For the best experience, open
https://m.kannadavani.news
on your mobile browser.
Advertisement

Guarantee| ನಾನು ಮುಖ್ಯಮಂತ್ರಿ ಆಗಿದ್ದರೆ ಗ್ಯಾರಂಟಿ ಅನುಷ್ಟಾನ ಮಾಡುತ್ತಿರಲಿಲ್ಲ- ಗ್ಯಾರಂಟಿ ಹೊರೆಯಾಗಿದೆ-ಆರ್.ವಿಡಿ

Senior Congress leader R.V. Deshpande said in Dandeli that he would not have implemented the five guarantee schemes if he were the Chief Minister, calling them a financial burden on the Karnataka government
09:38 AM Oct 13, 2025 IST | ಶುಭಸಾಗರ್
Senior Congress leader R.V. Deshpande said in Dandeli that he would not have implemented the five guarantee schemes if he were the Chief Minister, calling them a financial burden on the Karnataka government

Guarantee| ನಾನು ಮುಖ್ಯಮಂತ್ರಿ ಆಗಿದ್ದರೆ ಗ್ಯಾರಂಟಿ ಅನುಷ್ಟಾನ ಮಾಡುತ್ತಿರಲಿಲ್ಲ- ಗ್ಯಾರಂಟಿ ಹೊರೆಯಾಗಿದೆ-ಆರ್.ವಿಡಿ

Advertisement

ದಾಂಡೇಲಿ (october 13): ನಾನು ಮುಖ್ಯಮಂತ್ರಿ ಆಗಿದ್ದರೆ ಪಂಚ ಗ್ಯಾರಂಟಿ ಯೋಜನೆಗಳನ್ನು  (Guarantee scheme )ಅನುಷ್ಠಾನ ಮಾಡುತ್ತಿರಲಿಲ್ಲ ಎಂದು ಸ್ವ ಪಕ್ಷದ ಯೋಜನೆ ಬಗ್ಗೆ ಪಕ್ಷದ ಕಾರ್ಯಕ್ರಮದಲ್ಲೇ ಈ ಯೋಜನೆ ಬಗ್ಗೆ  ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳಿಕೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬೇವಾಡಿ ನವಗ್ರಾಮದಲ್ಲಿ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ  ಅವರು ಪಾಲ್ಗೊಂಡೆ ಮಾತನಾಡಿದರು.

ಓಟ್ ಚೋರಿ ಸಹಿ ಅಭಿಯಾನ ದಾಂಡೇಲಿ ಕಾರ್ಯಕ್ರಮದಲ್ಲಿ ಆರ್.ವಿ.ಡಿ ಭಾಗಿಯಾಗಿರುವುದು

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆ ಆಗಿದೆ. ಜನರಿಗೆ ಅನುಕೂಲವಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಸರ್ಕಾರ ನಡೆಸಲು ಕಷ್ಟವಾಗಿದೆ.

ಮಹಿಳೆಯರು ಎಲ್ಲ ಸೌಲಭ್ಯಗಳನ್ನೂ ಪಡೆಯುತ್ತಿದ್ದಾರೆ. ಪುರುಷರಿಗೆ ಯಾವುದೇ ಯೋಜನೆಗಳು ಇಲ್ಲ. ಸರ್ಕಾರದ ಈ ಯೋಜನೆಗಳನ್ನು ಜನರಿಗೆ ತಲುಪಿಸಲು ಅನೇಕ ಸಮಿತಿಗಳನ್ನು ರಚಿಸಲಾಗಿದೆ. ಅವುಗಳನ್ನು ನಿಭಾಯಿಸುವುದೇ ಆಗಿದೆ. ಹೀಗಾಗಿ ರಾಜ್ಯದಲ್ಲಿ ಅಭಿವೃದ್ಧಿಯ ವೇಗ ತಗ್ಗಿದೆ ಎಂದರು.

ಇನ್ನು ಮುಖ್ಯಮಂತ್ರಿಗಳು ಇಂದಿರಾ ಕಿಟ್ ಕೊಡ್ತಾರೋ ತೆಂಗಿನಕಾಯಿ ಕೊಡ್ತಾರೋ ನಮಗೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಸುದ್ದಿ ಮೂಲ- ಪ್ರಜಾವಾಣಿ

ವಿಡಿಯೋ ನೋಡಿ:- 

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ