Sharavathi |ಶರಾವತಿ ಪಂಪ್ ಸ್ಟೋರೇಜ್ ಮಣ್ಣು ಪರೀಕ್ಷೆಗೆ ಬಂದ ಅಧಿಕಾರಿಗಳು! ಗ್ರಾಮಸ್ತರ ಗೆರಾವ್
Sharavathi |ಶರಾವತಿ ಪಂಪ್ ಸ್ಟೋರೇಜ್ ಮಣ್ಣು ಪರೀಕ್ಷೆಗೆ ಬಂದ ಅಧಿಕಾರಿಗಳು! ಗ್ರಾಮಸ್ತರ ಗೆರಾವ್
ಕಾರವಾರ (october 11) ಶರಾವತಿ ಪಂಪ್ ಸ್ಟೋರೇಜ್ (Sharavathi Power Project) ಯೋಜನೆಯನ್ನು ಶತ ಗತಾಯ ಜಾರಿವೆ ತರಲು ರಾಜ್ಯ ಸರ್ಕಾರ ಪಣ ತೊಟ್ಟಿದೆ. ಇತ್ತೀಚೆಗೆ ರಸ್ತೆ ಸರ್ವೆ ಕಾರ್ಯಕ್ಕೆ ಬಂದ ಖಾಸಗಿ ಸಂಸ್ಥೆಯ ಸಿಬ್ಬಂದಿಗಳನ್ನು ತಡೆದು ಕಳುಹಿಸಿದ್ದ ಗ್ರಾಮಸ್ತರು ಪ್ರತಿಭಟನೆ ನಡೆಸಿದ್ದರು.
ಆದರೇ ಇದೀಗ ಒಂದು ಹೆಜ್ಜೆ ಮುಂದೆಹೋಗಿರುವ KPC ಕಾರ್ಗಲ್ ಹಾಗೂ ಗೇರುಸೊಪ್ಪ ಭಾಗದಲ್ಲಿ ಕೇಂದ್ರ ಸರ್ಕಾರದ ಇಂಡಿಯನ್ ಇನ್ಸಟೂಟ್ ಆಫ್ ಸಾಯಲ್ ಆಂಡ್ ವಾಟರ್ ಕಂಸರವೇಶನ್ ರಿಸರ್ಚ ಸೆಂಟರ್ ಬಳ್ಳಾರಿಯ ವಿಜ್ಞಾನಿಗಳು ಹಾಗೂ ಹರಿಯಾಣ ಮೂಲದ ವ್ಯಾಪಕೋಸ್ (WAPCOS) ಕಂಪನಿಯ ತಾಂತ್ರಿಕ ವಿಭಾಗದ ಸಿಬ್ಬಂದುಗಳು ,ದೆಹಲಿಯ ಜಲಶಕ್ತಿ ವಿಭಾಗದ ಅಧಿಕಾರಿಗಳು ಮಣ್ಣು (sand) ಪರೀಕ್ಷೆಗೆ ಆಗಮಿಸಿದ್ದಾರೆ.
ಇನ್ನು ವಿಷಯ ತಿಳಿಯುತಿದ್ದಂತೆ ಸ್ಥಳೀಯ ಗ್ರಾಮಸ್ತರು ಆಗಮಿಸಿ ಮಾಹಿತಿ ಕೇಳಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಇನ್ನು ಯಾವುದೇ ಅನುಮತಿ ಇಲ್ಲದೇ ಹಾಗೂ ಗ್ರಾಮಪಂಚಾಯ್ತಿಯ ಅನುಮತಿಯೂ ಇಲ್ಲದೇ ಏಕಾ ಏಕಿ ಮಣ್ಣು ಪರೀಕ್ಷೆಗೆ ಬಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಸದ್ಯ ಯಾವುದೇ ಅನುಮತಿ ಪಡೆಯದೇ ಪಂಪ್ ಸ್ಟೋರೇಜ್ ಗೆ ಬೇಕಾಗುವ ಕೆಲಸಗಳನ್ನು ಕೆಪಿಸಿ ಮಾಡಿಸುತಿದ್ದು ಇದು ಇದೀಗ ಜನರ ವಿರೋಧಕ್ಕೆಕಾರಣವಾಗಿದೆ.
