SIRSI :ಮನೆ ಕಳ್ಳತನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ! ಇವರು ಅಂತಿಂತ ಕಳ್ಳರಲ್ಲ!
Sirsi news 25 October 2024 :- ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯ ಹೊರ ರಾಜ್ಯದಲ್ಲಿ ಕಳ್ಳತನ ,ದರೋಡೆ ಮಾಡಿ ಹಲವು ರಾಜ್ಯದ ,ಜಿಲ್ಲೆಯ ಪೊಲೀಸರಿಗೆ ಬೇಕಿದ್ದ ಉತ್ತರ ಪ್ರದೇಶ ಮೂಲದ ಅಂತರರಾಜ್ಯ ಕಳ್ಳರಿಗೆ ಶಿರಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಶಿರಸಿ ನಗರದ ಶಹರದ ವಿದ್ಯಾನಗರ ಮತ್ತು ಸಹ್ಯಾದ್ರಿ ಕಾಲೋನಿಯಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿದ ಕುರಿತು 2017 ನೇ ಸಾಲಿನಲ್ಲಿ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಸಿಪಿಐ ಗಿರೀಶ್ ಬಿ ,ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮಾನ್ಯ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಶಿರಸಿ ವಿಚಾರಣೆ ಕೈಗೊಂಡು, ಸರಕಾರಿ ಅಭಿಯೋಜಕರಾದ ರಾಜೇಶ್ ಮಳಗಿಕರ್ ಅವರು ಸಮರ್ಥವಾದ ವಾದ ಮಂಡಿಸಿದ್ದರು.
ಇದನ್ನೂ ಓದಿ:-Lokayukta ride|ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಉನ್ನತ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ದಾಳಿ.
ನ್ಯಾಯದೀಶರಾದ ಕಿರಣ ಕಿಣಿ ರವರು ಮಧ್ಯಪ್ರದೇಶದ ಆರೋಪಿಗಳಾದ ಬಹೂದ್ದೂರ್ ಸಿಂಗ್ ಮತ್ತು ಸೂರಬ್ ಇವರಿಗೆ ಒಂದು ಪ್ರಕರಣದಲ್ಲಿ ಜೀವಾವದಿ ಶಿಕ್ಷೆ ಮತ್ತು ಮತ್ತೊಂದು ಪ್ರಕರಣದಲ್ಲಿ 10 ವರ್ಷಗಳ ಕಾಲ ಜೈಲ ಶಿಕ್ಷೆ ನೀಡಿ ಆದೇಶಿಸಿದ್ದಾರೆ.
ಈ ಪ್ರಕರಣದಲ್ಲಿನ ಆರೋಪಿತರು 2019ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಜೈಲ್ಲಿನಲ್ಲಿದ್ದವರು ಅಲ್ಲಿಂದ ಪರಾರಿಯಾಗಿ ತಲೆಮರಿಸಿಕೊಂಡಿದ್ದರು.
ಇದನ್ನೂ ಓದಿ:-Kumta: ಅಬ್ಬರದ ಮಳೆಗೆ ಬೆಳಗಾಗುವುದರೊಳಗೆ ರಸ್ತೆ ತುಂಬ ಕಲ್ಲು!
ತಲೆಮಾರಿಸಿಕೊಂಡಿದ್ದ ಆರೋಪಿತರನ್ನು ಪತ್ತೆ ಮಾಡುವ ಸಲುವಾಗಿ ವಿಶೇಷ ತಂಡ ರಚಿಸಿ ಇವರನ್ನು ಬಂಧಿಸಲಾಗಿದೆ.