Railway Recruitment: ರೈಲ್ವೆಇಲಾಖೆಯಲ್ಲಿ ಉದ್ಯೋಗ ನೇಮಕಾತಿ ಗೆ ಅರ್ಜಿ ಆಹ್ವಾನ.
ಬೆಂಗಳೂರು, ಜನವರಿ 09: ರೈಲ್ವೆ ಇಲಾಖೆಯಲ್ಲಿ ಉದ್ಯೋಗ(job) ಹುಡುಕುತ್ತಿರುವವರಿಗೆ ಸಿಹಿ ಸುದ್ದಿಯೊಂದನ್ನು ಭಾರತೀಯ ರೈಲ್ವೆ ಇಲಾಖೆ( railway department ) ನೀಡಿದೆ.
ರೈಲ್ವೆ ಇಲಾಖೆ ವ್ಯಾಪ್ತಿಯ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES) ನಲ್ಲಿ ಹತ್ತಾರು ಉದ್ಯೋಗಗಳು ಖಾಲಿ ಇದ್ದು, ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಫೆಬ್ರವರಿ 04ರೊಳಗಾಗಿ ಅರ್ಜಿ ಸಲ್ಲಿಸಬೇಕಿದೆ.
ಎಷ್ಟು ಹುದ್ದೆಗಳಿವೆ?
ಭಾರತ ಸರ್ಕಾರದ ನವರತ್ನ ಸಾಲಿನ ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್‌ಪ್ರೈಸ್ ಹಾಗೂ ರೈಲ್ವೆ ಸಚಿವಾಲಯ ಅಧೀನದ ಕಂಪನಿ ಆಗಿರುವ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES)ನಲ್ಲಿ ಒಟ್ಟು 32 ಹುದ್ದೆಗಳು ಖಾಲಿ ಇವೆ.
ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES)
ಹುದ್ದೆಗಳು : ಸೆಕ್ಷನ್ ಮ್ಯಾನೇಜರ್, ಅಸಿಸ್ಟಂಟ್ ಮ್ಯಾನೇಜರ್ (ಫೈನಾನ್ಸ್ ವಿಭಾಗ)
ಒಟ್ಟು ಹುದ್ದೆಗಳು: 32
ಅರ್ಜಿ ಸಲ್ಲಿಕೆ: ಆನ್‌ಲೈನ್
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಫೆಬ್ರವರಿ 04
ಶೈಕ್ಷಣಿಕ ಅರ್ಹತೆ.
ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES) ನೇಮಕಾತಿ ಅಧಿಸೂಚನೆ ಪ್ರಕಾರ, ಚಾರ್ಟರ್ಡ್ ಅಕೌಂಟಂಟ್/ಕಾಸ್ಟ್ ಅಕೌಂಟಂಟ್/ CA(ಇಂಟರ್)/ ICMA/M.Com/ MBA (Finance)/PGDBM/ PGDBMA ನಲ್ಲಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಎರಡು ವರ್ಷಗಳು ಇದೇ ರಂಗಳದಲ್ಲಿ ಕಾರ್ಯ ಮಾಡಿದ ಅನುಭವ ಹೊಂದಿರಬೇಕು.
ವಯೋಮಿತಿ ವಿವರ.
ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES) ಪ್ರಕಾರ, ಅರ್ಜಿ ಸಲ್ಲಿಸಲಿರುವ ಆಸಕ್ತ ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷ ನಿಗದಿಪಡಿಸಲಾಗಿದೆ. ಆಯಾ ಜಾತಿ ಆಧಾರದಲ್ಲಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಕೊಂಚ ಸಡಿಲಿಕೆ ಸಿಗಲಿದೆ.
ಮಾಸಿಕ ವೇತನ ಎಷ್ಟು?
ಫೈನಾನ್ಸ್‌ನ ಮೂರು ವಿಭಾಗದಲ್ಲಿ ಇರುವ ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಯ್ಕೆ ಆಗುವವರಿಗೆ ಗರಿಷ್ಠ 1.40ಲಕ್ಷ ರೂಪಾಯಿ ಮಾಸಿಕ ವೇತನ ಇದೆ.
ಸಹಾಯಕ ವ್ಯವಸ್ಥಾಪಕ ಹುದ್ದೆಗೆ ರೂ.40,000 ನಿಂದ 1,40,000 ರೂಪಾಯಿ, ಸೆಕ್ಷನ್ ಆಫೀಸರ್ ರೂ.26,000 ರಿಂದ 96,000 ರೂಪಾಯಿ ಹಾಗೂ ಸಹಾಯಕ ಮ್ಯಾನೇಜರ್ ರೂ.40,000 ನಿಂದ 1,40,000 ರೂಪಾಯಿ ವರೆಗೆ ಮಾಸಿಕ ವೇತನ ಸಿಗಲಿದೆ.
ಇದನ್ನೂ ಓದಿ:-Karnataka|ಎರಡು ದಶಕದ ನಕ್ಸಲ್ ಹೋರಾಟಕ್ಕೆ ತೆರೆ ಆರು Naxals ಮುಖ್ಯಮಂತ್ರಿ ಮುಂದೆ ಶರಣಾಗತಿ.
ಆಯ್ಕೆ ಪ್ರಕ್ರಿಯೆ ಹೇಗೆ?.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ ನಡೆಸಿ ಮೆರಿಟ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆ ಬೆಂಗಳೂರಿನಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಕ ಹೇಗೆ:-
ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣ http://www.rites.com ಕ್ಕೆ ಭೇಟಿ ನೀಡಬೇಕು.
ಈ ಜಾಲತಾಣದಲ್ಲಿ ಕೆರಿಯರ್ ವಿಭಾಗ ಆಯ್ಕೆ ಮಾಡಿಕೊಂಡು, ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ಬಳಿಕ ಪ್ರಿಂಟ್ ಪಡೆಯಬೇಕು. ಅರ್ಹತೆ ದಾಖಲೆಗಳನ್ನು ಸ್ವಯಂ ದೃಢೀಕರಿಸಬೇಕು.
ಬಳಿಕ ಒಂದು ಅರ್ಜಿ ಪ್ರತಿಯನ್ನು ಪಡೆದು ದಾಖಲೆಗಳಿಗೆ ಸ್ವಯಂ ದೃಢೀಕರಣ ಮಾಡಿ ಅದನ್ನು ರೈಟ್ಸ್ ಪ್ರಧಾನ ಕಚೇರಿ ವಿಳಾಸ ''ರೈಟ್ಸ್ ಲಿಮಿಟೆಡ್, ಶಿಖರ್, ಪ್ಲಾಟ್ ನಂಬರ್ 1, ಸೆಕ್ಟಾರ್ -29, ಗುರ್‌ಗಾವ್ - 122001'' ಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಕೆ ಆರಂಭ: 2025 ಜನವರಿ 08
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 2025 ಫೆಬ್ರವರಿ 04
ಪ್ರವೇಶ ಪತ್ರ ಬಿಡುಗಡೆ ದಿನ: 2025 ಫೆಬ್ರವರಿ 06
ಲಿಖಿತ ಪರೀಕ್ಷೆ ದಿನಾಂಕ: 2025 ಫೆಬ್ರವರಿ 16