tags :
BjpBJPLeadershipKarnatakaPoliticsPramodmuthalikReconsiderationSirsi newsYathnal
Advertisement
Next Article
Advertisement