Sirsi|ಗುತ್ತಿಗೆದಾರನ ಮನೆಯಲ್ಲಿ ಕಳ್ಳತನ -10 ಲಕ್ಷಕ್ಕೂ ಹೆಚ್ಚು ಮೌಲ್ಯದ ನಗದು ಚಿನ್ನಾಭರಣ ಕಳ್ಳತನ
Sirsi|ಗುತ್ತಿಗೆದಾರನ ಮನೆಯಲ್ಲಿ ಕಳ್ಳತನ -10 ಲಕ್ಷಕ್ಕೂ ಹೆಚ್ಚು ಮೌಲ್ಯದ ನಗದು ಚಿನ್ನಾಭರಣ ಕಳ್ಳತನ
Sirsi (ಅ.06):-ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(sirsi) ಲಯನ್ಸ್ ನಗರದಲ್ಲಿ ಮನೆಯ ಬೀಗ ಮುರಿದು ನಗದು ಲಕ್ಷಾಂತರ ರುಪಾಯಿ ನಗದು ಜಿಲ್ಲಾಭರಣ ದೋಚಿದ ಘಟನೆ ನಡೆದಿದೆ.
ಶಿರಸಿಯ ವೆಂಕಟೇಶ್ ಆನಂದ್ ಕಡೆಮನೆ ಎಂಬ ಗುತ್ತಿಗೆದಾರ ನಿನ್ನೆ ದಿನ ಕುಮಟಾದ ಪತ್ನಿಯ ಮನೆಯಲ್ಲಿನ ವೈಕುಂಠ ಸಮಾರಾಧನೆಗೆ ತೆರೆಳಿದ್ದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲದ್ದನು ಅರಿತ ಕಳ್ಳರು ಮನೆಯ ಬೀಗ ಮುರಿದು ಮನೆಯ ವಾಲ್ ರೂಪ್ ನಲ್ಲಿ ಇದ್ದ ನಾಲ್ಕು ಲಕ್ಷ ನಗದು, 30 ಗ್ರಾಮ್ ತೂಕದ ಮೂರು ಲಕ್ಷ ಮೌಲ್ಯದ ಬಂಗಾರದ ಹಾರ ,20 ಗ್ರಾಮ್ ತೂಕದ ಎರಡು ಲಕ್ಷ ಮೌಲ್ಯದ ಮುತ್ತಿನ ಹಾರ ,15 ಗ್ರಾಮ್ ತೂಕದ 1.50 ಲಕ್ಷ ಮೌಲ್ಯದ ಬಂಗಾರದ ನಕ್ಲೆಸ್,6 ಗ್ರಾಮ್ ತೂಕದ 60 ಸಾವಿರ ಮೌಲ್ಯದ ಬಂಗಾರದ ಉಂಗುರ, 40 ಗ್ರಾಮ್ ತೂಕದ ಮೂರು ಲಕ್ಷ ಮೌಲ್ಯದ ಕಿವಿಯೋಲೆಗಳು ಸೇರಿ ಒಟ್ಟು ಹತ್ತು ಲಕ್ಷದ ನಲವತ್ತು ಸಾವಿರಕ್ಕೂ ಹೆಚ್ಚು ಚಿನ್ನಾಭರಣ,ನಗದು ಕಳ್ಳತನ ಮಾಡಲಾಗಿದೆ.
ಘಟನೆ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.