For the best experience, open
https://m.kannadavani.news
on your mobile browser.
Advertisement

Rain:ಉತ್ತರ ಕನ್ನಡ ದಲ್ಲಿ ರಾಜ್ಯದಲ್ಲೇ ದಾಖಲೆ ಮಳೆ -198 ಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರಕ್ಕೆ ರವಾನೆ

ಕಾರವಾರ :- ಉತ್ತರ ಕನ್ನಡ( uttara kannada) ಜಿಲ್ಲೆಯಲ್ಲಿ ಮಳೆಯಾರ್ಭಟಕ್ಕೆ ಜನ ತ್ತರಿಸಿ ಹೋಗಿದ್ದಾರೆ.ಶ್ರಾಮಣ ಮಾಸದ ಆರಂಭಕ್ಕೆ ಮಳೆ (Rain)ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡಿದೆ.
02:28 AM Jul 26, 2025 IST | ಶುಭಸಾಗರ್
ಕಾರವಾರ :- ಉತ್ತರ ಕನ್ನಡ( uttara kannada) ಜಿಲ್ಲೆಯಲ್ಲಿ ಮಳೆಯಾರ್ಭಟಕ್ಕೆ ಜನ ತ್ತರಿಸಿ ಹೋಗಿದ್ದಾರೆ.ಶ್ರಾಮಣ ಮಾಸದ ಆರಂಭಕ್ಕೆ ಮಳೆ (Rain)ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡಿದೆ.
rain ಉತ್ತರ ಕನ್ನಡ ದಲ್ಲಿ ರಾಜ್ಯದಲ್ಲೇ ದಾಖಲೆ ಮಳೆ  198 ಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರಕ್ಕೆ ರವಾನೆ

Rain:ಉತ್ತರ ಕನ್ನಡ ದಲ್ಲಿ ರಾಜ್ಯದಲ್ಲೇ ದಾಖಲೆ ಮಳೆ -198 ಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರಕ್ಕೆ ರವಾನೆ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಉತ್ತರ ಕನ್ನಡ( uttara kannada) ಜಿಲ್ಲೆಯಲ್ಲಿ ಮಳೆಯಾರ್ಭಟಕ್ಕೆ ಜನ ತ್ತರಿಸಿ ಹೋಗಿದ್ದಾರೆ.ಶ್ರಾಮಣ ಮಾಸದ ಆರಂಭಕ್ಕೆ ಮಳೆ (Rain)ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡಿದೆ. ಜಿಲ್ಲೆಯ ಕರಾವಳಿ ಭಾಗದಲ್ಲಿ ಉಂಟಾದ ರಣಭೀಕರ ಪ್ರವಾಹ ಅವಾಂತರ ಸೃಷ್ಟಿಮಾಡಿದ್ದು ಎಲ್ಲಿ ಏನೆಲ್ಲಾ ಸಮಸ್ಯೆಯಾಗಿದೆ ಇಲ್ಲಿದೆ ಅದರ ರಿಪೋರ್ಟ .

ಉತ್ತರ ಕನ್ನಡ ಜಿಲ್ಲೆಯಲ್ಲಿ ರಣಭೀಕರ ಮಳೆಯಿಂದ ಮನೆ ತೋಟಗಳಿಗೆ ನೀರು ತುಂಬುತ್ತಿದೆ.ಮತ್ತೊಂದೆಡೆ ಜಲ ದಾಳಿಗೆ ತತ್ತರಿಸಿದ ಜನ ಜೀವನ ಮೂರಾಬಟ್ಟೆಯಾಗಿದೆ .ಹೌದು ಕಳೆದ ಎರಡು ತಿಂಗಳಿಂದ ಕರಾವಳಿಯಲ್ಲಿ ತನ್ನ ಪ್ರಕೋಪ ತೋರಿಸುತ್ತಲೇ ಜನಜೀವನವನ್ನ ಹಿಂಡಿದ್ದ ಮಳೆರಾಯ ಶ್ರಾವಣ ಮಾಸದಲ್ಲಾದರೂ ಬಿಡುವು ಕೊಡುತ್ತಾನೆ ಎಂಬ ನಿರೀಕ್ಷೆಯನ್ನ ಹುಸಿಮಾಡಿದೆ.

ಇದನ್ನೂ ಓದಿ:- Karwar: ಕಾರವಾರ ತಾಲೂಕು ವೈದ್ಯಾಧಿಕಾರಿ ಪುತ್ರಿ ಆತ್ಮಹತ್ಯೆ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ 12 ತಾಲೂಕುಗಳ ಪೈಕಿ ಕರಾವಳಿಯ ಐದು ತಾಲೂಕುಗಳಲ್ಲೂ ರಣಭೀಕರ ಮಳೆ ಜಲದಾಳಿ ನಡೆಸಿದೆ. ಜಿಲ್ಲೆಯ ಕುಮಟಾ,ಹೊನ್ನಾವರ ಭಾಗದಲ್ಲಿ 120 ಮಿಲೀ ಮೀಟರ್ ಗೂ ಹೆಚ್ಚು ಮಳೆ ಸುರಿದಿದೆ.ಇದರಿಂದಾಗಿ ಶರಾವತಿ,ಅಘನಾಶಿನಿ ,ಗುಂಡ್ಲಬಾಳ ನದಿಗಳು ಅಪಾಯ ಮಟ್ಟ ಮೀರಿ ಹರಿದು ನದಿ ಪಾತ್ರದ ಗ್ರಾಮಗಳು ಜಲಾವೃತವಾಗಿದೆ.

ಹೊನ್ನಾವರದ ಭಾಸ್ಕೇರಿ, ಕವಲಕ್ಕಿ, ಕೆಳಗಿನೂರು, ಕುಮಟಾದ ಕೆಳಗಿನಕೇರಿ, ಹರಿಜನಕೇರಿ, ಕೋನಳ್ಳಿ, ಹಿರೇಕಟ್ಟು ಗ್ರಾಮಗಳಲ್ಲಿ ತೋಟ, ಮನೆ ಹಾಗೂ ರಸ್ತೆಗಳು ಜಲಾವೃತವಾಗಿದೆ.ಕೆಳಗಿನೂರಿನ  ನಾಗರಾಜ ಉದಯ ಮಡಿವಾಳ ಎಂಬವರ ಮನೆ, ತೋಟಕ್ಕೆ ನೀರು ನುಗ್ಗಿ  ಆಹಾರ ಪಾದಾರ್ಥಗಳ ನೀರು ಪಾಲಾಗಿದ್ದು ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದೆ.

ಇದನ್ನೂ ಓದಿ:-Kumta : ಮಚ್ಚು ಬೀಸಿ ಹೊಡೆದಾಡಿದ ದಾಯಾದಿಗಳು- ಮಾರಣಾಂತಿಕ ಹಲ್ಲೆ.

ಕುಮಟಾ ಊರಕೇರಿ ಗ್ರಾಮದ ಕೆಳಗಿನಕೇರಿ ಮಜಿರೆಯ 17 ಕುಟುಂಬ ಹಾಗೂ ಹಿರೇಕಟ್ಟು ಮಜಿರೆಯ ಜನರನ್ನು ದೋಣಿ ಮೂಲಕ ಸ್ಥಳಾಂತರ ಮಾಡಲಾಗಿದ್ದು ಕುಮಟಾದ ಕಡವ ಸರಕಾರಿ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ‌. ಹೊನ್ನಾವರದ ಭಾಸ್ಕೇರಿಯಲ್ಲೂ ಸುಮಾರು 10 ಕುಟುಂಬಗಳನ್ನು ಹೊಸಕುಳಿಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಕುಮಟಾದ ಕೋನಳ್ಳಿ, ಊರ್ಕೇರಿ ಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು ಇಲ್ಲಿ 62 ಜನ ಆಶ್ರಯ ಪಡೆದರೆ ,ಹೊನ್ನಾವರದ ಹೊಸಕುಳಿ,ಚಿಕ್ಕನಕೋಡು,ಮುಗ್ವಾ,ಹಳದಿಪುರ,ಗುಂಡ್ಲಬಾಳ ,ಮಾದಗೇರಿ ,ಮಲ್ಲಾಪುರ ಸೇರಿ ಒಟ್ಟು 10 ಕಾಳಜಿ ಕೇಂದ್ರ ತೆರೆದಿದ್ದು 136 ಜನರಿಗೆ ಆಶ್ರಯ ನೀಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತಿದ್ದು ಎರಡು ದಿನ ರೆಡ್ ಅಲರ್ಟ ನೀಡಲಾಗಿದೆ. ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನ ಒಟ್ಟು ಏಳು ತಾಲೂಕುಗಳ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ನೀಡಲಾಗಿದೆ.

ಹೊನ್ನಾವರದ ಹೊಸಕುಳಿಯಲ್ಲಿ ಕಳೆದ 24 ಗಂಟೆಯಲ್ಲಿ 165 ಮಿಲೀ ಮೀಟರ್ ಮಳೆ ಸುರಿದರೇ ಭಟ್ಕಳದ ಮುಂಡಳ್ಳಿಯಲ್ಲಿ 146 .ಮಿ.ಮೀ, ಸಿದ್ದಾಪುರದಲ್ಲಿ 108 ಮಿ.ಮೀ, ಶಿರಸಿ -120ಮಿ.ಮೀ, ಕುಮಟಾದ ಹೆಗಡೆಯಲ್ಲಿ 103 ಮಿ.ಮೀ ಅಧಿಕ ಮಳೆಯಾಗಿದೆ. ಇನ್ನು ಕುಮಟಾ ದಿಂದ ಸಿದ್ದಾಪುರಕ್ಕೆ ತೆರಳುವ ರಾಜ್ಯ ಹೆದ್ದಾರಿ 48ರಲ್ಲಿನ ದುಬಾರಿಘಟ್ಟದ ರಸ್ತೆ ಪಕ್ಕದಲ್ಲಿ ಕುಸಿತವಾಗಿದೆ. ಇನ್ನು 40 ರಿಂದ 50 ಕಿಮಿ ವೇಗ ದಲ್ಲಿ ಗಾಳಿ ಬೀಸುತಿದ್ದು ಶರಾವತಿ,ಗಂಗಾವಳಿ,ಅಘನಾಶಿನಿ,ಗುಂಡ್ಲಬಾಳ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶರಾವತಿ ನದಿ ಪಾತ್ರದಲ್ಲಿ ಕೆ.ಪಿ.ಸಿ ಯಿಂದ ಮೊದಲ ಅಲರ್ಟ ನೀಡಲಾಗಿದೆ. ಸದ್ಯ ಗೇರುಸೊಪ್ಪ ಜಲಾಶಯದಲ್ಲಿ ಗರಿಷ್ಟ ಮಟ್ಟ - 1819.00 ಅಡಿಗಳಿದ್ದು , ಸಂಜೆ ವೇಳೆಗೆ 1806.80 ಅಡಿಗಳು ತಲುಪಿದ್ದು ,ಒಳಹರಿವು 60,0000 ಕ್ಯೂಸೆಕ್ ಗಿಂತ ಅಧಿಕವಾಗಿದೆ.ಹೀಗಾಗಿ ಯಾವುದೇ ಸಮಯದಲ್ಲಿ ಜಲಾಶಯದಿಂದ ನೀರು ಬಿಡುವ ಸಾಧ್ಯತೆಗಳಿದ್ದು ಜನ ಜಾಗೃತಿಯಿಂದ ಇರಲು ತಿಳಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಶನಿವಾರ ಮತ್ತು ಭಾನುವಾರ ರೆಡ್ ಅಲರ್ಟ ನೀಡಲಾಗಿದ್ದು ಜುಲೈ 30 ರ ವರೆಗೆ ಆರೆಂಜ್ ಅಲರ್ಟ ನೀಡಲಾಗಿದೆ. ಮಳೆ ಮತ್ತು ಗಾಳಿಯ ಪ್ರಮಾಣ ಹೆಚ್ಚಾಗಿದ್ದು ,ಹಲವು ಗ್ರಾಮಗಳಲ್ಲಿ  ಪ್ರವಾಹ ಉಂಟಾದರೇ ಕಡಲ ಭಾಗದಲ್ಲಿ ಅಲೆಗಳ ಅಬ್ಬರಕ್ಕೆ ಕಡಲ ಕೊರೆತ ಪ್ರಾರಂಭವಾಗಿದ್ದು ಜನ ಭಯದಲ್ಲಿ ದಿನ ಕಳೆಯುವಂತಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ