Bhatkal ವೃದ್ದೆಯ ಮೇಲೆ ಹರಿದ ಖಾಸಗಿ ಬಸ್ - ಸಾವು
Bhatkal news :- ಭಟ್ಕಳದಿಂದ(Bhatkal) ಬೆಂಗಳೂರಿಗೆ (Bangaluru)ತೆರಳುತಿದ್ದ ಸುಗಮ ಟ್ರಾವಲ್ಸ್ ನ ಖಾಸಗಿ ಬಸ್ ವೃದ್ದೆಯ ಮೇಲೆ ಹರಿದು ವೃದ್ದೆ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಶಂಸುದ್ದಿನ್ ಸರ್ಕಲ್ ಬಳಿ ಸೋಮವಾರ ರಾತ್ರಿ ನಡೆದಿದೆ.ಲಕ್ಷ್ಮಿ ಜಟ್ಟ ನಾಯ್ಕ (68) ಬಸ್ ಹರಿದು ಸಾವುಕಂಡ ಮಹಿಳೆಯಾಗಿದ್ದಾಳೆ.
ನಗರದ ಶಂಸುದ್ದಿನ್ ಸರ್ಕಲ್ ಸಮೀಪ ಲಕ್ಷ್ಮಿ ರವರು ತೆರಳುತಿದ್ದು ಭಟ್ಕಳದಿಂದ ಬೆಂಗಳೂರಿಗೆ ತೆರಳುತಿದ್ದ ಸುಗಮ ಟ್ರಾವೆಲ್ಸ್ ನ ಖಾಸಗಿ ಬಸ್ ಯೂಟರ್ನ ತೆಗೆದುಕೊಳ್ಳುವಾಗ ವೃದ್ದೆಯ ಮೇಲೆ ಹತ್ತಿದ್ದು ಒಂದು ಕಾಲು ಸಂಪೂರ್ಣ ಜಜ್ಜಿಹೋಗಿದೆ. ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ.
ಇದನ್ನೂ ಓದಿ:-Bhatkal |20 ವರ್ಷದ ಹುಡುಗನಿಗೆ 15 ವರ್ಷದ ಹುಡುಗಿ ಜೊತೆ ಲವ್! ಸಂಬಂಧ ಬೆಳಸಿದವ ಕಂಬಿ ಹಿಂದೆ.
ಘಟನೆ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕ ಹಾಗೂ ಬಸ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜನರ ಅಕ್ರೋಶ.
ಹೆದ್ದಾರಿಯಲ್ಲಿ ರಾತ್ರಿ ವೇಳೆ ಬೆಂಗಳೂರಿಗೆ ತೆರಳುವ ಖಾಸಗಿ ಬಸ್ ಗಳು ಅತೀ ವೇಗದಲ್ಲಿ ಬರುತ್ತವೆ. ಇದರಿಂದ ಹೆಚ್ಚು ಅಪಘಾತ ವಾಗುತ್ತಿದೆ. ಇಂದು ಸಹ ಖಾಸಗಿ ಬಸ್ ಚಾಲಕ ವೃದ್ದೆ ನಡೆದು ಬದುವುದನ್ನು ಗಮನಿಸದೇ ಬಸ್ ಚಲಾಯಿಸಿ ಈಕೆಯ ಸಾವಿಗೆ ಕಾರಣರಾಗಿದ್ದಾನೆ ಎಂದು ಸ್ಥಳದಲ್ಲೇ ಜನ ಅಕ್ರೋಶ ವ್ಯಕ್ತಪಡಿಸಿದರು.
ಇನ್ನು ಹೆದ್ದಾರಿಯಲ್ಲಿ ಹೆಚ್ಚು ಜನ ಸೇರಿದ್ದರಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಲವು ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.