For the best experience, open
https://m.kannadavani.news
on your mobile browser.
Advertisement

Rain News| ಮುಳುಗಿದ ಭದ್ರಾವತಿ ಜಿಲ್ಲೆಯಾಧ್ಯಾಂತ ಅಬ್ಬರದ ಮಳೆ.

ಸಾಗರದಲ್ಲಿ ಸಹ ಮಳೆಯಾಗುತಿದ್ದು ಮಧ್ಯರಾತ್ರಿ ವೇಳೆ ಹೆಚ್ಚಿನ ಮಳೆಯಾಗುವ ಸೂಚನೆ ಇದ್ದು ,ಬಹುತೇಕ ಜಿಲ್ಲೆಯ ಹಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ.
11:04 PM Oct 11, 2024 IST | ಶುಭಸಾಗರ್
rain news  ಮುಳುಗಿದ ಭದ್ರಾವತಿ ಜಿಲ್ಲೆಯಾಧ್ಯಾಂತ ಅಬ್ಬರದ ಮಳೆ

RAINFALL NEWS, 11 OCTOBER 2024 : ಶಿವಮೊಗ್ಗ ಜಿಲ್ಲೆಯಾದ್ಯಂತ ರಾತ್ರಿ ವೇಳೆಗೆ ಜೋರು ಮಳೆ (Heavy Rain) ಆರಂಭವಾಗಿದೆ. ವಿವಿಧೆಡೆ ರಸ್ತೆಯ (road)ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಭದ್ರಾವತಿ ತಾಲೂಕಿನಲ್ಲಿ ಮಳೆ ಅಬ್ಬರಕ್ಕೆ ತಗ್ಗು ಪ್ರದೇಶಗಳಲ್ಲಿನ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ.

Advertisement

Shivamogga rain news

ಭದ್ರಾವತಿಯ (Badravathi) ಎಮ್ಮೆಹಟ್ಟಿ, ಅರೆಬಿಳಚಿ, ನಾಗತಿಬೆಳಗಲು, ತಡಸ, ಕಾಗೆಕೊಡಮಗ್ಗಿ, ಅರಳಹಳ್ಳಿ, ಯರೇಹಳ್ಳಿಯಲ್ಲಿ ಭಾರಿ ಮಳೆಯಾಗಿದೆ. ಇದರಿಂದಾಗಿ ರಸ್ತೆ ಮೇಲೆ ನೀರು ನಿಂತು ಹಲವು ವಾಹನಗಳು ನೀರಿನಲ್ಲಿ ಮುಳಿಗಿದರೇ ರಸ್ತೆ ಸಂಚಾರಕ್ಕೆ ವಿಘ್ನ ಎದುರಾಗಿದೆ.

ಇದನ್ನೂ ಓದಿ:-Shivamogga | ಮಳೆ ಅವಾಂತರ! ಎಲ್ಲಿ ಏನಾಯ್ತು ವಿವರ ಇಲ್ಲಿದೆ.

ಭದ್ರಾವತಿ ತಾಲೂಕಿನಲ್ಲಿ ಮಳೆ ಅಬ್ಬರಿಸುತ್ತಿದೆ. ಸದ್ಯ ಮಾಹಿತಿ ಪ್ರಕಾರ ಭದ್ರಾವತಿ ತಾಲೂಕು ಯರೆಹಳ್ಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಯಡೆಹಳ್ಳಿ ಭಾಗದಲ್ಲಿ 101 ಮಿ.ಮೀ.ನಷ್ಟು ಮಳೆಯಾಗಿದೆ ಎಂದು ಕೇಂದ್ರದ ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಸಾಗರದಲ್ಲಿ ಸಹ ಮಳೆಯಾಗುತಿದ್ದು ಮಧ್ಯರಾತ್ರಿ ವೇಳೆ ಹೆಚ್ಚಿನ ಮಳೆಯಾಗುವ ಸೂಚನೆ ಇದ್ದು ,ಬಹುತೇಕ ಜಿಲ್ಲೆಯ ಹಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ.

ಇದನ್ನೂ ಓದಿ:-Cyber crime| ಕೊಠಡಿಯಲ್ಲಿ ಗಂಡ ಹೆಂಡತಿ Digital Arrest ಏನದು ಘಟನೆ?

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ