For the best experience, open
https://m.kannadavani.news
on your mobile browser.
Advertisement

Shivamogga ಕಸ ನಿರ್ವಹಣ ಘಟಕವಾದ ಜಿಲ್ಲಾಧಿಕಾರಿ ಕಚೇರಿ ಮಹಡಿ! ಹೀಗೂ ಉಂಟು ನೋಡಿ.

Shivamogga news 28 November 2024:- ಸರ್ಕಾರಿ ಕಚೇರಿ (office) ಅಂದ್ರೆ ಅಲ್ಲಿ ಸಿಬ್ಬಂದಿಗಳ ಜೊತೆ ಕಡತಗಳನ್ನು ಕಾಣಬಹುದು ಆದ್ರೆ ಶಿವಮೊಗ್ಗ (Shivamogga) ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರುವ ಈ ಕಚೇರಿಯಲ್ಲಿ ಕಡತಗಳಿಗಿಂತ ಕಸವೇ ತುಂಬಿ ತುಳುಕುತ್ತಿವೆ.
05:13 PM Nov 28, 2024 IST | ಶುಭಸಾಗರ್
shivamogga ಕಸ ನಿರ್ವಹಣ ಘಟಕವಾದ ಜಿಲ್ಲಾಧಿಕಾರಿ ಕಚೇರಿ ಮಹಡಿ  ಹೀಗೂ ಉಂಟು ನೋಡಿ

Shivamogga news 28 November 2024:- ಸರ್ಕಾರಿ ಕಚೇರಿ (office) ಅಂದ್ರೆ ಅಲ್ಲಿ ಸಿಬ್ಬಂದಿಗಳ ಜೊತೆ ಕಡತಗಳನ್ನು ಕಾಣಬಹುದು ಆದ್ರೆ ಶಿವಮೊಗ್ಗ (Shivamogga) ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರುವ ಈ ಕಚೇರಿಯಲ್ಲಿ ಕಡತಗಳಿಗಿಂತ ಕಸವೇ (garbage) ತುಂಬಿ ತುಳುಕುತ್ತಿವೆ.

Advertisement

ಹೌದು. ಲೋಕಸಭಾ ಸದಸ್ಯರ ಕಚೇರಿ, (office)ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಪ್ರಮುಖ ಕಚೇರಿಗಳು ಕಾರ್ಯನಿರ್ವಹಣೆ ಮಾಡುತ್ತಿರುವ ಹಾಗೂ ಪ್ರತಿನಿತ್ಯ ನೂರಾರು ನಾಗರೀಕರು ಆಗಮಿಸುವ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಮೊದಲ ಮಹಡಿಯಲ್ಲಿರುವ ಕೊಠಡಿಯೊಂದು, ಅವ್ಯವಸ್ಥೆಯ ಕಾರಣದಿಂದ ಸದ್ದು ಮಾಡುತ್ತಿದೆ.

ಇದನ್ನೂ ಓದಿ:-Uttara kannda| ಶಾಲೆಯ ನಿರ್ಲಕ್ಷ ಶೌಚಾಲಯಕ್ಕೆ ಹೋದ ಪುಟ್ಟ ಬಾಲಕಿಗೆ ವಿದ್ಯುತ್ ಶಾಕ್ ನಿಂದ ಮೃತ

ಈ ಮೊದಲು ಶೌಚಾಲಯವಿದ್ದ ಸದರಿ ಕೊಠಡಿಯ ತುಂಬೆಲ್ಲ ಕಸದ ರಾಶಿಯನ್ನೇ ತುಂಬಲಾಗಿದೆ. ಇದರ ಜೊತೆಗೆ ಮುರಿದ ಪೀಠೋಪಕರಣಗಳನ್ನು ಹಾಕಲಾಗಿದೆ. ಇದರಿಂದ ಕೊಠಡಿಯು ಅಕ್ಷರಶಃ ಘನತ್ಯಾಜ್ಯ ವಿಲೇವಾರಿ ಕೇಂದ್ರವಾಗಿ (garbege unit)ಮಾರ್ಪಟ್ಟಿದ್ದು, ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಘನತ್ಯಾಜ್ಯ ಸಂಗ್ರಹಣೆಯ ತಾಣದಂತಾಗಿರುವ ಕೊಠಡಿಯನ್ನು, ಸ್ವಚ್ಛವಾಗಿಟ್ಟುಕೊಳ್ಳುವತ್ತ ಚಿತ್ತ ಹರಿಸಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.

ಇದನ್ನೂ ಓದಿ:-HOSANAGARA: ಕುಸಿದ ದರೆ ರಸ್ತೆಯಲ್ಲಿ ಬಿರುಕು ಸಂಚಾರಕ್ಕೆ ತಂತು ಕಂಟಕ!

ಕಚೇರಿಗಳು ಸ್ವಚ್ಛವಾಗಿರಬೇಕು ಆದರೇ ಇಲ್ಲಿ ಕಚೇರಿಯ ಅನುಪಯುಕ್ತ ವಸ್ತುಗಳು ಸಂಗ್ರಹಣೆಯ ಘಟಕವಾಗಿ ಬದಲಾಗಿದೆ. ಇನ್ನಾದರೂ ಈ ಬಗ್ಗೆ ಗಮನ ಹರಿಸಿ ಆಡಳಿತ ವರ್ಗ ಸರಿಪಡಿಸಿಕೊಳ್ಳಲಿ ಎಂಬುದು ನಮ್ಮ ಹಾರೈಕೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ