Siddapura ಅಯ್ಯಪ್ಪ ಸ್ವಾಮಿ ಜಾತ್ರೆಯಲ್ಲಿ ಕಾರು ಹರಿಸಿದ ರೋಷನ್ -ಉದ್ದೇಶಪೂರ್ವಕವಾಗಿ ಮಾಡಿದನಾ? ಜನ ಏನಂದ್ರು?
Siddapura news :- ಸಿದ್ದಾಪುರ ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಮದ್ಯ ಸೇವಿಸಿ ಕಾರು ಹರಿಸಿದ ಪ್ರಕರಣ ಇದೀಗ ಟ್ವಿಷ್ಟ್ ಪಡೆದುಕೊಂಡಿದೆ.ಆರೋಪಿ ರೋಷನ್ ಪರ್ನಾಂಡಿಸ್ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗುದ್ದು ಕಲಂ 281, 125(ಎ),125(ಬಿ),105 ಭಾರತೀಯ ನ್ಯಾಯ ಸಂಹಿತೆ 2023 ನಡಿ ಪ್ರಕರಣ ವನ್ನು ಪೊಲೀಸರು (police)ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:-Siddapura ಜಾತ್ರೆಯಲ್ಲಿ ಜನರ ಮೇಲೆ ನುಗ್ಗಿದ ಕಾರು ಓರ್ವ ಮಹಿಳೆ ಸಾವು 9ಕ್ಕೂ ಹೆಚ್ಚು ಜನರಿಗೆ ಗಾಯ
ನಿನ್ನೆ ರಾತ್ರಿ ಸಿದ್ದಾಪುರದ ರವೀಂದ್ರ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜಾತ್ರೆಗೆ ಬಂದಿದ್ದ ಭಕ್ತರ ಮೇಲೆ ಬೇಕಾಬಿಟ್ಟಿಯಾಗಿ ಕಾರು ಚಲಾಯಿಸಿದ್ದ ರೋಷನ್
ಸಿದ್ಧಾಪುರ ಕವಲಕೊಪ್ಪದ ದೀಪಾ ರಾಮಗೊಂಡ (21) ಎಂಬ ಯುವತಿ ಸಾವಿಗೆ ಕಾರಣನಾಗುವ ಜೊತೆ ಎಂಟು ಜನರಿಗೆ ಗಾಯಪಡಿಸಿದ್ದನು.
ಉದ್ದೇಶ ಪೂರ್ವಕವೇ?

ರೋಷನ್ ರವೀಂದ್ರ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯೇ ಈತ ಮನೆ ಹೊಂದ್ದಾನೆ. ಇಸ್ರೇಲ್ (Israel )ದೇಶ ದಲ್ಲಿ ಉದ್ಯೋಗಮಾಡಿಕೊಂಡಿದ್ದ ಈತ ಮರಳಿ ಸಿದ್ದಾಪುರಕ್ಕೆ ಆಗಮಿಸಿದ್ದ. ಕೈಯಲ್ಲಿ ಏನು ಕೆಲಸವಿಲ್ಲದಿದ್ದರೂ ಬಿಂದಾಸ್ ಆಗಿ ಕರ್ಚುಮಾಡಿಕೊಂಡು ಮದ್ಯವೆಸನಿಯಾಗಿದ್ದ.
ಕಳೆದ ಎರಡು ದಿನದ ಹಿಂದೆ ಇದೇ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯುತಿದ್ದ ಭಜನೆಯಿಂದ ಕೋಪಗೊಂಡು ಗಲಾಟೆ ಮಾಡಿಹೋಗಿದ್ದ ಎಂದು ಕೆಲವರು ಹೇಳುತಿದ್ದಾರೆ.
ಇನ್ನು ಕುಡಿದ ಮತ್ತಲ್ಲಿ ಕಾರು ಚಲಾಯಿಸಿ ಬಂದ ಈತ ರಸ್ತೆಯ ಭಾಗದಲ್ಲಿ ಬ್ಯಾರಿಕೇಟ್ ಹಾಕಿದ್ದನ್ನು ನೋಡಿದ್ದು ಮೊದಲು ವಾಹನವನ್ನು ತೆಗೆದುಕೊಂಡು ಹೋಗಲು ಜಾಗವಿದ್ದರೂ ,ಅಲ್ಲಿ ಡಿಕ್ಕಿಹೊಡೆಸಿ ನಂತರ ಅದೇ ವೇಗದಲ್ಲಿ ಗಾಡಿ ಚಲಾಯಿಸಿ ರಸ್ತೆಯ ಪಕ್ಕದಲ್ಲಿ ಬರುತಿದ್ದ ಅಕ್ಕ ತಂಗಿಯರಿಗೆ ಡಿಕ್ಕಿ ಹೊಡೆಸಿದ್ದಾನೆ.
ಆಗ ದೀಪ ಸ್ಥಳದಲ್ಲೇ ಸಾವುಕಂಡಿದ್ದಾಳೆ.

ನಂತರ ಕಾಂಪೌಂಡ್ ಗೆ ಡಿಕ್ಕಿಹೊಡೆಸಿದ್ದಾನೆ. ಮತ್ತೆ ರಿವರ್ಸ ತೆಗೆದು ಏಕಾಏಕಿ ಮುಂದೆ ದೇವರ ಪಲ್ಲಕ್ಕಿ ಬರುವುದಕ್ಕಾಗಿ ಕಾದಿದ್ದ ಜನರ ಮೇಲೆ ಹತ್ತಿಸಿದ್ದಾನೆ.
ಈವೇಳೆ ಕರ್ತವ್ಯದಲ್ಲಿ ಇದ್ದ ಪೊಲೀಸ್ ಸಿಬ್ಬಂದಿ ವಿಷಲ್ ಹೊಡೆದು ಗಾಡಿಯ ಹಿಂದೆ ಬಾರದ್ದಿದ್ದರೇ ಹಲವರ ಪ್ರಾಣ ಹೋಗುತಿತ್ತು.
ಇದನ್ನೂ ಓದಿ:-Siddapura ಮದ್ಯಕುಡಿದವನ ಪುಂಡಾಟ|ಸತ್ತವರೆಷ್ಟು ? ಗಾಯಗೊಂಡವರು ಯಾರು?
ಇನ್ನು ಇಂದು ಸಿದ್ದಾಪುರ ದಲ್ಲಿ ಈತ ಮಾಡಿದ ಕ್ರೌರ್ಯವನ್ನು ಖಂಡಿಸಿ ಸ್ಥಳೀಯ ಜನರು ಹಾಗೂ ಬಿಜೆಪಿ ವತಿಯಿಂದ ಸೌಕ್ತ ತನಿಖೆಗೆ ಆಗ್ರಹಿಸಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಈತ ಬೇಕೆಂದೇ ಹೀಗೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಅಪಘಾತ ಪಡಿಸಿದ ರೋಷನ್ ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಡಪಟ್ಟಿದೆ. ಇದೀಗ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.