For the best experience, open
https://m.kannadavani.news
on your mobile browser.
Advertisement

ನಾನು ಚುನಾವಣೆ ರಾಜಕೀಯದಿಂದ ನಿವೃತ್ತಿ ಪಡೆದಿದ್ದೇನೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ದಿಸುವುದಿಲ್ಲ-ಮುಖ್ಯಮಂತ್ರಿ ಚಂದ್ರು

08:43 PM Dec 13, 2022 IST | ಶುಭಸಾಗರ್
ನಾನು ಚುನಾವಣೆ ರಾಜಕೀಯದಿಂದ ನಿವೃತ್ತಿ ಪಡೆದಿದ್ದೇನೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ದಿಸುವುದಿಲ್ಲ ಮುಖ್ಯಮಂತ್ರಿ ಚಂದ್ರು

ಶಿರಸಿ :- ನಾನು ಚುನಾವಣೆ ರಾಜಕೀಯದಿಂದ ನಿವೃತ್ತಿ ಪಡೆದಿದ್ದೇನೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ದಿಸುವುದಿಲ್ಲ ಎಂದು ಶಿರಸಿಯಲ್ಲಿ ಆಮ್ಮ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವಿಧಾನಸಭಾ ಚುನಾವಣೆಯಲ್ಲಿ ಆಪ್ ಪ್ರಣಾಳಿಕೆ ಬದಲು ಗ್ಯಾರಂಟಿ ಕಾರ್ಡ ನೀಡಿ ಮತ ಯಾಚಿಸಲಿದೆ.
ಕಾಂಗ್ರೆಸ್ ನಶಿಸಿದೆ,ಜೆಡಿಎಸ್ ಕೆಲವೇ ಸೀಟು ಗೆಲ್ಲಲು ಹವಣಿಸುತ್ತಿದೆ.‌ರಾಜ್ಯದಲ್ಲಿ ಆಪ್ ಗೆ ಬಿಜೆಪಿ ಮಾತ್ರ ನೇರ ಎದುರಾಳಿ ಎಂದರು.

Advertisement

ಜನತಾದಳ,ಕಾಂಗ್ರೆಸ್,ಬಿಜೆಪಿ ಎಂಬ
ಜೆ.ಸಿ.ಬಿ. ಓಡಿಸಲು ಪೊರಕೆ ಹಿಡಿದಿದ್ದೇವೆ.‌ಅಪ್ ಪರ ಅಲೆ ಗುಪ್ತಗಾಮಿನಿಯಾಗಿದೆ.ಚುನಾವಣೆ ವೇಳೆ ಅಪ್ಪಳಿಸಲಿದೆ ಎಂದರು. ಇನ್ನು ಜನವರಿ ಎರಡನೇ ವಾರ ಅರವಿಂದ್ ಕೇಜ್ರಿವಾಲ್ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.‌ಅವರ ಪ್ರವಾಸದ ನಂತರ ಎಲ್ಲಾ 224 ಕ್ಷೇತ್ರಗಳ ಅಭ್ಯರ್ಥಿ ನಿರ್ದರಿಸಲಾಗುವುದು‌.
ಅಪರಾಧ ಉಳ್ಳವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುತ್ತೇವೆ, ಮುಖ್ಯಮಂತ್ರಿಯನ್ನು ಸಹ ಇದರ ವ್ಯಾಪ್ತಿಗೆ ತರುತ್ತೇವೆ ಎಂದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ