Sirsi ಮಗಳ ಮದುವೆಗೆ ವಿರೋಧ ತಂದೆಯಿಂದಲೇ ಮಗಳು ಅಳಿಯನಿಗೆ ಚಾಕು ಇರಿತ
Sirsi ಮಗಳ ಮದುವೆಗೆ ವಿರೋಧ ತಂದೆಯಿಂದಲೇ ಮಗಳು ಅಳಿಯನಿಗೆ ಚಾಕು ಇರಿತ.

ಕಾರವಾರ :- ಪ್ರೀತಿಸಿ ಮದುವೆಯಾದ ಮಗಳು ಅಳಿಯನಿಗೆ ಚಾಕು ಇರದು ತಂದೆಯೋ ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirs) ತಾಲೂಕಿನ ರಂಗಾಪುರದಲ್ಲಿ ನಡೆದಿದೆ.
ಬದನಗೋಡಿನ ಶಂಕರ ಕಮ್ಮಾರ ಮಗಳು ,ಅಳಿಯನನ್ನು ಹತ್ಯೆಗೆ ಯತ್ನಿಸಿ ಆತ್ಮಹತ್ಯೆ ಗೆ ಪ್ರಯತ್ನಿಸಿದ ತಂದೆಯಾಗಿದ್ದು ಶಿರಸಿ ತಾಲೂಕಿನ ಬದನಗೋಡಿನ ಕವನ , ರಂಗಾಪುರದ ಮನೋಜ್ ಚಾಕು ಇರಿತಕ್ಕೊಳಗಾದವರಾಗಿದ್ದಾರೆ. ಬದನಗೋಡಿನ ಕವನ ಪೋಷಕರಿಗೆ ತಿಳಿಸದೇ ರಂಗಾಪುರದ ಮನೋಜ್ ಎಂಬಾತನನ್ನು ಕಳೆದ ಮೂರು ತಿಂಗಳ ಹಿಂದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು.

ಕೆಳಜಾತಿಯ ಯುವಕ ಎಂದು ಶಂಕರ ಕಮ್ಮಾರ ವಿರೋಧ ವ್ಯಕ್ತಪಡಿಸಿದ್ದನು. ಆದ್ರೆ ಯುವಕನ ಮನೆಗೆ ಮಗಳನ್ನು ನೋಡುವ ನೆಪದಲ್ಲಿ ಬಂದು ನಿಮ್ಮ ಮದುವೆಗೆ ಸಾಕ್ಷಿ ಹಾಕಿದವರ ಹೆಸರು ಹೇಳುವಂತೆ ಮಗಳಮೇಲೆ ಹಲ್ಲೆ ಮಾಡಿದ್ದಾನೆ.
ಇದನ್ನೂ ಓದಿ:-Sirsi ಹತ್ತು ವರ್ಷದ ಪ್ರೀತಿಗೆ ಕೈಕೊಟ್ಟ ಯುವತಿ- ಮದುವೆಯಾದ ಹುಡಗನನ್ನು ಬಸ್ ನಲ್ಲಿಯೇ ಇರಿದು ಕೊಂದ ಪಾಗಲ್ ಪ್ರೇಮಿ
ಈವೇಳೆ ಮಗಳು ಹೆಸರು ಹೇಳದೇ ಇದ್ದುದಕ್ಕೆ ಹತ್ಯೆ ಮಾಡಲು ತಂದಿದ್ದ ಚಾಕು ತೆಗೆದು ಮಗಳ ಕುತ್ತಿಗೆ ,ಕೈಗೆ ತಿವಿದಿದ್ದು ಇದನ್ನು ಬಿಡಿಸಲು ಬಂದ ಅಳಿಯನಿಗೂ ಎದೆ ಹಾಗೂ ಕೈಗೆ ಚಾಕು ಇರಿದಿದ್ದಾನೆ.
ಇದನ್ನೂ ಓದಿ:-Sirsi:ಮಹಿಳೆ ಮೇಲೆ ಮಚ್ಚು ಬೀಸಿದವನಿಗೆ 10 ವರ್ಷ ಜೈಲು ಶಿಕ್ಷೆ.
ನಂತರ ಅಲ್ಲಿಂದ ತಪ್ಪಿಸಿಕೊಂಡು ತನ್ನೂರಿಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಮೂವರೂ ಬದುಕುಳಿದಿದ್ದು ಕವನ ಹಾಗೂ ಮನೋಜ್ ಶಿರಸಿಯ ಪಂಡಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು , ಶಂಕರ್ ಕಮ್ಮಾರನನ್ನು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಘಟನೆ ಸಂಬಂಧ ಕವನ ನೀಡಿದ ದೂರಿನ ಆಧಾರದಲ್ಲಿ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.