Sirsi| ಅಕ್ರಮ ನಾಟ ವಶ -ಆರೋಪಿ ಬಂಧನ
Sirsi| ಅಕ್ರಮ ನಾಟ ವಶ -ಆರೋಪಿ ಬಂಧನ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಚಿಪಗಿ ಗ್ರಾಮದ ಅರಣ್ಯ ಪ್ರದೇಶದಲ್ಲಿ 2 ಸಿಸಂ ಮರ ಕಡಿದು ನಾಟ ಮತ್ತು ಜಲಾವು ತಯಾರಿಸಿ ಅನಧಿಕೃತವಾಗಿ ದಾಸ್ತಾನಿಟ್ಟ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
Sirsi |ಶಿರಸಿ ನಗರ ಧೋಳೋ ಧೂಳು -ಕೊಡಹಿಡಿದು ರಸ್ತೆಗೆ ನೀರು ಹಾಕಿದ ಜನ!
ತಾಲೂಕಿನ ಚಿಪಗಿಯ ವಿನಾಯಕ ಸುಬ್ರಾಯ ಹೆಗಡೆ ಬಂಧಿತ ವ್ಯಕ್ತಿ. ಈತ ಚಿಪಗಿ ಗ್ರಾಮದ ಅರಣ್ಯ ಸರ್ವೆ ನಂ 65ರಲ್ಲಿ ಅನಧಿಕೃತವಾಗಿ 2 ಸಿಸಂ ಜಾತಿಯ ಮರವನ್ನು ಕಡಿದು ನಾಟ ಮತ್ತು ಜಲಾವು ತಯಾರಿಸಿ ದಾಸ್ತಾನ ಇಟ್ಟಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಸೆ.15 ರಂದು ಬೆಳಿಗ್ಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸಿಸಂ ಜಾತಿಯ 9 ನಗಗಳಿಂದ 0.942 ಕ್ಯೂ.ಮೀ
ಹಾಗೂ 1.250 ಕ್ಯೂ.ಮೀ ಜಲಾವುವನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ನಿಂಗಾಣಿ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿ ಗಿರೀಶ ನಾಯ್ಕ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಐಶ್ವರ್ಯ ನಾಯಕ, ಗಸ್ತು ವನಪಾಲಕರಾದ ಮಂಜುನಾಥ ಶಿಗ್ಲಿ, ಗುಡ್ಡಪ್ಪ ಸೊಪ್ಪಿನ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.