Uttarakannda : ಪ್ರತ್ತೇಕ ಅಪಘಾತ ನಾಲ್ಕುಜನ ಸಾವು
Uttarakannda news:- ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಪ್ರತ್ತೇಖ ಅಪಘಾತದಲ್ಲಿ ನಾಲ್ಕು ಜನರ ಸಾವಾಗಿದೆ. ಹಳುಯಾಳ( haliyala) ಮತ್ತು ಅಂಕೋಲ (ankola) ದಲ್ಲಿ ಈ ಘಟನೆ ಜರುಗಿದೆ.
ಲಾರಿ- ಬೈಕ್ ನಡುವೆ ಅಪಘಾತ ಇಬ್ಬರು ದುರ್ಮರಣ.

ಲಾರಿ ಬೈಕ್ ನಡುವೆ ಅಪಘಾತ ವಾಗಿ ಸ್ಥಳದಲ್ಲೇ ಇಬ್ಬರ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.
ಸಿದ್ದು ಬೈರು ಜೋರೆ(19), ಜಾನಾಬೈ ಪಾಂಡುರಮಸೆ (35), ಮೃತ ಬೈಕ್ ಸವಾರರಾಗಿದ್ದು, ಯಲ್ಲಾಪುರದಿಂದ ಹಳಿಯಾಳಕ್ಕೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.
ಘಟನೆ ಸಂಬಂಧ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-Haliyala:ಹತ್ತು ಲಕ್ಷ ಮೌಲ್ಯದ ಸಾಗವಾನಿ ಮರದ ತುಂಡು ವಶ- 10 ಜನರ ಬಂಧನ
ಕಾರು ಪಲ್ಟಿ - ದಂಪತಿಗಳಿಬ್ಬರು ಸಾವು.

ಮಂಗಳೂರಿನಿಂದ ಅಂಕೋಲದ ಕಡೆ ಅತೀ ವೇಗದಲ್ಲಿ ಬಂದ ಕಾರೊಂದು ಪಲ್ಟಿಯಾಗಿ ದಂಪತಿ ಸಾವುಕಂಡು ಕಾರಿನಲ್ಲಿದ್ದ ಮೂವರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಜಮಗೋಡ ಗ್ರಾಮದ ಬಳಿ ನಡೆದಿದೆ.ನಾಗೇಂದ್ರ ಸದಾಶಿವ ಭಟ್ಕಳ (72), ಸುಧಾ ನಾಗೇಂದ್ರ (65) ಮೃತಪಟ್ಟವರಾಗಿದ್ದು ,ಗಾಯಗೊಂಡವರನ್ನು ಅಂಕೋಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-Ankola: PDO ಮನೆಯಲ್ಲಿದ್ದ ಮೂರ್ತಿ ಕದ್ದ ಆರೋಪಿಗಳ ಬಂಧನ