Shivamogga ಸದ್ದಿಲ್ಲದೇ ನೆರವೇರಿತು ಸಂಸದ ಬಿ.ವೈ ರಾಘವೇಂದ್ರ ಪುತ್ರನ ನಿಶ್ಚುತಾರ್ಥ - ಯಾರ ಜೊತೆ ಗೊತ್ತಾ?
Shivamogga ಸದ್ದಿಲ್ಲದೇ ನೆರವೇರಿತು ಸಂಸದ ಬಿ.ವೈ ರಾಘವೇಂದ್ರ ಪುತ್ರನ ನಿಶ್ಚುತಾರ್ಥ - ಯಾರ ಜೊತೆ ಗೊತ್ತಾ?
ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರರವರ (BY Ragavendra) ಪುತ್ರ ಸುಭಾಷ್ ರವರ ನಿಶ್ಚಿತಾರ್ಥ ಕುಟುಂಬದ ಕೆಲವೇ ಸದಸ್ಯರೊಂದಿಗೆ ಕಲುಬುರುಗಿಯಲ್ಲಿ ನೆರವೇರಿತು.
ಶರಣ ಬಸವೇಶ್ವರ ಸಂಸ್ಥಾನದ ಕುಟುಂಬಕ್ಕೆ ಸೇರಿದ, ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷರೂ ಆದ ಲಿಂಗರಾಜಪ್ಪ ಅಪ್ಪ ಅವರ ಪುತ್ರಿ ಶ್ರಾವಣಾ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮೊಮ್ಮಗ ಸುಭಾಷ್ ಅವರ ನಿಶ್ಚಿತಾರ್ಥ ನೆರವೇರಿತು.
ಇದನ್ನೂ ಓದಿ:-Shivamogga ಸಿಗಂದೂರಿನಲ್ಲಿ ಸೇತುವೆಯಾದ್ರೂ ಲಾಂಚ್ ಸ್ಥಗಿತವಿಲ್ಲ -ಜಲಸಾರಿಗೆ ಮಂಡಳಿ ಕಾರ್ಯನಿರ್ವಹಣಾಧಿಕಾರಿ.
ಯಡಿಯೂರಪ್ಪನವರು ಈ ಹಿಂದೆ ತಮ್ಮ ಕಿರಿಯ ಪುತ್ರ ಬಿವೈ ವಿಜಯೇಂದ್ರರವರಿಗೂ ಕೂಡಾ ಕಲುಬುರುಗಿಯಿಂದಲೇ ಹೆಣ್ಣನ್ನು ತಂದಿದ್ದರು. ಈ ನಿಶ್ಚಿತಾರ್ಥದಲ್ಲಿ ಯಡಿಯೂರಪ್ಪ ಕುಟುಂಬದ ಸದಸ್ಯರು ಸೇರಿದಂತೆ ಪ್ರಮುಕರು ಭಾಗಿಯಾಗಿದ್ದರು.
ವಿವಾಹದ ದಿನಾಂಕ ಸಹ ನಿಗದಿಯಾಗಬೇಕಿದ್ದು ಸದ್ಯ ಕುಟುಂಬಸ್ತರೊಂದಿಗೆ ಈ ನಿಶ್ಚಿತಾರ್ಥ ನೆರವೇರಿದೆ.