ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

ರಾಜೀವ್ ಗಾಂಧಿ,ಸೋನಿಯಾ ಗಾಂಧಿ,ಅವರ ಮಗ ಅರ್ಹತೆ ಇಲ್ಲದೇ ರಾಜಕೀಯಕ್ಕೆ ಬಂದುಬಿಡುತ್ತಾರೆ. ಸಿದ್ದರಾಮಯ್ಯ ಮೈನಾರಿಟಿ ಓಟಿಗಾಗಿ ಜೊಲ್ಲು ಸುರಿಸುತ್ತಾರೆ-ಅರಗಾ ಜ್ಞಾನೇಂದ್ರ

05:46 PM Oct 26, 2021 IST | ಶುಭಸಾಗರ್

ಕಾರವಾರ :-ಸಿದ್ದರಾಮಯ್ಯನವರು ಮೈನಾರಿಟಿ ಓಡಿಗಾಗಿ ಜೊಲ್ಲು ಸುರಿಸುತಿದ್ದಾರೆ ಎಂದು ಗೃಹ ಸಚಿವ ಅರಗಾ ಜ್ಞಾನೇಂದ್ರ ರವರು ಕುಟುಕಿದ್ದಾರೆ.

Advertisement

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ರವರಿಗೆ
ಆರ್.ಎಸ್.ಎಸ್ ಬಗ್ಗೆ ಎಷ್ಟು ಕೆಳಮಟ್ಟದಲ್ಲಿ ಮಾತನಾಡಿದರೆ ಅಷ್ಟು ಓಟು ಸಿಗುತ್ತದೆ ಎಂದು ಭಾವಿಸಿದ್ದಾರೆ ,ಇದು ಅವರ ಭ್ರಮೆ ಅಷ್ಟೆ. ಬಿಜೆಪಿ ಕುಟುಂಬ ರಾಜಕಾರಣ ಮಾಡುತ್ತಿದೆ ಎನ್ನುತ್ತಾರೆ,
ಕಾಂಗ್ರೆಸ್ ನ ಅಧ್ಯಕ್ಷರಂತೆ ಯೋಗ್ಯತೆ ಇಲ್ಲದ ರಾಜೀವ್ ಗಾಂಧಿ ,ಸೋನಿಯಾ ಗಾಂಧಿ ಅವರ ಮಗ ನಂತೆ ಯಾವುದೇ ಆರ್ಹತೆ ಇಲ್ಲದೇ ರಾಜಕೀಯಕ್ಕೆ ಬಂದು ಬಿಡುತ್ತಾರೆ,ಬಿಜೆಪಿಯಲ್ಲಿ
ಅರ್ಹತೆ ,ಯೋಗ್ಯತೆ ಇರುವವರು ,ಒಬ್ಬರ ಮಗ ಎಂದು ಮೂಲೆಗೆ ಹೂಗಬಾರದ ,ಯಾರಿಗೆ ಸೇವಾ ಮನೋಭಾವನೆ, ಅರ್ಹತೆ ಇರುತ್ತದೆಯೋ ಅವರು ಮೂಲೆಗೆ ಹೋಗಬಾರದು ಎಂದರು.

ಇನ್ನು ಯಾರಿಗೆ ಸೈದಾಂತಿಕವಾಗಿ ಪಕ್ಷ ಕಟ್ಟಲು ಯೋಗ್ಯತೆ ಇಲ್ಲವೋ ಅವರು ಜಾತಿಯನ್ನು ಬಂಡವಾಳ ಮಾಡಿಕೊಳ್ಳುತ್ತಾರೆ.ಕಾಂಗ್ರೆಸ್,ಜೆಡಿಎಸ್ ಜಾತಿವಾದ ಮಾಡುತ್ತಿದೆ.ಜನ ಅವರನ್ನು ತಿರಸ್ಕಾರ ಮಾಡುತ್ತಾರೆ.
ಇವರ ಉದ್ದಾರಕ್ಕಾಗಿ ಜಾತಿಯನ್ನು ಮೇಲೆ ಎಬ್ಬಿಸಿದ್ದಾರೆ. ದಸರಾದಲ್ಲಿ ಪೊಲೀಸರು ಕೇಸರಿ ಬಣ್ಣದ ವಸ್ತ್ರ ಧರಿಸಿದಕ್ಕೆ ಆಕ್ಷೇಪ ತೆಗೆದಿದ್ದಾರೆ.
ದೇಶದಲ್ಲಿ ಕೇಸರಿ ಬ್ಯಾನ್ ಆಗಿದೆಯಾ ,ಕೇಸರಿ ಬಣ್ಣ ಪಕ್ಷಕ್ಕೆ ಸೀಮಿತವಾಗಿದೆಯಾ? ಎಂದು ಪ್ರಶ್ನೆ ಮಾಡಿದ ಅವರು ನಾಳೆ ರಾಷ್ಟ್ರದ್ವಜದ ಕೇಸರಿ ಬಣ್ಣ ತೆಗೆದು ಹಸಿರು ಬಣ್ಣ ಇದ್ರೆ ಸಾಕು ಎನ್ನುತ್ತಾರೆ ಎಂದರು.

Advertisement
Advertisement
Tags :
GokarnaHome Minister araga jnanendraKaravaliKarnatakaKarwarUttarakannada
Advertisement
Next Article
Advertisement