Save sharavathi|ಶರಾವತಿ ಪಂಪ್ ಸ್ಟೋರೇಜ್ ಜಲವಿದ್ಯುತ್ ಯೋಜನೆ- ಸಾರ್ವಜನಿಕ ಅಹವಾಲು ಸಭೆ
Save sharavathi|ಶರಾವತಿ ಪಂಪ್ ಸ್ಟೋರೇಜ್ ಜಲವಿದ್ಯುತ್ ಯೋಜನೆ- ಸಾರ್ವಜನಿಕ ಅಹವಾಲು ಸಭೆ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲು ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲವಿದ್ಯುತ್ ಯೋಜನೆ ಅನುಷ್ಟಾನ ಕುರಿತು ಜಿಲ್ಲಾಡಳಿತ ಹಾಗೂ ಪರಿಸರ ಇಲಾಖೆಯಿಂದ ಅಭಿಪ್ರಾಯ ಸಂಗ್ರಹಣೆ ಹಾಗೂ ಅಹವಾಲು ಸಭೆಯನ್ನು ಗೇರುಸೊಪ್ಪ ಗುತ್ತಿ ಕನ್ನಿಕಾ ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು.
ಅಹವಾಲು ಸಭೆಗೆ ಸ್ಥಳೀಯ ಸಂಘಟನೆಗಳು,ಪರಿಸರ ಹೋರಾಟಗಾರರು,ಜನಪ್ರತಿನಿಧಿಗಳು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.
ಸಣ್ಣ ಜಾಗದಲ್ಲಿ ಸಭೆ ಆಯೋಜನೆಗೆ ಜನರ ವಿರೋಧ
ಗೇರುಸೊಪ್ಪ ಗುತ್ತಿ ಕನ್ನಿಕಾ ದೇವಸ್ಥಾನದ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಆಯೋಜನೆ ಮಾಡಲಾಗಿದ್ದು ಸಣ್ಣ ಜಾಗದಲ್ಲಿ ಸಭೆ ಆಯೋಜನೆ ಮಾಡಿರುವುದಕ್ಕೆ ಆಡಳಿತವನ್ನು ಸಾರ್ವಜನಿಕರು ತರಾಟೆ ತೆಗೆದುಕೊಂಡರು. ಅಹವಾಲು ನೀಡಲು ಎರಡು ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಆದರೇ ಬಂದ ಜನರಿಗೆ ಕೂರಲು ಸೂಕ್ತ ವ್ಯವಸ್ಥೆ ಸಹ ಇರಲಿಲ್ಲ. ಅಭಿಪ್ರಾಯ ಮಂಡನೆಗೂ ಇಕ್ಕಟ್ಟಾದ ಜಾಗದಲ್ಲಿ ಸೂಕ್ತ ವ್ಯವಸ್ಥೆ ಇರಲಿಲ್ಲ. ಇನ್ನು ಅಭಿಪ್ರಾಯ ಮಂಡನೆಯ ಅರ್ಜಿಗಳನ್ನು ನೀಡಲು ಹರಸಾಹ ಪಡುವಂತಾಗಿತ್ತು. ಹೀಗಾಗಿ ಬಂದ ಜನರು ಆಡಳಿತದ ವಿರುದ್ಧ ಕಿಡಿಕಾರಿದರು.
ಯೋಜನೆಗೆ ವಿರೋಧ
2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಈ ಭೂಗತ ಜಲ ವಿದ್ಯುತ್ ಯೋಜನೆಗೆ 16 ಸಾವಿರ ಮರಗಳು ಬಲಿಯಾಗಲಿದೆ, ಸಿಂಗಳೀಕ ರಕ್ಷಿತ ಅರಣ್ಯ ನಾಶದ ಜೊತೆಗೆ ಸ್ಥಳೀಯ ಜನರ ಜಮೀನುಗಳು ಸಹ ನಾಶವಾಗಲಿದ್ದು ಪಶ್ಚಿಮ ಘಟ್ಟ ಭಾಗ ನಾಶಕ್ಕೆ ಕಾರಣವಾಗುವ ಯೋಜನೆಗೆ ಜನರು ವಿರೋಧ ವ್ಯಕ್ತಪಡಿಸಿ ಅಭಿಪ್ರಾಯ ಮಂಡಿಸಿದರು.
Sharavathi |ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕುರಿತ ಸಾರ್ವಜನಿಕ ಅಹವಾಲು ಸ್ವೀಕಾರ-ಸಭೆಯಲ್ಲಿ ನಡೆದಿದ್ದು ಏನು?
ಇನ್ನು ಸಭೆಯಲ್ಲಿ ಯೋಜನೆ ವಿರುದ್ಧ ಗೇರುಸೊಪ್ಪ ಬಂಗಾರಮಕ್ಕಿ ಮಹಾಸಂಸ್ಥಾನದ ಮಾರುತಿ ಗುರೂಜಿ ಆಕ್ರೋಶ ಹೊರಹಾಕಿದ್ದು,ಪರಿಸರದಲ್ಲಿ ಹಾನಿ ಮಾಡಿ ಯೋಜನೆ ಮಾಡುವ ಅಗತ್ಯವಿದೆಯೇ ಎಂದು ಪ್ರಶ್ನೆ ಮಾಡಿದ ಅವರು,ಸಾರ್ವಜನಿಕರಿಗೆ ಡಿಪಿಆರ್ ನೀಡದೆಯೇ ಯೋಜನೆಯ ಪರಿಸರ ಅಹವಾಲು ಸಭೆ ಕರೆಯಲಾಗಿದೆ.ಕುರುಡು ಕಾಂಚಾಣದ ಆಟದಿಂದ ಯೋಜನೆ ಮಾಡಲು ಸರ್ಕಾರ ಹೊರಟಿದೆ.
Sharavathi :ಶರಾವತಿ ಪಂಪ್ ಸ್ಟೋರೇಜ್ ಜಲವಿದ್ಯುತ್ ಯೋಜನೆ ಅನುಷ್ಟಾನಕ್ಕೆ MOEFCC ಯಿಂದ ತಿರಸ್ಕಾರ
ಯೋಜನೆ 2005 ರಲ್ಲಿ 4 ಸಾವಿರ ಕೋಟಿ ವೆಚ್ಚದಲ್ಲಿ ಮಾಡಲು ನಿರ್ಧರಿಸಲಾಗಿದ್ದು ಈಗ ಇದೇ ಯೋಜನೆ 10 ಸಾವಿರ ಕೋಟಿ ತಲುಪಿದೆ.ಯೋಜನೆ ಮುಗಿಯುವ ವರೆಗೆ ಎಷ್ಟು ಕೋಟಿ ಆಗಲಿದೆ,ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಯಾಕೆ ಬೇಕು?ಸೂಕ್ಷ್ಮ ಪ್ರದೇಶದಲ್ಲಿ ಯೋಜನೆ ಮಾಡಲು ಹೊರಟಿದ್ದಾರೆ,
ಕಾಡು ಪ್ರಾಣಿಗಳು ಸುರಂಗ ತೆಗೆಯಲು ಬ್ಲಾಸ್ಟ್ ಮಾಡಿದರೆ ಎಲ್ಲಿ ಹೋಗಬೇಕು ಎಂದು ಪರಿಸರ ವಿರೋಧಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.
Karnataka|ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ಸಿದ್ದತೆ| ಏಷ್ಟು ಭೂಮಿ ಹೋಗಲಿದೆ ಗೊತ್ತಾ?
ಇನ್ನು ಯೋಜನೆ ವಿರೋಧಿಸಿ ಸುಮಾರು ಎರಡು ಸಾವಿರದಷ್ಟು ಅರ್ಜಿಗಳನ್ನು ಅಹವಾಲು ಸಭೆಯಲ್ಲಿ ಜಿಲ್ಲಾಡಳಿತಕ್ಕೆ ನೀಡಲಾಯಿತು. ಸಭೆ ಮುಗಿಯುವುದರ ಒಳಗೆ ಇನ್ನೂ ಹೆಚ್ಚಿನ ಅರ್ಜಿಗಳು ಬರುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾದಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ವಿರೋಧ ವ್ಯಕ್ತವಾಗಿದೆ.