Karnataka: ದ್ವಿತೀಯ PUC ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ
Bangaluru :- ಕರ್ನಾಟಕದ (karnataka) ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಕಟಿಸಲಾಗಿದೆ.
ಈ ಕುರಿತು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದು, 2024-25ನೇ ಸಾಲಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಜನವರಿ 17, 2025ರಿಂದ ಪರೀಕ್ಷೆ ಆರಂಭಗೊಂಡು, ಜ.29ರವರೆಗೆ ನಡೆಯಲಿದೆ ಎಂದುಪ್ರಕಟಣೆಯಲ್ಲಿ ತಿಳಿಸಿದೆ.
2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಒಂದು ರೀತಿಯಲ್ಲಿ ವಿಶೇಷತೆಯಿಂದ ಕೂಡಿದೆ. ಕಾರಣ ಈ ಹಿಂದೆ ಒಂದು ವಾರ್ಷಿಕ ಪರೀಕ್ಷೆ ಇತ್ತು, ಇದರಲ್ಲಿ ಫೇಲಾದವರಿಗೆ ಪೂರಕ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಈಗ ವಾರ್ಷಿಕ ಪರೀಕ್ಷೆಯನ್ನೇ 3 ಬಾರಿ ನಡೆಸಲಾಗುತ್ತಿದೆ. ಒಟ್ಟಾರೆ 3 ಪರೀಕ್ಷೆಗಳು ಇರಲಿವೆ.
ಯಾವುದು ಸಹ ಇಲ್ಲಿ ಪೂರಕ ಪರೀಕ್ಷೆ ಎಂದು ಪರಿಗಣಿಸಲಾಗುವುದಿಲ್ಲ. ಪದವಿ, ಸ್ನಾತಕೋತ್ತರ ಪದವಿ, ಉನ್ನತ ಶಿಕ್ಷಣ ಆಕಾಂಕ್ಷಿಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶಗಳು ಬಹುಮುಖ್ಯ. ಯಾವ ಕೋರ್ಸ್ ತೆಗೆದುಕೊಳ್ಳಬೇಕು ಎಂಬುದರಿಂದ ಆರಂಭವಾಗಿ ಯಾವ ಕಾಲೇಜಿಗೆ ಮುಂದಿನ ಶಿಕ್ಷಣಕ್ಕೆ ಪ್ರವೇಶ ಪಡೆಯಬೇಕು ಎಂದುಕೊಳ್ಳುತ್ತೀರೋ ಈ ಎಲ್ಲವು ಸಹ ನಿಮ್ಮ ಅಂಕಗಳ ಆಧಾರದಲ್ಲಿ ನನಸಾಗುತ್ತವೆ. ಆದ್ದರಿಂದ ದ್ವಿತೀಯ ಪಿಯುಸಿ ಫಲಿತಾಂಶ ಅತಿಮುಖ್ಯವಾದುದು.
ಪರೀಕ್ಷಾ ವೇಳಾ ಪಟ್ಟಿ ಹೀಗೆದೆ.
ದಿನಾಂಕ 17-01-2025ರಂದು ಕನ್ನಡ
ದಿನಾಂಕ 20-01-2025ರಂದು ಇತಿಹಾಸ, ಭೌತ ಶಾಸ್ತ್ರ,ಸಂಖ್ಯಾಶಾಸ್ತ್ರ
ದಿನಾಂಕ 21-01-2025ರಂದು ವಾಣಿಜ್ಯ ಶಾಸ್ತ್ರ, ಗಣಿತಶಾಸ್ತ್ರ
ದಿನಾಂಕ 22-01-2025ರಂದು ಆಂಗ್ಲ ಭಾಷೆ
ದಿನಾಂಕ 23-01-2025ರಂದು ರಾಜ್ಯ ಶಾಸ್ತ್ರ,
ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ
ದಿನಾಂಕ 24-01-2025ರಂದು ಲೆಕ್ಕ ಶಾಸ್ತ್ರ, ಐಚ್ಛಿಕ ಕನ್ನಡ
ದಿನಾಂಕ 27-01-2025ರಂದು ಅರ್ಥ ಶಾಸ್ತ್ರ,ರಾಸಾಯನ ಶಾಸ್ತ್ರ
ದಿನಾಂಕ 28-01-2025ರಂದು ಸಮಾಜ ಶಾಸ್ತ್ರ, ಜೀವಶಾಸ್ತ್ರ, ಬೇಸಿಕ್ ಮ್ಯಾತ್ ಭೂಗೋಳ ಶಾಸ್ತ್ರ
ಇದನ್ನೂ ಓದಿ:-Karnataka ಹೊಸ ಪ್ರಬೇಧದ ಪರಾವಲಂಬಿ ಕಣಜ ಪತ್ತೆ
ದಿನಾಂಕ 29-01-2025ರಂದು ಹಿಂದಿ, ತಮಿಳು, ತೆಲುಗು, ಉರ್ದು, ಸಂಸ್ಕೃತ, ಐಟಿ, ರಿಟೈಲ್, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್ ನೆಸ್