Sirsi :ನೇಹಾ ಹೀರೇಮಠ್ ಹತ್ಯೆ ವಾರ್ಷಿಕ ಶ್ರದ್ಧಾಂಜಲಿ ದಿನದಂದು 1000 ಮಹಿಳೆಯರಿಗೆ ತ್ರಿಶೂಲ ದೀಕ್ಷೆ.
ನೇಹಾ ಹೀರೇಮಠ್ ಹತ್ಯೆ ವಾರ್ಷಿಕ ಶ್ರದ್ಧಾಂಜಲಿ ದಿನದಂದು 1000 ಮಹಿಳೆಯರಿಗೆ ತ್ರಿಶೂಲ ದೀಕ್ಷೆ.
ಕಾರವಾರ:- ನೇಹಾ ಹೀರೇಮಠ್ ವಾರ್ಷಿಕ ಶ್ರದ್ಧಾಂಜಲಿ ದಿನದಂದು 1000 ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲು ಶ್ರೀರಾಮ ಸೇನೆ ನಿರ್ಧಾರ ಮಾಡಿದೆ ಎಂದು ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ (sirsi) ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಎಂಬುವವರ ಮನೆಯಲ್ಲಿ ಲವ್ ಜಿಹಾದ್ ಕುರಿತ ಎರಡನೇ ಆವೃತ್ತಿಯ ಪುಸ್ತಕ ಬಿಡುಗಡೆ ಮಾಡಿದ ಮುತಾಲಿಕ್ ಮಾಧ್ಯಮಗಳ ಜೊತೆ ಮಾತನಾಡಿದರು.
ಹುಬ್ಬಳ್ಳಿಯ (Hubli) 19 ವರ್ಷದ ನೇಹಾ ಹೀರೇಮಠ್ ಎಂಬ ಅಮಾಯಕ ಹುಡುಗಿಯನ್ನು ಕೊಲ್ಲಲಾಗಿತ್ತು,ಕಾಲೇಜು ಕ್ಯಾಂಪಸ್‌ನಲ್ಲಿ 27 ಬಾರಿ ಚಾಕು ಇರಿದು ನೇಹಾ ಹೀರೇಮಠ್ ಎಂಬಾಕೆಯನ್ನು ಕೊಲ್ಲಾಗಿತ್ತು,ಕೇಂದ್ರದ ಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿ ಕೂಡಾ ಮೃತಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಮೂರೇ ತಿಂಗಳಲ್ಲಿ ಪ್ರಕರಣ ಬಗೆಹರಿಸಿ, ಆರೋಪಿಗೆ ಶಿಕ್ಷೆ ಕೊಡಿಸ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿಕೆ ನೀಡಿದ್ರು,ಪ್ರಕರಣಕ್ಕೆ 10-11 ತಿಂಗಳು ಕಳೆದು ಎಪ್ರಿಲ್ 18ಕ್ಕೆ ಒಂದು ವರ್ಷವಾಗುತ್ತದೆ.ಸಿದ್ಧರಾಮಯ್ಯನವರು ಹಿಂದೂ ಹೆಣ್ಣುಮಕ್ಕಳ ಬಗ್ಗೆ ಅಥವಾ ಈ ರೀತಿ ಕೊಲೆಗಳ ಬಗ್ಗೆ ಯಾರ ಪರವಾಗಿದ್ದೀರಾ ನೀವು ಅಂತಾ ಗೊತ್ತಾಗ್ತಿಲ್ಲ .ಕೊಲೆಗಳ ಪರವಾಗಿದ್ದೀರಾ ಅಥವಾ ಕೊಲೆಗಟುಕರ ಪರವಾಗಿದ್ದೀರಾ..?ಸಿಎಂ ಸಿದ್ಧರಾಮಯ್ಯನವರಿಗೆ ಹೇಳಿಕೆಗೆ ಬದ್ಧತೆ ಇರಬೇಕು, ಏನಾದ್ರೂ ಬೊಗಳಿ ಹೋಗೋದಲ್ಲ,ಏನೋ ಹೇಳಿ ಹೋಗೋದಲ್ಲ, ರಾಜಕಾರಣ ಬೇರೆ, ಈ ವಿಷಯ ಬೇರೆ.

ಸಿಎಂ ಸಿದ್ಧರಾಮಯ್ಯನವರು ಹೇಳಿದ ಮಾತು ನಡೆಸಿಕೊಂಡಿಲ್ಲ, ಏನೂ ಆಗಿಲ್ಲ.ನಾವು ಎಪ್ರಿಲ್ 18ರಂದು ನೇಹಾ ಹೀರೇಮಠ್ ವಾರ್ಷಿಕ ಶ್ರದ್ಧಾಂಜಲಿ ಹಾಗೂ 1000 ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡ್ತೇವೆ.
ಒಂದು ಚಾಲೆಂಜ್ ಮಾಡ್ತೇವೆ, ಇನ್ಮೇಲೆ ಮಹಿಳೆಯರ ಬಗ್ಗೆ ಕೆಟ್ಟ ಅಪಪ್ರಚಾರ, ಅಪಮಾನ, ಅತ್ಯಾಚಾರ ಹಾಗೂ ಇನ್ನೇನಾದ್ರೂ ಆದ್ರೆ ಅದೇ ತ್ರಿಶೂಲದಿಂದ ಉತ್ತರ ಕೊಡಲಾಗುತ್ತೆ.ಇದೇ ಉದ್ಧೇಶದಿಂದ ಮಹಿಳೆಯರ ಸ್ವಯಂ ರಕ್ಷಣೆಗಾಗಿ, ಧೈರ್ಯ ತುಂಬಲು 1000 ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡುತಿದ್ದೇವೆ.
ಅದೇ ದಿನ ಕಿತ್ತೂರು ರಾಣಿ ಚೆನ್ನಮ್ಮನ 200 ವರ್ಷದ ಜಯಂತಿ ಆಚರಣೆಯಿದೆ, ರಾಣಿ ಅಬ್ಬಕ್ಕನ 500 ವರ್ಷದ ಜಯಂತಿಯೂ ಇದೆ.ಎಲ್ಲರಿಗೂ ಆತ್ಮಸ್ಥೈರ್ಯ, ಧೈರ್ಯ ನೀಡಲೆಂದೇ ಎಪ್ರಿಲ್ 18ರಂದು ತ್ರಿಶೂಲ ದೀಕ್ಷೆ ನೀಡಲಾಗುತ್ತಿದೆ.

2019, 2020 ಹಾಗೂ 2021ರಲ್ಲಿ ಇಡೀ ದೇಶದಲ್ಲಿ 13 ಲಕ್ಷ ಹುಡುಗಿಯರು ಕಾಣೆಯಾಗಿದ್ದಾರೆ.ಅದರಲ್ಲಿ ಲವ್ ಜಿಹಾದ್ ಪ್ರಕರಣ ಬಹಳ ದೊಡ್ಡ ಪ್ರಮಾಣದಲ್ಲಿದೆ.ಈ ಹಿನ್ನೆಲೆ ದೇಶದಲ್ಲಿ ಮೊದಲ ಬಾರಿಗೆ ಲವ್ ಜಿಹಾದ್ ಶಬ್ದ ಹಾಗೂ ಪುಸ್ತಕ ಶ್ರೀರಾಮ ಸೇನೆಯಿಂದಲೇ ಪ್ರಾರಂಭವಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಎರಡನೇ ಆವೃತ್ತಿಯ ಪುಸ್ತಕ ನಾವು ಬಿಡುಗಡೆ ಮಾಡುತಿದ್ದೇವೆ ಎಂದ ಪ್ರಮೋದ್ ಮುತಾಲಿಕ್ ಹೇಳಿದರು.