Siddapura ಕಾಲುಜಾರಿ ಬಿದ್ದು ವಾಡೆಹೊಳೆ ಜಲಪಾತದಲ್ಲಿ ಇಬ್ಬರು ನೀರುಪಾಲು
ಕಾರವಾರ :- ಫಾಲ್ಸ್ (Falls)ನಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಯುವಕರು ನೀರುಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ (siddapura) ನಿಲ್ಕುಂದ ಸಮೀಪದ ವಾಟೆಹೊಳೆ ಜಲಪಾತದಲ್ಲಿ ನಡೆದಿದೆ.
10:12 PM Feb 14, 2025 IST | ಶುಭಸಾಗರ್
Siddapura ಕಾಲುಜಾರಿ ಬಿದ್ದು ವಾಡೆಹೊಳೆ ಜಲಪಾತದಲ್ಲಿ ಇಬ್ಬರು ನೀರುಪಾಲು
Advertisement

ಕಾರವಾರ :- ಫಾಲ್ಸ್ (Falls)ನಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಯುವಕರು ನೀರುಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ (siddapura) ನಿಲ್ಕುಂದ ಸಮೀಪದ ವಾಟೆಹೊಳೆ ಜಲಪಾತದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ವಾಟೆಹೊಳೆ ಜಲಪಾತಕ್ಕೆ (vatehole falls )ಆರು ಜನ ಯುವಕರು ತೆರಳಿದ್ದರು ಈ ವೇಳೆ ಶಿರಸಿ ಮೂಲದ ಸುಹಾಸ್ ಶಟ್ಟಿ (22), ಅಕ್ಷಯ್ ಭಟ್ (22) ಕಾಲುಜಾರಿ ಬಿದ್ದು ನೀರಿನಲ್ಲಿ ತೇಲಿ ಹೋಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಮುಳುಗು ತಜ್ಞರು ಆಗಮಿಸಿ ಶೋಧಕಾರ್ಯ ನಡೆಸಿ ಶವ ಪತ್ತೆ ಮಾಡಿದ್ದಾರೆ . ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement