ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi : ಕವಿ ಹೃದಯದ ಪೊಲೀಸ್ ಅಧಿಕಾರಿಗೆ ಮುಖ್ಯಮಂತ್ರಿ ಪದಕ

ಶಿರಸಿ :ಸರಳ ವ್ಯಕ್ತಿತ್ವ,ಕವಿ ಹೃದಯಿ ಶಿರಸಿಯ ನಗರ ಠಾಣೆ ಪಿ.ಎಸ್.ಐ ನಾಗಪ್ಪ .ಬಿ ರವರಿಗೆ ಪ್ರತಿಷ್ಟಿತ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.
11:17 PM Mar 20, 2025 IST | ಶುಭಸಾಗರ್

Sirsi : ಕವಿ ಹೃದಯದ ಪೊಲೀಸ್ ಅಧಿಕಾರಿಗೆ ಮುಖ್ಯಮಂತ್ರಿ ಪದಕ

Advertisement

ಶಿರಸಿ :ಸರಳ ವ್ಯಕ್ತಿತ್ವ,ಕವಿ ಹೃದಯಿ ಶಿರಸಿಯ ನಗರ ಠಾಣೆ ಪಿ.ಎಸ್.ಐ ನಾಗಪ್ಪ .ಬಿ ರವರಿಗೆ ಪ್ರತಿಷ್ಟಿತ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನವರಾಗಿರುವ ನಾಗಪ್ಪ ರವರು ಗುಲ್ಬರ್ಗದಲ್ಲಿ ಪಿಎಸ್.ಐ ಆಗಿ ಆಯ್ಕೆಗೊಂಡ ಬಳಿಕ ಮೊದಲು ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರ ಠಾಣೆಯ ಪಿಎಸ್.ಐ ಆಗಿ ಸೇವೆ ಸಲ್ಲಿಸಿದರು.

ನಂತರ ಶಿರಸಿ ಮಾರ್ಕೆಟ್ ಠಾಣೆಯ ಪಿಎಸ್.ಐ  ಆಗಿ ತಮ್ಮ  ಜನಸ್ನೇಹಿ ಪ್ರವೃತ್ತಿಯಿಂದ ಜನರಲ್ಲಿ ಗುರುತಿಸಿಕೊಂಡ ಇವರು ಅಪಾರ ಜನ ಮೆಚ್ಚಿಗೆಯ ಪೊಲೀಸ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Advertisement

ನಂತರ ಕಾರವಾರಕ್ಕೆ ವರ್ಗಾವಣೆಗೊಂಡು ಇಲ್ಲಿಯೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.ಇದೀಗ ಪುನಃ ಶಿರಸಿ ನಗರ ಠಾಣೆಗೆ ವರ್ಗಾವಣೆಗೊಂಡು ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:-Sirsi | ಶ್ರೀಗಂಧ ಕಳ್ಳತನ ಮಾಲು ಸಮೇತ ಮೂವರ ಬಂಧನ

ಉತ್ತಮ ಹಾಡುಗಾರ,ಕವಿ ,ಲೇಖಕರಾಗಿರುವ ಇವರು ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡುತಿದ್ದು ವೃತ್ತಿ ಜೊತೆ ಸಾಹಿತ್ಯದಲ್ಲಿಯೂ ಚಾಪು ಮೂಡಿಸುತಿದ್ದಾರೆ.ಇವರ ಲೇಖನಗಳು ಹಲವು ಪತ್ರಿಕೆಗಳಲ್ಲೂ ಪ್ರಕಟವಾಗಿವೆ.

ಪಿ.ಎಸ್.ಐ  ನಾಗಪ್ಪ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿರುವುದಕ್ಕೆ ಇಲಾಖೆಯ ಹಿರಿಯ,ಕಿರಿಯ ಅಧಿಕಾರಿಗಳು,ಸಿಬ್ಬಂಧಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
Tags :
Chief Minister's MedalKarnatakaPSI NagappaSirsi newsUttara kannda
Advertisement
Next Article
Advertisement