Sagar |ಮನೆಯ ವಿದ್ಯತ್ ಸಂಪರ್ಕ ಕಡಿತಗೊಳಿಸಿ ವೃದ್ಧೆಯ ಮಾಂಗಲ್ಯ ಸರ ಕದ್ದ ಕಳ್ಳನ ಬಂಧನ
Sagar |ಮನೆಯ ವಿದ್ಯತ್ ಸಂಪರ್ಕ ಕಡಿತಗೊಳಿಸಿ ವೃದ್ಧೆಯ ಮಾಂಗಲ್ಯ ಸರ ಕದ್ದ ಕಳ್ಳನ ಬಂಧನ

Sagar news :- ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮನೆಯೊಳಗೆ ನುಗ್ಗಿ ವೃದ್ಧೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದ ಪ್ರಕರಣವನ್ನ ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.
ಫೆ.28ರಂದು ಸಂಜೆ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶೆಡ್ತಿಕೆರೆ ಗ್ರಾಮದಲ್ಲಿ ವೃದ್ಧ ದಂಪತಿಗಳಾದ ಕೃಷ್ಣಭಟ್ ಮತ್ತು ಸಾವಿತ್ರಮ್ಮ ನವರು ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಮನೆಯ ವಿಧ್ಯುತ್ ಸಂಪರ್ಕ ಕಡಿತಗೊಳಿಸಿ ಮನೆಯೊಳಗೆ ನುಗ್ಗಿದ ಅಪರುಚಿತನೋರ್ವ ವೃದ್ದ ಮಹಿಳೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುವ ಘಟನೆ ನಡೆದಿತ್ತು.
ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆರೋಪಿಯ ಪತ್ತೆಗಾಗಿ ತಂಡ ರಚಿಸಿದ್ದು ತನಿಖಾ ತಂಡವು ಪ್ರಕರಣ ದಾಖಲಾದ 24 ಗಂಟೆಯ ಒಳಗಾಗಿ ಶಟ್ತಿಕೆರೆಯ ಆರೋಪಿ ರವಿ ಕುಮಾರ್ ಸಿ(39) ಈತನನ್ನು ಬಂಧಿಸಿ ಈತನಿಂದ
ಅಂದಾಜು ಮೌಲ್ಯ 2,26,000/- ರೂಗಳ 26 ಗ್ರಾಂ 400 ಮಿಲಿ ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ವಶಕ್ಕೆ ಪಡೆದಿದ್ದಾರೆ.