Shivamogga ಸಿಗಂದೂರಿನಲ್ಲಿ ಸೇತುವೆಯಾದ್ರೂ ಲಾಂಚ್ ಸ್ಥಗಿತವಿಲ್ಲ -ಜಲಸಾರಿಗೆ ಮಂಡಳಿ ಕಾರ್ಯನಿರ್ವಹಣಾಧಿಕಾರಿ.
Shivamogga ಸಿಗಂದೂರಿನಲ್ಲಿ ಸೇತುವೆಯಾದ್ರೂ ಲಾಂಚ್ ಸ್ಥಗಿತವಿಲ್ಲ -ಜಲಸಾರಿಗೆ ಮಂಡಳಿ ಕಾರ್ಯನಿರ್ವಹಣಾಧಿಕಾರಿ.
ಕಾರವಾರ/ಶಿವಮೊಗ್ಗ :-ಕರ್ನಾಟಕದ ಕೊಲ್ಲೂರು ಮತ್ತು ಸಿಗಂದೂರು ದೇಗುಲಗಳ ಸಂಪರ್ಕ ಸರಳಗೊಳಿಸುವ ಮತ್ತು ಶರಾವತಿ ಹಿನ್ನೀರು ಭಾಗದ ಜನರಿಗೆ ನೆರವಾಗಲಿರುವ ಸಿಗಂದೂರು (siganduru) ಸೇತುವೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಸೇತುವೆ ಲೋಕಾರ್ಪಣೆಯಾಗಲಿದೆ.
ಇದನ್ನೂ ಓದಿ:-Sigandur ಸೇತುವೆ ಬಹುತೇಕ ಪೂರ್ಣ ಯಾವಾಗ ಉದ್ಘಾಟನೆ ಗೊತ್ತಾ?
ಈ ಬೆನ್ನಲ್ಲೇ ಸಿಗಂದೂರು -ತುಂಬ್ರಿ ಭಾಗದಲ್ಲಿ ಬಂದರು ಇಲಾಖೆಯಿಂದ ಸಾರ್ವಜನಿಕರ ಓಡಾಟಕ್ಕೆ ಬಿಟ್ಟಿದ್ದ ಲಾಂಚ್ ಗಳು ಸಹ ಸ್ಥಗಿತವಾಗಲಿದೆ. ಆದರೇ ಈ ಲಾಂಚ್ ಗಳನ್ನು ಪ್ರವಾಸೋಧ್ಯಮಕ್ಕೆ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದ್ದು ಈಗಿರುವ ಲಾಂಚ್ ಗಳು ಸೇತುವೆ ಉದ್ಘಾಟನೆ ನಂತರವೂ ಜನರಿಗೆ ದೊರೆಯಲಿದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ರಾಯಪುರ ತಿಳಿಸಿದ್ದಾರೆ.
ಕಾರವಾರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಶರಾವತಿ ಹಿನ್ನೀರಿನ ಹೊಳೆಬಾಗಿಲು, ಮುಪ್ಪಾನೆ, ಹಸರಮಕ್ಕಿ ಭಾಗದಲ್ಲಿ ಒಟ್ಟು ಐದು ಲಾಂಚ್ ಕಾರ್ಯನಿರ್ವಹಿಸುತ್ತಿದೆ. ಈ ಲಾಂಚ್ ನಲ್ಲಿವ17 ಜನ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತಿದ್ದು ಸೇತುವೆ ನಿರ್ಮಾಣವಾದ ನಂತರವೂ ಪ್ರವಾಸೋಧ್ಯಮದ ದೃಷ್ಟಿಯಿಂದ ಈ ಲಾಂಚ್ ಗಳನ್ನು ಇಲ್ಲಿಯೇ ಉಳಸಲಾಗುವುದು.
ಸಾರ್ವಜನಿಕ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಮುಪ್ಪಾನೆ ಲಾಂಚ್ ಸ್ಥಗಿತ.
ಶಿವಮೊಗ್ಗ (shivamogga) ಜಿಲ್ಲೆಯ ಶರಾವತಿ ಹಿನ್ನೀರು ಪ್ರದೇಶವಾದ ಮುಪ್ಪಾನೆಯಲ್ಲಿ ಜಲಸಾರಿಗೆ ಲಾಂಚ್ ನನ್ನು ಕೆಲವು ದಿನದ ಮಟ್ಟಿಗೆ ಸ್ಥಗಿತ ಮಾಡಲಾಗಿದೆ.
ಲಾಂಚ್ ನಲ್ಲಿ ತಾಂತ್ರಿಕ ಸಮಸ್ಯೆ ಬಂದ ಕಾರಣ ಸ್ಥಗಿತ ಮಾಡಲಾಗಿದ್ದು ದುರಸ್ತಿ ಕಾರ್ಯ ನಡೆಸಲಾಗುತಿದ್ದು ಇನ್ನೆರಡು ದಿನ ಕಾರ್ಗಲ್ ಭಾಗದಿಂದ ಸಿಗಂದೂರು ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಸಂಚಾರ ವ್ಯತ್ಯಯವಾಗಲಿದೆ.