Shirur ಭೂ ಕುಸಿತ ದುರಂತ :ಕೈ ಸೇರಿದ DNA ವರದಿ ಜಿಲ್ಲಾಧಿಕಾರಿ ಹೇಳಿದ್ದೇನು?
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಂಕೋಲದ (ankola) ಶಿರೂರು ಭೂ ಕುಸಿತದ ಶೋಧ ಕಾರ್ಯದಲ್ಲಿ ದೊರೆತ ಮೂಳೆಗಳ DNA ವರದಿ ಕೊನೆಗೂ ಜಿಲ್ಲಾಡಳಿತದ ಕೈ ಸೇರಿದೆ.
ಆದರೇ ದೊರತೆ DNA ವರದಿಯಲ್ಲಿ ಸಿಕ್ಕ ಮೂಳೆಗಳು ಮನುಷ್ಯನದ್ದಾಗಿದ್ದು ಕಾಣೆಯಾದವರದ್ದು ಎಂದು ಹೇಳಲು ಸಾಧ್ಯವಾಗಿಲ್ಲ ಎಂದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ರವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಹೇಳಿಕೆ ಇಲ್ಲಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತದಿಂದ ಒಟ್ಟು ಹನ್ನೊಂದು ಜನ ಕಣ್ಮರೆಯಾಗಿದ್ರು, ಆ ಪೈಕಿ ಒಂಬತ್ತು ಜನರ ಮೃತ ದೇಹ ಪತ್ತೆ ಆಗಿತ್ತು.

ಜಗನ್ನಾಥ್ ನಾಯ್ಕ್ ಮತ್ತು ಲೊಕೇಶ್ ನಾಯ್ಕ್ ಪತ್ತೆ ಆಗಿರಲಿಲ್ಲ, ಇಬ್ಬರ ಹುಡಕಾಟಕ್ಕೆ ಜಿಲ್ಲಾಡಳಿತ ವಿಶೇಷ ಕಾರ್ಯಾಚರಣೆ ಮಾಡಿತ್ತು, ಕಾರ್ಯಾಚರಣೆ ವೇಳೆ ಎರಡು ಮೂಳೆಗಳು ಸಿಕ್ಕಿದ್ದು ಎರಡು ಮೂಳೆಗಳನ್ನ ಡಿಎನ್ ಎ ಟೆಸ್ಟ್ ಗೆ ಕಳುಹಿಸಿದ್ದು ಈ ಸಂದರ್ಭದಲ್ಲಿ ಕೆಮಿಕಲ್ ಹೆಚ್ಚು ಹಾಕಿದ್ದರಿಂದ DNA ವರದಿ ಬರುವುದರಲ್ಲಿ ವಿಳಂಬವಾಗಿತ್ತು.ಇದೀಗ ಪತ್ತೆ ಮಾಡಿದ ಮೂಳೆಯ ಡಿಎನ್ಎ ರಿಪೋರ್ಟ್ ನಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷದಿಂದ ಪತ್ತೆ ಮಾಡಲು ವಿಫಲವಾಗಿದೆ .
ಇದನ್ನೂ ಓದಿ:-Shiruru ದುರಂತ :ಕಾಣೆಯಾದ DNA ವರದಿ ಕೊನೆಗೂ ನೋವು ತಿಂದ ಕುಟುಂಬಕ್ಕೆ ಸಂದ ಪರಿಹಾರ
ಇನ್ನು ಮೂಳೆಗಳು ಮಾತ್ರ ಪುರುಷನ ಮಾನವ ದೇಹದ ಮೂಳೆಗಳದ್ದು ಎಂಬುವುದು ಸಾಬೀತಾಗಿದ್ದು, ಡಿಎನ್ ಎ ಟೆಸ್ಟ್ ಲ್ಯಾಬ್ ರಿಪೋರ್ಟ್ ಆದಾರ ಇಟ್ಟಿಕೊಂಡು , ಕಣ್ಮರೆಯಾದ ಇಬ್ಬರ ಕುಟುಂಬಸ್ಥರಿಗೆ ಮರಣ ದಾಖಲೆ ಪತ್ರ ನೀಡಲು ಜಿಲ್ಲಾಡಳಿತ ಮುಂದಾಗಿದೆ.