For the best experience, open
https://m.kannadavani.news
on your mobile browser.
Advertisement

Shiruru ದುರಂತ :ಕಾಣೆಯಾದ DNA ವರದಿ ಕೊನೆಗೂ ನೋವು ತಿಂದ ಕುಟುಂಬಕ್ಕೆ ಸಂದ ಪರಿಹಾರ

Karwar news 11 November 2024 :- ಜುಲೈ 16 ರಂದು ಶಿರೂರು ಭೂ ಕುಸಿತ ದುರಂತದಲ್ಲಿ 11 ಜನ ಮೃತಪಟ್ಟಿದ್ದು ಇದರಲ್ಲಿ ಮೃತ 9 ಜನರ ಕುಟುಂಬಕ್ಕೆ ಪರಿಹಾರ ನೀಡಲಾಗಿತ್ತು.
10:11 PM Nov 11, 2024 IST | ಶುಭಸಾಗರ್
Karwar news 11 November 2024 :- ಜುಲೈ 16 ರಂದು ಶಿರೂರು ಭೂ ಕುಸಿತ ದುರಂತದಲ್ಲಿ 11 ಜನ ಮೃತಪಟ್ಟಿದ್ದು ಇದರಲ್ಲಿ ಮೃತ 9 ಜನರ ಕುಟುಂಬಕ್ಕೆ ಪರಿಹಾರ ನೀಡಲಾಗಿತ್ತು.
shiruru ದುರಂತ  ಕಾಣೆಯಾದ dna ವರದಿ ಕೊನೆಗೂ ನೋವು ತಿಂದ ಕುಟುಂಬಕ್ಕೆ  ಸಂದ ಪರಿಹಾರ

Karwar news 11 November 2024 :- ಜುಲೈ 16 ರಂದು ಶಿರೂರು ಭೂ ಕುಸಿತ ದುರಂತದಲ್ಲಿ 11 ಜನ ಮೃತಪಟ್ಟಿದ್ದು ಇದರಲ್ಲಿ ಮೃತ 9 ಜನರ ಕುಟುಂಬಕ್ಕೆ ಪರಿಹಾರ ನೀಡಲಾಗಿತ್ತು.

Advertisement

ಆದರೇ ಗಂಗಾವಳಿ ನದಿ ಭಾಗದಲ್ಲಿ ಭೂ ಕುಸಿತದಿಂದ ಕಾಣೆಯಾಗಿದ್ದ ಶಿರೂರಿನ ಜಗನ್ನಾಥ್ ,ಗಂಗೆಕೊಳ್ಳದ ಲೋಕೇಶ್ ಕುಟುಂಬಕ್ಕೆ ಪರಿಹಾರ ಸಿಕ್ಕಿರಲಿಲ್ಲ.

ಇದನ್ನೂ ಓದಿ:-Ankola : ಪ್ರಾವಾಹ ಸಂತ್ರಸ್ತರ ಪರಿಹಾರ ಹಣಕ್ಕೆ ಕತ್ತರಿ ದಾಖಲೆ ಕೊರತೆ ತಂದೊಡ್ಡಿತು ಸಮಸ್ಯೆ!

ಇನ್ನು ಕೇರಳದ ಅರ್ಜುನ್ ಮೃತದೇಹ ಹೊರತೆಗೆದು ಇಡೀ ಕಾರ್ಯಾಚರಣೆ ಕೈ ಬಿಡಲಾಗಿತ್ತು. ಸಿಕ್ಕ ಮನುಷ್ಯನ ಮೂಳೆಗಳನ್ನು DNA ವರದಿಗೆ ಹುಬ್ಬಳ್ಳಿ ಕಿಮ್ಸ್ ಗೆ ಕಳಿಸುವಾಗ ಕೆಮಿಕಲ್ ಹೆಚ್ಚು ಹಾಕಿದ್ದರಿಂದ ವರದಿ ಬರಲೇ ಇಲ್ಲ.

Shiruru news landslide

ಹೀಗಾಗಿ ಎರಡು ಕುಟುಂಬಗಳಿಗೆ ತಮ್ಮವರ ಗುರಿತು ಪತ್ತೆಗೆ ಇದ್ದ ಆಧಾರ ಸಹ ಹಾಳಾಯಿತು. ಇದರ ನಡುವೆ ನಾಮದಾರಿ ಸಂಘವು 15 ದಿನದ ಗಡವು ನೀಡಿ ಪರಿಹಾರ ಹಣ ನೀಡಬೇಕು ಹಾಗೂ ಶೋಧ ಕಾರ್ಯ ಮುಂದುವರೆಸಬೇಕು ಎಂಬ ಆಗ್ರಹ ಮಾಡಿದ್ದವು.

ಇದೀಗ ಶಿರೂರು ಭೂ ಕುಸಿತದಲ್ಲಿ ಕಾಣೆಯಾಗಿದ್ದ ಜಗನ್ನಾಥ್ ,ಲೋಕೇಶ್ ಕುಟುಂಬಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಲಾ ಐದು ಲಕ್ಷ ಪರಿಹಾರ ಹಣದ ಚಕ್ ವಿತರಿಸಿದರು.

ಇನ್ನು ಪರಿಹಾರದ ಜೊತೆಗೆ ತಮ್ಮವರ ಮರಣ ಪ್ರಮಾಣಪತ್ರ ನೀಡಬೇಕು ಎಂದು ಕಾಣೆಯಾದ ಲೋಕೇಶ್ ,ಜಗನ್ನಾಥ್ ಕುಟುಂಬ ಮನವಿ ಮಾಡಿದ್ದು ಜೊತೆಗೆ ಶೋಧ ಕಾರ್ಯ ಮುಂದುವರೆಸುವಂತೆ ಸಹ ಆಗ್ರಹಿಸಿದ್ದಾರೆ.

ನತದೃಷ್ಟ ಲೋಕೇಶ್ ಕುಟುಂಬ!

Shiruru news
ಲೋಕೇಶ್ ಸಹೋದರ

ಭೂ ಕುಸಿತದಲ್ಲಿ ಮೃತರಾದ ಎಲ್ಲಾ ಕುಟುಂಬಗಳಿಗೂ ಪರಿಹಾರ ದೊರೆತಿದೆ. ಕೇರಳದ ಅರ್ಜುನ್ ಕುಟುಂಬಕ್ಕೆ ಪರಿಹಾರದ ಮಹಾಪೊರವೇ ಹರುದುಬಂದರೇ ,ಉಳಿದವರಿಗೂ ಸಹ ಪರಿಹಾರದ ಜೊತೆ ಹೃದಯವಂತ ಜನರು ಸಹಾಯ ಮಾಡಿದ್ದಾರೆ.

ಇನ್ನು ಜಗನ್ನಾಥ್ ಕುಟುಂಬ ಕ್ಕೆ ಪರಿಹಾರದ ಜೊತೆ ಅವರ ಇಬ್ಬರು ಮಕ್ಕಳಿಗೆ ಕೆಲಸ ಸಹ ನೀಡಲಾಗಿದೆ. ಆದರೇ ಗಂಗೆ ಕೊಳ್ಳದ ಲೋಕೇಶ್ ಕುಟುಂಬಕ್ಕೆ ಮಾತ್ರ ಪರಿಹಾರ ಇದೀಗ ನಾಲ್ಕು ತಿಂಗಳ ಅಂಚಿನಲ್ಲಿ ಸಿಕ್ಕಿದೆ. ಆದರೇ ಈ ಕುಟುಂಬಕ್ಕೆ ಸಾಂತ್ವನದ ಮಾತು ಬಿಟ್ಟರೇ ಬೇರೇ ಏನೂ ದೊರೆತಿಲ್ಲ. ಕೊನೆ ಪಕ್ಷ ಈ ಕುಟುಂಬದ ಈಗಿರುವ  ಇಬ್ಬರು ಮಕ್ಕಳಲ್ಲಿ  ಒಬ್ಬರಿಗೆ ದುರಂತಕ್ಕೆ ಕಾರಣವಾದ IRB ಕಂಪನಿಯಲ್ಲಿ ಕೆಲಸ ನೀಡಿದರೇ ಕೊನೆ ಪಕ್ಷ ಆತನ ಕುಟುಂಬಕ್ಕೆ ನೆರವಾದಂತೆ ಆಗುತ್ತದೆ. ಆದರೇ ಈ ಬಗ್ಗೆ ಯಾರ ದ್ವನಿಯೂ ಕೇಳದೇ ಇರುವುದು ದುರಂತ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ