Siddapura ಜಾತ್ರೆಯಲ್ಲಿ ಜನರ ಮೇಲೆ ನುಗ್ಗಿದ ಕಾರು ಓರ್ವ ಮಹಿಳೆ ಸಾವು 9ಕ್ಕೂ ಹೆಚ್ಚು ಜನರಿಗೆ ಗಾಯ
Siddapura news :- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ದ ರವೀಂದ್ರ ನಗರದ (siddapura ravindra nagar) ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಅಯ್ಯಪ್ಪ ಸ್ವಾಮಿ ಜಾತ್ರ ಮಹೋತ್ಸವ ನಡೆಯುತಿದ್ದ ಸಂದರ್ಭದಲ್ಲಿ ವೇಗವಾಗಿ ವಾಹನ ಚಲಾಯಿಸಿ ಅಪಘಾತ ಪಡಿಸಿ ಓರ್ವ ಯುವತಿಯ ಸಾವಿಗೆ ಕಾರಣವಾದರೇ, ಒಂಬತ್ತು ಜನ ಗಂಭೀರ ಗಾಯವಾದ ಘಟನೆ ನಡೆದಿದೆ.

ಸಿದ್ದಾಪುರ ನಗರದ ರೋಷನ್ ಎಂಬಾತನೇ ಅಪಘಾತ ಪಡಿಸಿದವನಾಗಿದ್ದು ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
ಅಪಘಾತ ಪಡಿಸಿದ ಕಾರು
ಈತ ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುತಿದ್ದ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡವರನ್ನು ಸಿದ್ಧಾಪುರದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಹಲವರಿಗೆ ಗಂಭೀರ ಗಾಯವಾಗಿದೆ.
ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಹೆಚ್ಚಿನ ತನಿಖೆ ನಡೆಯುತಿದ್ದು ,ಇನ್ನು ಎಷ್ಟು ಜನರಿಗೆ ಗಾಯವಾಗಿದೆ ಎಂಬುದು ತಿಳಿದು ಬರಬೇಕಿದೆ.