Sirsi : ಬೈಕ್ ಸವಾರನ ಬಳಿ ಲಂಚ ಸ್ವೀಕರಿಸಿದ ಶಿರಸಿ ನ್ಯೂ ಮಾರ್ಕೇಟ್ ಠಾಣೆ ಹೆಡ್ ಕಾನಸ್ಟೇಬಲ್ ! ವಿಡಿಯೋ ವೈರಲ್
Sirsi : ಬೈಕ್ ಸವಾರನ ಬಳಿ ಲಂಚ ಸ್ವೀಕರಿಸಿದ ಶಿರಸಿ ನ್ಯೂ ಮಾರ್ಕೇಟ್ ಠಾಣೆ ಹೆಡ್ ಕಾನಸ್ಟೇಬಲ್ ! ವಿಡಿಯೋ ವೈರಲ್

ಕಾರವಾರ :- ವಾಹನ ಸವಾರನ ಬಳಿ ಹೆಲ್ಮೆಟ್ ಹಾಕಿಲ್ಲ ಎಂದು ದಂಡ ವಿಧಿಸುವ ಬೆದರಿಕೆಯೊಡ್ಡಿ ಲಂಚ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯಲ್ಲಾಪುರ ನಾಕಾದಲ್ಲಿ ನಡೆದಿದ್ದು ಸಹ ಸವಾರನ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು ಇದೀಗ ವೈರಲ್ ಆಗುತ್ತಿದೆ.
ಶಿರಸಿಯ(Sirsi) ಅಮಿನಳ್ಳಿ ಭಾಗದಿಂದ ಹೆಲ್ಮೆಟ್ ಧರಿಸದೇ ಬಂದ ಸವಾರನೋರ್ವನನ್ನು ಯಲ್ಲಾಪುರ ನಾಕಾದಲ್ಲಿ ತಪಾಸಣೆಗೆ ನಿಂತಿದ್ದ ಶಿರಸಿಯ ನ್ಯೂ ಮಾರ್ಕೇಟ್ ಠಾಣೆಯ ಹೆಡ್ ಕಾನಸ್ಟೇಬಲ್ ಚಂದ್ರಶೇಖರ್ ,ಅಮಿನಳ್ಳಿ ಕಡೆಯಿಂದ ಬರುತಿದ್ದ ಸವಾರನನ್ನು ತಡೆದು ಹೆಲ್ಮೆಟ್ ಹಾಕದ ಕುರಿತು ಪ್ರಶ್ನಿಸಿದ್ದಾರೆ. ಒಂದಿಷ್ಟು ಹಿತನುಡಿ ಹೇಳಿ ನಂತರ ದಂಡ ವಿಧಿಸುವುದಾಗಿ ಹೇಳಿ ಆತನ ಬಳಿ ಹಣ ಪಡೆದಿದ್ದು ,ಈ ದೃಶ್ಯವನ್ನು ಸಹ ಸವಾರ ತನ್ನ ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಘಟನೆ ಮೂರು ದಿನದ ಹಿಂದೆ ನಡೆದಿದ್ದು ಎನ್ನಲಾಗಿದ್ದು ಇದರ ವಿಡಿಯೋ ಈ ಕೆಳಗಿನಂತಿದೆ.