For the best experience, open
https://m.kannadavani.news
on your mobile browser.
Advertisement

Sharavathi|ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಸಚಿವರ ಹೇಳಿಕೆ ಬೆನ್ನಲ್ಲೇ ರಸ್ತೆ ಅಗಲೀಕರಣಕ್ಕೆ ಸಮೀಕ್ಷೆ !

Villagers oppose road widening survey for Sharavathi Pumped Storage Project after Minister KJ George’s statement; KPC officials admit mistake.
02:52 PM Oct 10, 2025 IST | ಶುಭಸಾಗರ್
Villagers oppose road widening survey for Sharavathi Pumped Storage Project after Minister KJ George’s statement; KPC officials admit mistake.
sharavathi ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಸಚಿವರ ಹೇಳಿಕೆ ಬೆನ್ನಲ್ಲೇ ರಸ್ತೆ ಅಗಲೀಕರಣಕ್ಕೆ ಸಮೀಕ್ಷೆ

Sharavathi|ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಸಚಿವರ ಹೇಳಿಕೆ ಬೆನ್ನಲ್ಲೇ ರಸ್ತೆ ಅಗಲೀಕರಣಕ್ಕೆ ಸಮೀಕ್ಷೆ !

ಕಾರವಾರ (october 10):- ಶರಾವತಿ (sharavathi) ಪಂಪ್ ಸ್ಟೋರೇಜ್ ಯೋಜನೆಗೆ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇಂಧನ ಸಚಿವ  ಕೆ.ಜೆ. ಜಾರ್ಜ್ ಅವರು ,ಜನರ ವಿರೋಧಗಳಿದ್ದರೂ ಶರಾವತಿ ಪಂಪ್ಡ್ ಸ್ಟೋರೇಜ್( sharavati pump storage project )ಯೋಜನೆಯನ್ನು ಪೂರ್ಣಗೊಳಿಸಲು ಆಸಕ್ತಿ ವ್ಯಕ್ತಪಡಿಸಿದ ಕೆಲವೇ ದಿನಗಳ ಬಳಿಕ, ಸಮೀಕ್ಷಾ ಸಂಸ್ಥೆಯ ಸದಸ್ಯರು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿ ಇರುವ ಗೇರುಸೊಪ್ಪ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಅಗಲೀಕರಣಕ್ಕೆ ಸರ್ವೆಗೆ ಮುಂದಾಗಿ ಜನರಿಂದ ಅಕ್ಷೇಪಣೆ ಎದುರಿಸಿದ್ದು ,ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮರಳಿದ್ದಾರೆ.

Advertisement

Sharavathi|ಪಂಪ್ ಸ್ಟೋರೇಜ್ ಸ್ಥಳ ಪರಿಶೀಲನೆ ವರದಿಗೆ ವನ್ಯಜೀವಿ ಮಂಡಳಿ ನಿರ್ದೇಶನ|ವಿವರ ನೋಡಿ

ಗೇರುಸೊಪ್ಪ ಗ್ರಾಮದ ಸೇತುವೆ ಹಾಗೂ ನಗರಬಸ್ತಿಕೇರಿ ನಡುವಿನ ರಸ್ತೆಯು ಅರಣ್ಯ ವಲಯದೊಳಗೆ ಹಾಗೂ ಅಣೆಕಟ್ಟಿನ ಟೆಲ್ ರೇಸ್ ಸಮೀಪವಿರುವುದರಿಂದ ಅಲ್ಲಿ ಕೆಲವು ವ್ಯಕ್ತಿಗಳು ರಸ್ತೆಯನ್ನು ಅಗಲೀಕರಣಕ್ಕಾಗಿ ಸರ್ವೆ ಮಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಅಲ್ಲಿಗೆ ಗ್ರಾಮಸ್ಥರು ಬಂಗಾರಮಕ್ಕಿಯ ಮಾರೂತಿ ಗುರುಜಿ ನೇತ್ರತ್ವದಲ್ಲಿ ವಿರೋಧ ವ್ಯಕ್ತಪಡಿಸಿದರು.

ಸರ್ವೆ ಮಾಡುತ್ತಿರುವುದು ಯಾಕೆ ? ಆರ್ಡರ್ ಇದೆಯೇ ಎಂದು ಪ್ರಶ್ನಿಸಿದಾಗ ತಬ್ಬಿಬ್ಬಾದ ಸರ್ವೆಗೆ ಬಂದ ಖಾಸಗಿ ಸಂಸ್ಥೆಯ ಸಿಬ್ಬಂದಿ KPC ಅಧಿಕಾರಿಗಳಿಗೆ ವಿಷಯ ಮುಟ್ಟಿಸಿ ನಂತರ ತಾವು 100 ಮೀಟರ್ ರಸ್ತೆ ವಿಸ್ತರಣೆಗಾಗಿ ಸಮೀಕ್ಷೆ ನಡೆಸುತ್ತಿರುವುದು ತಿಳಿಸಿದರು.

ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಮಾರೂತಿ ಗುರುಜೀ ರವರು ಈರೀತಿ ಸಮೀಕ್ಷೆ ಮಾಡಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ತರಾಟೆ ತೆಗೆದುಕೊಂಡರು. ಜನರು ಸಮೀಕ್ಷಾ ಸಿಬ್ಬಂದಿ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಇನ್ನು ಕೆಪಿಸಿ (ಕರ್ನಾಟಕ ವಿದ್ಯುತ್ ನಿಗಮ) ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡುವಂತೆ ಬೇಡಿಕೆ ಇಟ್ಟರು. ಇನ್ನು ವಿರೋಧ ತೀವ್ರವಾಗುತಿದ್ದಂತೆ ಕೆಲ ಗಂಟೆಗಳ ಬಳಿಕ KPC ಅಧಿಕಾರಿಗಳು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಸ್ಥಳಕ್ಕೆ ಆಗಮಿಸಿ  ರಸ್ತೆ ಅಗಲೀಕರಣಕ್ಕಾಗಿ ಸರ್ವೆ ಕಾರ್ಯ ಎಂದು ಸ್ಪಷ್ಟಪಡಿಸಿದರು.

Sharavathi |ಶರಾವತಿ ಭೂಗತ ಜಲವಿದ್ಯುತ್  ಯೋಜನೆ ಕುರಿತ ಸಾರ್ವಜನಿಕ ಅಹವಾಲು ಸ್ವೀಕಾರ-ಸಭೆಯಲ್ಲಿ ನಡೆದಿದ್ದು ಏನು?

ಗೇರುಸೊಪ್ಪ ಗ್ರಾಮದ ನಿವಾಸಿ ಮಂಜುನಾಥ್ ರವರು ಮಾತನಾಡಿ, KPC ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿ ರಸ್ತೆ ಕಾಮಗಾರಿ ಕೈಗೊಳ್ಳಲು ಸಿದ್ಧರಾಗಿದ್ದರು. ನಾವು ಅವರ ಪ್ರತಿನಿಧಿಯಿಂದ ಉತ್ತರ ಕೇಳಿದಾಗ, ಕೆಲವು ಅಧಿಕಾರಿಗಳು ಪೊಲೀಸರೊಂದಿಗೆ ಬಂದು ತಮ್ಮ ತಪ್ಪನ್ನು ಒಪ್ಪಿಕೊಂಡರು ಎಂದು ಹೇಳಿದರು.

ಆಫ್ ದ ರೆಕಾರ್ಡ ತಪ್ಪೊಪ್ಪಿಕೊಂಡ ಅಧಿಕಾರಿಗಳು!

KPC ಯ ಹಿರಿಯ ಎಂಜಿನಿಯರ್ ಒಬ್ಬರು, ಅನುಮತಿ ಪಡೆಯದೇ ರಸ್ತೆ ವಿಸ್ತರಣೆಗಾಗಿ ಸಮೀಕ್ಷಾ ಸಿಬ್ಬಂದಿಯನ್ನು ಕಳುಹಿಸಲಾಗಿತ್ತು, ನಮ್ಮಿಂದ ತಪ್ಪಾಗಿದೆ ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸಚಿವರು ತರಿಕೆರೆ ತಾಲ್ಲೂಕಿನ ಭದ್ರಾ ಅಣೆಕಟ್ಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಯೋಜನೆ ಪ್ರಯೋಜನಕಾರಿ, ಕೆಲವರು ಮಾತ್ರ ವಿರೋಧಿಸುತ್ತಿದ್ದಾರೆ,ಎಂದು ಹೇಳುವ ಮೂಲಕ ಈ ಯೋಜನೆ ಜಾರಿಮಾಡುವ ಸುಳಿವು ಕೊಟ್ಟಿದ್ದರು.

ಇನ್ನು ಸಧ್ಯ ಜನರ ವಿರೋಧದ ನಡುವೆಯೇ ಇದೀಗ ಶರಾವತಿ(sharavathi) ಪಂಪ್ ಸ್ಟೋರೇಜ್ ಯೋಜನೆಯನ್ನು  ಅನುಷ್ಟಾನ ಮಾಡಲು ಸದ್ದಿಲ್ಲದೇ ಮೊದಲ ಹಂತದಲ್ಲಿ ರಸ್ತೆ ಅಗಲೀಕರಣ ಕಾರ್ಯಕ್ಕೆ ಭರದ ಸಿದ್ದತೆ ನಡೆದಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ