Shivamogaa: ಹೊಸನಗರದ ಕೊಡಚಾದ್ರಿ ಬೆಟ್ಟದಲ್ಲಿ ಚೀಪ್ ಪಲ್ಟಿ ಎಂಟು ಪ್ರವಾಸಿಗರಿಗೆ ಗಾಯ
Shivamogaa:- ಮಳೆಗಾಲದ ಕೊನೆಯ ದಿನಗಳಲ್ಲಿ ಪಶ್ಚಿಮ ಘಟ್ಟ ಭಾಗದ ಕೊಡಚಾದ್ರಿಗೆ ಪ್ರಯಾಣಿಸುವುದೇ ಒಂದು ರೋಚಕ. ಹೀಗಾಗಿ ಬರುವ ಪ್ರವಾಸಿಗರು (tourist) ಬೆಟ್ಟ ಗುಡ್ಡಗಳ ಕಡಿದಾದ ಹಾದಿಯಲ್ಲಿ ಹೋಗುವುದು ಮಾಮೂಲು .ಆದ್ರೆ ಇಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಕ್ಕೆ ತೆರಳುತ್ತಿದ್ದ ಜೀಪ್ ಒಂದು ಇಂದು ಬೆಳಿಗ್ಗೆ ಪಲ್ಟಿಯಾದ ಘಟನೆ ನಡೆದಿದೆ.
ಕೊಲ್ಲೂರಿನಿಂದ ಕೊಡಚಾದ್ರಿಯ ಕಡೆಗೆ ಪ್ರಯಾಣಿಸುತ್ತಿದ್ದ ಕೇರಳ ಮೂಲದ ಎಂಟು ಜನ ಪ್ರವಾಸಿಗರನ್ನು ಕರೆದೊಯ್ಯುತಿದ್ದ ಜೀಪ್, ಚಾಲಕನ ಅತಿ ವೇಗದಿಂದ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಈ ಜೀಪ್ ನಿಟ್ಟೂರು–ಕಟ್ಟಿನಹೊಳೆ ಮಾರ್ಗದ ಕುಂಬಳೆ ಗ್ರಾಮದ ಬಳಿ ಅಪಘಾತವಾಗಿದ್ದು ಅಪಘಾತದಲ್ಲಿ ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾರಿಗೂ ದೊಡ್ಡ ಸಮಸ್ಯೆಯಾಗಲಿಲ್ಲ.
ಜೀಪ್ ಭಾಗಶಃ ಜಖಂಗೊಂಡಿದ್ದು, ಹೊಸನಗರದ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಚಾದ್ರಿ ಬೆಟ್ಟದ ವಿಶೇಷತೆ ಏನು.
ಪ್ರಕೃತಿ ಹಾಗೂ ಚಾರಣ ಪ್ರಿಯರಿಗೆ ಹೇಳಿಮಾಡಿಸಿದ ಸ್ಥಳ ಕೊಡಚಾದ್ರಿ.ಕೊಡಚಾದ್ರಿ ಬೆಟ್ಟವು ದಕ್ಷಿಣ ಭಾರತದ ಪಶ್ಚಿಮ ಘಟ್ಟದ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಪರ್ವತ ಶಿಖರ.
ಅರಬ್ಬಿ ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರದಲ್ಲಿದೆ. ಕೊಡಚಾದ್ರಿ ತನ್ನ ದಟ್ಟವಾದ ಅರಣ್ಯ, ಅದ್ಭುತ ಸೂರ್ಯೋದಯ ಮತ್ತು ಸೂರ್ಯಾಸ್ತಗಳಿಗೆ ಹೆಸರುವಾಸಿಯಾಗಿದೆ.
ಮಳೆಗಾಲದಲ್ಲಿ ಇಲ್ಲಿಗೆ ಹೋಗುವುದೇ ತ್ರಾಸದಾಯಕ.ಕಡಿದಾದ ಮತ್ತು ಸೂಕ್ತ ವ್ಯವಸ್ಥೆ ಇಲ್ಲದ ರಸ್ತೆಯಲ್ಲಿ ಪ್ರವಾಸಿಗರಿಗೆ ಚೀಪ್ ವ್ಯವಸ್ಥೆಗಳಿವೆ. ನಡೆದುಕೊಂಡು ಸಹ ಚಾರಣ ರೀತಿಯಲ್ಲಿ ಇಲ್ಲಿಗೆ ತಲುಪಬಹುದು.
ಉಡುಪಿ ಜಿಲ್ಲೆಯ ಕೊಲ್ಲೂರಿನಿಂದ ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸನಗರ , ನಿಟ್ಟೂರಿನಿಂದಲೂ ತೆರಳಲು ಜೀಪ್ ವ್ಯವಸ್ಥೆ ಇದೆ.
ಈ ಭಾಗದಲ್ಲಿ ಬರುವವರು ಪ್ರವಾಸಿಗರು ಪರಿಸರ ಪ್ರವಾಸೋಧ್ಯಮದ ಜೊತೆ ಧಾರ್ಮಿಕ ಸ್ಥಳಗಳ ವೀಕ್ಷಣೆಗೂ ಅವಕಾಶವಿದೆ.