Sirsi :ಗಾಂಜಾ ಮಾರಾಟ 4 ವರ್ಷ ಕಠಿಣ ಶಿಕ್ಷೆ ತೀರ್ಪು ನೀಡಿದ ಕೋರ್ಟ
Sirsi :ಗಾಂಜಾ ಮಾರಾಟ 4 ವರ್ಷ ಕಠಿಣ ಶಿಕ್ಷೆ ತೀರ್ಪು ನೀಡಿದ ಕೋರ್ಟ

ಕಾರವಾರ :- ಗಾಂಜಾ ಮಾದಕ ಪದಾರ್ಥ ಸಾಗಾಟ ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಫು ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ (sirsi)ನಡೆದಿದೆ.
ಶಿರಸಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ತೀರ್ಪು ಪ್ರಕಟಿಸಿದ್ದಾರೆ.
ಇದನ್ನೂ ಓದಿ:-Sirsi: 21,18,624 ಲಕ್ಷ ಮೌಲ್ಯದ ಕುಡಿಯುವ ನೀರಿನ ಪೈಪ್ ಕದ್ದ ಕಳ್ಳರು- ದೂರು ದಾಖಲು
ಶಿರಸಿಯ ಹುಲೇಕಲ್ ರಸ್ತೆಯ ನವೀನ್ ರಾಮಚಂದ್ರ ಚೌಹಾಣ ಮತ್ತು ಗಣೇಶನಗರದ ನಿಖಿಲ್ ನಾಗೇಶ್ ಗೌಡ ಎಂಬುವವರಿಗೆ ಶಿಕ್ಷೆ ವಿಧಿಸಲಾಗಿದೆ. ಇವರಿಬ್ಬರು 28-7-2022 ರಂದು ಬೆಳಿಗ್ಗೆ 9-45 ಗಂಟೆಗೆ ನಗರದ ಆನೆ ಹೊಂಡ ಹತ್ತಿರದ ಅರಣ್ಯ ಪ್ರದೇಶದ ಕಚ್ಚಾ ರಸ್ತೆಯಲ್ಲಿ 15 ಸಾವಿರ ರೂ. ಮೌಲ್ಯದ 1.54 ಗ್ರಾಂ ತೂಕದ ಗಾಂಜಾ ಮಾದಕ ಪದಾರ್ಥವನ್ನು ಎಲ್ಲಿಂದಲೋ ಸಾಗಾಟ ಮಾಡಿಕೊಂಡು ಬಂದು ಜನರಿಗೆ ಮಾರಾಟ ಮಾಡಲು ನಿಂತುಕೊಂಡಿರುವಾಗ ಶಿರಸಿ ನಗರ ಠಾಣೆಯ ಪಿ.ಎಸ್.ಐ.ರಾಜಕುಮಾರ ಉಕ್ಕಲಿ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ ಗಾಂಜಾವನ್ನು ಜಪ್ತುಪಡಿಸಿಕೊಂಡು ಆರೋಪಿತರನ್ನು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ:-Sirsi ಮಗಳ ಮದುವೆಗೆ ವಿರೋಧ ತಂದೆಯಿಂದಲೇ ಮಗಳು ಅಳಿಯನಿಗೆ ಚಾಕು ಇರಿತ
ತನಿಖೆ ಕೈಗೊಂಡ ಪಿಎಸ್‌ಐ ರತ್ನಾ ಎಸ್.ಕೆ ಅವರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿ ನ್ಯಾಯಾಲಯವು ಆರೋಪಿತರಿಗೆ 4 ವರ್ಷ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ತನುಜಾ.ಬಿ.ಹೊಸಪಟ್ಟಣ ವಾದ ಮಂಡಿಸಿದರು.