ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi: ಅಂದರ್ ಬಾಹರ್ ಕೌಶಲ್ಯದ ಆಟ-ಪ್ರಕರಣದ FIR ರದ್ದು ಪಡಿಸಿದ ಹೈಕೋರ್ಟ 

ಧಾರವಾಡ/ಶಿರಸಿ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi)ತಾಲೂಕಿನ ಇಟಗುಳಿಯ ಮನೆಯೊಂದರಲ್ಲಿ ಇಸ್ಪೀಟ್ ಆಟ ಆಡುತಿದ್ದ ಮನೆಯ ಮೇಲೆ ಎಪ್ರಿಲ್ 9 ರಂದು ಶಿರಸಿ ಗ್ರಾಮೀಣ ಠಾಣೆ ಪಿ.ಎಸ್.ಐ ಸಂತೋಷ್ ನೇತ್ರತ್ವದಲ್ಲಿ ದಾಳಿ ನಡೆಸಿ 13 ಜನರ ಮೇಲೆ ಅಂದರ್ ಬಾಹರ್ ಆಟ ಆಡುತಿದ್ದ ಆರೋಪದಡಿ ಪ್ರಕರಣ ದಾಖಲಿಸಿದ್ದರು.
07:41 PM May 22, 2025 IST | ಶುಭಸಾಗರ್
ಧಾರವಾಡ/ಶಿರಸಿ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi)ತಾಲೂಕಿನ ಇಟಗುಳಿಯ ಮನೆಯೊಂದರಲ್ಲಿ ಇಸ್ಪೀಟ್ ಆಟ ಆಡುತಿದ್ದ ಮನೆಯ ಮೇಲೆ ಎಪ್ರಿಲ್ 9 ರಂದು ಶಿರಸಿ ಗ್ರಾಮೀಣ ಠಾಣೆ ಪಿ.ಎಸ್.ಐ ಸಂತೋಷ್ ನೇತ್ರತ್ವದಲ್ಲಿ ದಾಳಿ ನಡೆಸಿ 13 ಜನರ ಮೇಲೆ ಅಂದರ್ ಬಾಹರ್ ಆಟ ಆಡುತಿದ್ದ ಆರೋಪದಡಿ ಪ್ರಕರಣ ದಾಖಲಿಸಿದ್ದರು.
Karnataka court news kanndavani

Sirsi: ಅಂದರ್ ಬಾಹರ್ ಕೌಶಲ್ಯದ ಆಟ-ಪ್ರಕರಣದ FIR ರದ್ದು ಪಡಿಸಿದ ಹೈಕೋರ್ಟ 

Advertisement

ಧಾರವಾಡ/ಶಿರಸಿ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi) ತಾಲೂಕಿನ ಇಟಗುಳಿಯ ಮನೆಯೊಂದರಲ್ಲಿ ಇಸ್ಪೀಟ್ ಆಟ ಆಡುತಿದ್ದ ಮನೆಯ ಮೇಲೆ ಎಪ್ರಿಲ್ 9 ರಂದು ಶಿರಸಿ ಗ್ರಾಮೀಣ ಠಾಣೆ ಪಿ.ಎಸ್.ಐ ಸಂತೋಷ್ ನೇತ್ರತ್ವದಲ್ಲಿ ದಾಳಿ ನಡೆಸಿ 13 ಜನರ ಮೇಲೆ ಅಂದರ್ ಬಾಹರ್ ಆಟ ಆಡುತಿದ್ದ ಆರೋಪದಡಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣ ಸಂಬಂಧ ಇಟಗುಳಿ ಗ್ರಾಮದ ರಾಮಚಂದ್ರ ವಿಠಲ್ ಹೆಗಡೆರವರು ಪೊಲೀಸ್ ಇಲಾಖೆ ಕ್ರಮವನ್ನು ಪ್ರಶ್ನಿಸಿ ಧಾರವಾಡ ಹೈಕೊರ್ಟ ನಲ್ಲಿ  ಪ್ರಶ್ನಿಸಿದ್ದರು. ಆರೋಪಿ ಪರವಾಗಿ ಧಾರವಾಡ ಹೈಕೋರ್ಟ ನ ವಕೀಲ ಸೌರಭ ಹೆಗಡೆ, ಹೂಡ್ಲಮನೆ ಯವರು ವಾದ ಮಂಡಿಸಿದ್ದರು.

ಇದನ್ನೂ ಓದಿ:-Sirsi:20 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಲೆಕ್ಕಾಧಿಕಾರಿ

Advertisement

ಈ ಕುರಿತು ಧಾರವಾಡ ಪೀಠವು ವಾದ ವಿವಾಧವನ್ನು ಆಲಿಸಿ ಅಂದರ್ ಬಾಹರ್ ಆಡುವುದು ಕೌಶಲ್ಯದ ಆಟವಾಗಿದೆ.ಅಪರಾಧದ ಅಗತ್ಯ ಅಂಶಗಳನ್ನು ಪತ್ತೆಹಚ್ಚಲಾಗಿಲ್ಲ ಹಾಗೂ ಪೊಲೀಸರು ಇದನ್ನು ದೃಢಪಡಿಸುವಲ್ಲಿ ವಿಫಲರಾಗಿದ್ದಾರೆ. ಅಂದರ್ ಬಾಹರ್ ಆಟವನ್ನು ಕಾರ್ಡಗಳ ಆಧಾರದಲ್ಲಿ ಹೇಗೆ ಆಡುತ್ತಾರೆ ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ. ಕೌಶಲ್ಯದ ಆಟವನ್ನು ಜೂಜಾಟದ ಆಟವೆಂದು ಪರಿಗಣನೆ ಮಾಡಲಾಗುವುದಿಲ್ಲ. 1963 ರ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 79 ಮತ್ತು 80 ರ ಅಡಿಯಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಅಪರಾಧವನ್ನು ಮಾಡಿಲ್ಲ,ಅಪರಾಧವನ್ನು ದೃಢಪಡಿಸಲು ಯಾವುದೇ ಸಾಕ್ಷಾಧಾರಗಳಿಲ್ಲ ಎಂಬುದನ್ನು ಉಲ್ಲೇಖಿಸಿದ್ದು ಇಟಗುಳಿ ಪ್ರಕರಣದಲ್ಲಿ ದಾಖಲಾಗಿದ್ದ FIR ರನ್ನು ಹೈ ಕೋರ್ಟ ರದ್ದು ಮಾಡಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರ ವಾದ ಮಂಡಿಸಿದ ವಕೀಲ ಸೌರಭ ಹೆಗಡೆ, ಹೂಡ್ಲಮನೆಯವರು ಪೊಲೀಸರು ದಾಖಲಿಸಿದ ಎಫ್.ಐ.ಆರ್ ಕಾನೂನು ಬಾಹಿರ ಎಂದು ವಾಧಿಸಿದ್ದರು. ಇದಲ್ಲದೇ ಅಂದರ್ ಬಾಹರ್ ಹಾಗೂ ರಮ್ಮಿ ಆಟವು ಅಪರಾಧವಾಗಿಲ್ಲ ಎಂಬುದನ್ನು ಸಹ ಪೀಠ ಅಭಿಪ್ರಾಯಿಸಿದೆ.

ಶಿರಸಿ,ಸಿದ್ದಾಪುರ ಭಾಗದಲ್ಲಿ ಧಾರ್ಮಿಕ ಕಾರ್ಯ ಹಾಗೂ ವಿಶೇಷ ದಿನಗಳಲ್ಲಿ ಮನೆಯಲ್ಲಿ ಹವ್ಯಾಸಕ್ಕಾಗಿ ಸಂಬಂಧಿಕರ ನಡುವೆ ಇಸ್ಪೀಟ್ ಆಟವನ್ನು ಆಡುವುದು ರೂಢಿಯಲ್ಲಿದೆ. ಆದರೇ ಪೊಲೀಸ್ ಇಲಾಖೆ ಜೂಜಾಟ ಆಡದೇ ಇದ್ದರು ಮನೆಗಳಿಗೆ ದಾಳಿ ನಡೆಸಿ ಇಸ್ಪೀಟ್ ಆಟ ಆಡುವವರ ವಿರುದ್ಧ ಪ್ರಕರಣ ದಾಖಲಿಸುತಿದ್ದು ,ಸಮಯ ಕಳಯಲು ಆಡುವ ಇಸ್ಪೀಟ್ ಆಟ ಜೂಜಾಟವೆಂಬಂತೆ ಬಿಂಬಿಸುತ್ತಿದೆ.

GILANI market karwar- ಮಕ್ಕಳ ಪುಸ್ತಕಗಳು,ದಿನ ಬಳಕೆ ವಸ್ತುಗಳ MRP ದರಕ್ಕಿಂದ ಕಡಿಮೆ ದರದಲ್ಲಿ ಲಭ್ಯ. ಇಂದೇ ಬೇಟಿಕೊಡಿ. KSRTC ಬಸ್ ನಿಲ್ದಾಣದ ಹಿಂಭಾಗ , ಬ್ರಾಹ್ಮಣ ಗಲ್ಲಿ ಕಾರವಾರ

ಆದರೇ ಆನ್ ಲೈನ್ ನಲ್ಲಿ ರಮ್ಮಿ ಸರ್ಕಲ್ , ಜೂಜಾಟ ಗಳು ನಡೆದರೂ ,ಟಿವಿಯಲ್ಲಿ ಜಾಯಿರಾತುಗಳು ವಿಜ್ರಂಭಿಸಿದರೂ ಇವುಗಳ ಬಗ್ಗೆ ಕ್ರಮಿರದೇ ಸರ್ಕಾರವೇ ಅನುಮತಿ ನೀಡುತ್ತಿರುವಾಗ  ಮನೆಯಲ್ಲಿ ತಮ್ಮವರ ಜೊತೆ ಸಮಯ ಕಳೆಯಲು ಇಸ್ಪೀಟ್ ಆಡುವವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸುತ್ತಿರುವುದು ವಿಷಾಧನೀಯ.

ಪ್ರಕೃತಿ ಮೆಡಿಕಲ್ ,ಕಾರವಾರ.

 

Advertisement
Tags :
Court orderDarwad courtFirgamblingKarnatakaondar baharrammiSirsi newsಹೈಕೋರ್ಟ
Advertisement
Next Article
Advertisement