Siddapura: ಶಾಲಾ ವಿದ್ಯಾರ್ಥಿಗೆ ಥಳಿಸಿ ಅರ್ಧ ದಾರಿಯಲ್ಲೇ ಇಳಿಸಿದ ನಿರ್ವಾಹಕ!
Report by -shubha sagar
Siddapura News 06 November 2024:- ಶಾಲೆಗೆ (school) ಹೋಗಲು ಬಸ್ಸು ಹತ್ತಿದ್ದ ವಿದ್ಯಾರ್ಥಿ ಜೊತೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಅನುಚಿತವಾಗಿ ವರ್ತಿಸಿದ್ದಾರೆ.
ಮುಂಡಗೆತೆಗ್ಗಿಂದ ಸಿದ್ದಾಪುರಕ್ಕೆ (siddapura) ಬಂದಿದ್ದ ಮದನ ಲೋಕೇಶ ನಾಯ್ಕ ಶಿರವಂತೆಯ ಶಾಲೆಗೆ ಹೋಗಬೇಕಿತ್ತು. ಅಲ್ಲಿ ಅವರು 8ನೇ ತರಗತಿ ವಿದ್ಯಾರ್ಥಿಯಾಗಿದ್ದರು. ಇದಕ್ಕಾಗಿ ಆ ವಿದ್ಯಾರ್ಥಿ ಶಿರಸಿ - ಸಿದ್ದಾಪುರ - ಸಾಗರ ಬಸ್ ಹತ್ತಿದ್ದರು.
ಇದನ್ನೂ ಓದಿ:-Siddapura : ಭತ್ತದ ಗದ್ದೆಗೆ ದಾಳಿ ಮಾಡಿದ ಒಂಟಿ ಸಲಗ
ಆದರೆ, ಬಸ್ಸಿನ (Busl ನಿರ್ವಾಹಕ ಆ ವಿದ್ಯಾರ್ಥಿಯನ್ನು ಅನಗತ್ಯವಾಗಿ ನಿಂದಿಸಿ ತಳಿಸಿದ್ದಲ್ಲದೇ, ಬಸ್ಸಿನಿಂದ ಹೊರದಬ್ಬಿದ್ದಾರೆ.
ಬಸ್ಸು ಅರೆಂದೂರ್ ಬಳಿ ತಲುಪಿದಾಗ ವಿದ್ಯಾರ್ಥಿಯನ್ನು ಕೆಳಗಿಳಿಸಿದ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಬಸ್ಸು ಸಿಬ್ಬಂದಿ ವರ್ತನೆ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರಿಗೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸುವುದಾಗಿ ಪಾಲಕರು ಮಾಹಿತಿ ನೀಡಿದ್ದಾರೆ.
Feed: invalid feed URL