protect yourself: ಗುಡುಗು-ಮಿಂಚು ಬಂದ್ರೆ ಬಚಾವ್ ಆಗೋದು ಹೇಗೆ ಗೊತ್ತಾ? ವಿಡಿಯೋ ನೋಡಿ
protect yourself: ಗುಡುಗು-ಮಿಂಚು ಬಂದ್ರೆ ಬಚಾವ್ ಆಗೋದು ಹೇಗೆ ಗೊತ್ತಾ? ವಿಡಿಯೋ ನೋಡಿ

ಕಾರವಾರ:- ಇನ್ನೇನು ಮಳೆ (rain)ಬರಲು ಕೆಲವು ದಿನಗಳು ಬಾಕಿ ಇದೆ. ಮೇ ತಿಂಗಳ ಅಂತ್ಯದಲ್ಲಿ ಮಿಂಚು -ಸಿಡಿಲಿನೊಂದಿಗೆ ಮಳೆ ಬೀಳುವುದು ಸಾಮಾನ್ಯ.
ಹವಾಮಾನ ಇಲಾಖೆ ಸಹ ಕರಾವಳಿ,ಮಲೆನಾಡಿನಲ್ಲಿ ಮೇ.14 ರಿಂದ ಅಲ್ಲಲ್ಲಿ ಗುಡುಗು ಸಹಿಯ ಮಳೆ ಬೀಳುವ ಎಚ್ಚರಿಕೆ ನೀಡಿದೆ. ಇನ್ನು ಸಿಡಿಲು ಬಡಿದು ಅನೇಕರು ಸಾವು ಕಾಣುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಹೀಗಿರುವಾಗ ಇವುಗಳಿಂದ ರಕ್ಷಣೆಗೊಳಗಾಗೋದು ಸಹ ಅತೀ ಮುಖ್ಯ . ಹಾಗಿದ್ರೆ ಹೇಗೆ ರಕ್ಷಣೆ ಪಡೆದುಕೊಳ್ಳಬೇಕು ಎಂಬ ವಿಡಿಯೋ ಇಲ್ಲಿದೆ.
ವಿಡಿಯೋ:-
ಸಿಡಿಲು ಬಡಿದು ಹಾನಿ; ಅನಾಹುತದಿಂದ ಸ್ವಲ್ಪದರಲ್ಲೇ ಎರಡು ಕುಟುಂಬ ಮಿಸ್..!

ಇಂದು ಅಂಕೋಲದಲ್ಲಿ ಬೆಳ್ಳಂಬೆಳಿಗ್ಗೆ ಏಕಾಏಕಿ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡದಲ್ಲಿ ಈ ಘಟನೆ ನಡೆದಿದ್ದು ಹಾರವಾಡದ ಗಾಬಿತವಾಡದಲ್ಲಿ ವಿಠ್ಠಲ ಸೀತಾರಾಮ ನಾಯ್ಕ ಮತ್ತು ಗೀತಾ ನಾರಾಯಣ ಖಾರ್ವಿ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.
ಮುಂಜಾನೆ ಮನೆ ಮಂದಿ ಎದ್ದು ಕೆಲಸದಲ್ಲಿ ತೊಡಗಿದ್ದ ವೇಳೆ ಇದ್ದಕ್ಕಿದ್ದಂತೆ ಕಣ್ಣೆದುರು ಕಾಣಿಸಿದ ಮಿಂಚು-ಸಿಡಿಲು ಮನೆಗೆ ಬಡಿದಿದ್ದು ಎರಡು ಮನೆಯ ವಿದ್ಯುತ್ ಉಪಕರಣಗಳು,ಮೀಟರ್ ಬೋರ್ಡ್, ಮನೆಯ ಹೆಂಚು, ವಿದ್ಯುದ್ದೀಪಗಳು, ಯಂತ್ರೋಪಕರಣಗಳಿಗೆ ಭಾಗಶಃ ಹಾನಿಯಾಗಿದೆ.
ಮನೆಯ ಎದುರಿನ ತೆಂಗಿನ ಮರ, ಮನೆಯ ಗೋಡೆ ಹಾಗೂ ನೆಲಕ್ಕೂ ಸಿಡಿಲು ಬಡಿದು ಹಾನಿ ಸಂಭವಿಸಿದೆ.
ಅದೃಷ್ಟವಶಾತ್ ಮನೆಯವರೆಲ್ಲರೂ ಪ್ರಾಣಾಪಾಯಾದಿಂದ ಪಾರಾಗಿದ್ದು ,ಸ್ಥಳಕ್ಕೆ ಕಂದಾಯ ನಿರೀಕ್ಷಕರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿ ಹಾನಿ ವರದಿ ದಾಖಲಿಸಿದ್ದಾರೆ.