ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi ಹತ್ತು ವರ್ಷದ ಪ್ರೀತಿಗೆ ಕೈಕೊಟ್ಟ ಯುವತಿ- ಮದುವೆಯಾದ ಹುಡಗನನ್ನು ಬಸ್ ನಲ್ಲಿಯೇ ಇರಿದು ಕೊಂದ ಪಾಗಲ್ ಪ್ರೇಮಿ

ಕಾರವಾರ:-ಹತ್ತು ವರ್ಷದಿಂದ ಪ್ರೀತಿಸುತದ್ದ ಹುಡಿಗಿ ಕೈಕೊಟ್ಟು ಸಿಟ್ಟಿಗೆ ಆಕೆಯ ಗಂಡನನ್ನೇ ಬಸ್ ನಲ್ಲಿ ಪಾಗಲ್ ಪ್ರೇಮಿ ಚಾಕು ಇರಿದು ಕೊಲೆಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi) ನಗರದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದ ಸಮೀಪದ ಬೆಂಗಳೂರಿಗೆ ಸಂಚರಿಸುತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ನಡೆದಿದೆ.
10:29 PM Feb 22, 2025 IST | ಶುಭಸಾಗರ್

Sirsi ಹತ್ತು ವರ್ಷದ ಪ್ರೀತಿಗೆ ಕೈಕೊಟ್ಟ ಯುವತಿ- ಮದುವೆಯಾದ ಹುಡಗನನ್ನು ಬಸ್ ನಲ್ಲಿಯೇ ಇರಿದು ಕೊಂದ ಪಾಗಲ್ ಪ್ರೇಮಿ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ:-ಹತ್ತು ವರ್ಷದಿಂದ ಪ್ರೀತಿಸುತದ್ದ ಹುಡಿಗಿ ಕೈಕೊಟ್ಟು ಸಿಟ್ಟಿಗೆ ಆಕೆಯ ಗಂಡನನ್ನೇ ಬಸ್ ನಲ್ಲಿ ಪಾಗಲ್ ಪ್ರೇಮಿ ಚಾಕು ಇರಿದು ಕೊಲೆಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi) ನಗರದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದ ಸಮೀಪದ ಬೆಂಗಳೂರಿಗೆ ಸಂಚರಿಸುತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ನಡೆದಿದೆ.

ಇದನ್ನೂ ಓದಿ:-Sirsi ಭತ್ತದ ಹುಲ್ಲು ಕೊಂಡೊಯ್ಯುತಿದ್ದ ಲಾರಿಗೆ ಬೆಂಕಿ ! ಸಾವಿರಾರು ರೂಪಾಯಿ ನಷ್ಟ.

ಸಾಗರ (sagar)ತಾಲೂಕಿನ ನೀಚಡಿಯ ಗಂಗಾಧರ್ ಹತ್ಯೆಯಾದವನಾಗಿದ್ದು ,ಪ್ರೀತಮ್ ಡಿಸೋಜ ಚಾಕು ಇರಿದು ಪರಾರಿಯಾದವನಾಗಿದ್ದಾನೆ. ಕಳೆದ ಹತ್ತು ವರ್ಷದಿಂದ ಶಿರಸಿಯ ಪೂಜಾ ಳನ್ನು ಪ್ರೀತಮ್ ಡಿಸೋಜ ಪ್ರೀತಿಸುತಿದ್ದ .ಆಕೆಯೂ ಈತನನ್ನು ಪ್ರೀತಿಸುತಿದ್ದಳು.ಆದರೇ ಕೆಲಸಕ್ಕಾಗಿ ಬೆಂಗಳೂರಿಗೆ ಹೋದ ಪೂಜಾ ಅಲ್ಲಿ ಪರಿಚಯವಾದ ಸಾಗರದ ಗಂಗಾಧರ್ ನನ್ನು ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದಳು.

Advertisement

Sirsi ಬಾಲಕಿ ಮೇಲಿನ ದೌರ್ಜನ್ಯಕ್ಕೆ 20 ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ
ಪತ್ನಿಯ ಸಂಬಂಧಿಕರ ಕಾರ್ಯಕ್ರಮಕ್ಕೆ ಪತ್ನಿಯೊಂದಿಗೆ ಬಂದಿದ್ದ ಗಂಗಾಧರ್ ಇಂದು ರಾತ್ರಿ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಬಸ್ ನಿಲ್ದಾಣದಿಂದ ತೆರಳುತಿದ್ದು ಪ್ರೀತಮ್ ಕೂಡ ಬಸ್ ಗೆ ಹತ್ತಿದ್ದು ಏಕಾ ಏಕಿ ಗಂಗಾಧರ್ ನೊಂದಿಗೆ ಜಗಳ ತೆಗೆದು ಆತನ ಹೃದಯದ ಭಾಗಕ್ಕೆ ಚುಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಘಟನೆ ಸಂಬಂಧ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಗಂಗಾಧರ್ ಪತ್ನಿ ಪೂಜಾಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಆರೋಪಿ ಬಂಧನ !

ಇನ್ನು ಆರೋಪಿ ಕೊಲೆ ಮಾಡಿ ಪರಾರಿಯಾಗಿದ್ದು ವಿಷಯ ಬಾಹಿರವಾಗುತಿದ್ದಂತೆ ಆತ ಶರಣಾಗಿದ್ದು ಇದೀಗ ಆತನನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ.

Advertisement
Tags :
CrimeCrimenewsHeartbreakKarnatakaLoveTragedyMurderShockingIncidentSirsi
Advertisement
Next Article
Advertisement