Sirsi:ಬೆಣ್ಣೆ ಹೋಳೆಯಲ್ಲಿ ತೇಲಿಹೋದ ವಿದ್ಯಾರ್ಥಿಗಳು- ಕಲ್ಲು ಬಂಡೆಯೊಳಗೆ ಸಿಲುಕಿದವನ ರಕ್ಷಣೆ ಮುಂದುವರೆದ ಓರ್ವನ ಶೋಧ ಕಾರ್ಯ
Sirsi:ಬೆಣ್ಣೆ ಹೋಳೆಯಲ್ಲಿ ತೇಲಿಹೋದ ವಿದ್ಯಾರ್ಥಿಗಳು- ಕಲ್ಲು ಬಂಡೆಯೊಳಗೆ ಸಿಲುಕಿದವನ ರಕ್ಷಣೆ ಮುಂದುವರೆದ ಓರ್ವನ ಶೋಧ ಕಾರ್ಯ

ಕಾರವಾರ /sirsi news:-ಲಪಾತ ವೀಕ್ಷಣೆಗಾಗಿ ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಕಾಲುಜಾರಿ ಬಿದ್ದು ನೀರಿನಲ್ಲಿ ಕಾಣೆಯಾಗಿದ್ದು ಓರ್ವ ವಿದ್ಯಾರ್ಥಿಯನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ (uttara kannada) ಜಿಲ್ಲೆಯ ಶಿರಸಿ (sirsi) ತಾಲೂಕಿನ ಬೆಣ್ಣೆ ಹೊಳೆ ಜಲಪಾತದ ಬಳಿ ಇಂದು ಸಂಜೆ ನಡೆದಿದೆ.
Sirsi news: ಬಾಲಕನಮೇಲೆ ಏರ್ ಗನ್ ಫೈರ್| ಪ್ರಕರಣಕ್ಕೆ ಬಿಗ್ ಟ್ಟಿಸ್ಟ್ ನೀಡಿದ ಪೊಲೀಸರಿಂದ ಸತ್ಯ ಬಯಲು
ಹೊಸಪೇಟೆ ಮೂಲದ ಶ್ರೀನಿವಾಸ್ ರಕ್ಷಣೆಗೊಳಗಾದನಾಗಿದ್ದು ,ಹೂವಿನ ಹಡಗಲಿ ಮೂಲದ ರಾಹುಲ್ ಕಾಣೆಯಾದ ವಿದ್ಯಾರ್ಥಿಯಾಗಿದ್ದಾನೆ.
ಶಿರಸಿಯ ಫಾರೆಸ್ಟ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳ ತಂಡ ಬೆಣ್ಣೆಹೊಳೆ ಜಲಪಾತಕ್ಕೆ ಪ್ರವಾಸ ಹೋಗಿದ್ದರು. ಸ್ನಾನ ಮಾಡಿ ಬಟ್ಟೆ ಸರಿಪಡಿಸಿಕೊಳ್ಳುವಾಗ ಶ್ರೀನಿವಾಸ್ ಕಾಲುಜಾರಿ ಬಂಡೆಕಲ್ಲಿನ ಮೇಲೆ ಬಿದ್ದಿದ್ದು ಆತನ ರಕ್ಷಣೆಗಾಗಿ ರಾಹುಲ್ ಧಾವಿಸಿದ್ದನು. ದುರಾದೃಷ್ಟವಶಾತ್ ಇಬ್ಬರೂ ಜಾರಿ ನೀರಿನಲ್ಲಿ ಕೊಚ್ಚಿಹೋಗಿದ್ದರು. ಈವೇಳೆ ಶ್ರೀನಿವಾಸ್ ಜಲಪಾತದ ಕಲ್ಲುಬಂಡೆಯೊಳಗೆ ಸಿಲುಕಿಕೊಂಡಿದ್ದು,ರಾಹುಲ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಹುಡುಕಾಟ ನಡೆಸಿದಾಗ ಶ್ರೀನಿವಾಸ್ ಜಲಪಾತದ ಬಳಿಯ ಕಲ್ಲುಬಂಡೆಯೊಳಗೆ ಸಿಲುಕಿದ್ದು ತಕ್ಷಣ ರಕ್ಷಣೆ ಮಾಡಿದ್ದು ಬೆನ್ನುಮೂಳೆ ಮುರಿದಿದ್ದರಿಂದ ತಕ್ಷಣ ಶಿರಸಿ ಪಂಡಿತ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇನ್ನು ಕಾಣೆಯಾದ ರಾಹುಲ್ ಗಾಗಿ ಶೋಧ ಕಾರ್ಯ ಮುಂದುವರೆದಿದ್ದು ಆತನ ಪತ್ತೆಯಾಗಿಲ್ಲ.
ಬೆಣ್ಣೆ ಹೊಳೆಯು ದಟ್ಟ ಕಾಡಿನ ನಡುವೆ ಇದ್ದು ,ಪ್ರಕೃತಿ ಪ್ರಿಯರನ್ನು ಸೆಳೆಯುವ ಈ ಜಲಪಾತ ಅತೀ ಅಪಾಯಕಾರಿಯಾಗಿದೆ. ಹೀಗಾಗಿ ಮಳೆಗಾಲ ಸಂಪೂರ್ಣ ಮುಗಿಯುವ ವರೆಗೆ ಅರಣ್ಯ ಇಲಾಖೆ ಈ ಭಾಗಕ್ಕೆ ಪ್ರವಾಸಿಗರು ತೆರಳು ನಿರ್ಬಂಧ ವಿಧಿಸಿದೆ.ಹೀಗಿದ್ದರೂ ವೀಕೆಂಡ್ ನಲ್ಲಿ ಪ್ರವಾಸಿಗರು ಈಭಾಗಕ್ಕೆ ತೆರಳಿ ಮೋಜು ಮಸ್ತಿ ಮಾಡುತ್ತಾ ಜೀವಕ್ಕೆ ಕುತ್ತು ತಂದುಕೊಳ್ಳುತಿದ್ದಾರೆ. ಇನ್ನು ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
